ಪಂದ್ಯದ ಆರಂಭದ ಮೊದಲ ಬಾಲ್'ನಲ್ಲಿಯೇ ಕನ್ನಡಿಗ ಕೆ.ಎಲ್.ರಾಹುಲ್ ಲಕ್ಮಲ್'ಗೆ ಔಟಾದರು.

ಕೋಲ್ಕೊತ್ತಾ(ನ.16): ಭಾರತ ಹಾಗೂ ಶ್ರೀಲಂಕಾ ನಡುವಿನ ಮೊದಲನೆ ಟೆಸ್ಟ್'ನ ಮೊದಲ ದಿನದ ಆಟ ಬಹುತೇಕ ಮಳೆಯಲ್ಲಿ ಅಂತ್ಯಗೊಂಡಿದೆ.

ಮಳೆಯಿಂದಾಗಿ ಈಡನ್ ಗಾರ್ಡ'ನ್'ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಭಾರತ ಇಡೀ ದಿನ ಆಡಿದ್ದು ಕೇವಲ 11.5 ಓವರ್ ಮಾತ್ರ. ಮಧ್ಯಾಹ್ನ 1 ಗಂಟೆಯ ಪಂದ್ಯ ಶುರುವಾಗಿ ಶ್ರೀಲಂಕಾ ನಾಯಕ ದಿನೇಶ್ ಚಂಡಿಮಾಲ್ ಟಾಸ್ ಗೆದ್ದು ಕೊಹ್ಲಿ ಬಳಗವನ್ನು ಬ್ಯಾಟಿಂಗ್'ಗೆ ಇಳಿಸಿದರು.

ಪಂದ್ಯದ ಆರಂಭದ ಮೊದಲ ಬಾಲ್'ನಲ್ಲಿಯೇ ಕನ್ನಡಿಗ ಕೆ.ಎಲ್.ರಾಹುಲ್ ಲಕ್ಮಲ್'ಗೆ ಔಟಾದರು. ಇದರೊಂದಿಗೆ ಸತತ 7 ಅರ್ಧ ಶತಕ ಬಾರಿಸಿದ್ದ ಶೂನ್ಯಕ್ಕೆ ಔಟಾಗಿ ಮತ್ತೊಂದು ದಾಖಲೆಯನ್ನು ನಿರ್ಮಿಸಿದರು. ಲಕ್ಮಲ್ ಬೌಲಿಂಗ್'ನಲ್ಲಿ ಶಿಖರ್ ಧವನ್(8) ಹಾಗೂ ಕೊಹ್ಲಿ ಕೂಡ ಶೂನ್ಯಕ್ಕೆ ಪೆವಿಲಿಯನ್'ಗೆ ತೆರಳಿಸಿದರು. ಮತ್ತೆ ಮಳೆ ಬಂದ ಕಾರಣ 11. 5 ಓವರ್'ಗಳ ಆಟ ನಡೆಯಿತು. ಲಕ್ಮಲ್ 6 ಓವರ್'ಗಳಲ್ಲಿ ಸೊನ್ನೆ ರನ್ ನೀಡಿ 3 ವಿಕೇಟ್ ಪಡೆದರು.

ಸ್ಕೋರ್ ವಿವರ

ಭಾರತ 11.5 ವರ್'ಗಳಲ್ಲಿ 17/3

(ಕೊಹ್ಲಿ 0, ರಾಹುಲ್ 0, ಧವನ್: 8, ಲಕ್ಮಲ್ 0/3 )