ಮಹಿಳಾ ಐಪಿಎಲ್: ರೋಚಕ ಜಯ ಸಾಧಿಸಿದ ಸೂಪರ್’ನೋವಾ

Supernovas Beat Trailblazers In A Thriller
Highlights

ತೀವ್ರ ರೋಚಕತೆಯಿಂದ ಕೂಡಿದ್ದ ಏಕೈಕ ಮಹಿಳಾ ಐಪಿಎಲ್ ಪಂದ್ಯಾವಳಿಯಲ್ಲಿ ಹರ್ಮನ್’ಪ್ರೀತ್ ಕೌರ್ ನೇತೃತ್ವದ ಸೂಪರ್’ಸೋವಾಸ್ 3 ವಿಕೆಟ್’ಗಳ ರೋಚಕ ಜಯ ಸಾಧಿಸಿದೆ. ಮುಂಬೈನ ವಾಂಖೇಡೆ ಮೈದಾನದಲ್ಲಿ ನಡೆದ ಮಹಿಳೆಯರ ಐಪಿಎಲ್ ನೆರೆದಿದ್ದ ಅಭಿಮಾನಿಗಳ ಮನಸೂರೆಗೊಳ್ಳುವಲ್ಲಿ ಯಶಸ್ವಿಯಾಗಿದೆ.

ಮುಂಬೈ[ಮೇ.22]: ತೀವ್ರ ರೋಚಕತೆಯಿಂದ ಕೂಡಿದ್ದ ಏಕೈಕ ಮಹಿಳಾ ಐಪಿಎಲ್ ಪಂದ್ಯಾವಳಿಯಲ್ಲಿ ಹರ್ಮನ್’ಪ್ರೀತ್ ಕೌರ್ ನೇತೃತ್ವದ ಸೂಪರ್’ಸೋವಾಸ್ 3 ವಿಕೆಟ್’ಗಳ ರೋಚಕ ಜಯ ಸಾಧಿಸಿದೆ. ಮುಂಬೈನ ವಾಂಖೇಡೆ ಮೈದಾನದಲ್ಲಿ ನಡೆದ ಮಹಿಳೆಯರ ಐಪಿಎಲ್ ನೆರೆದಿದ್ದ ಅಭಿಮಾನಿಗಳ ಮನಸೂರೆಗೊಳ್ಳುವಲ್ಲಿ ಯಶಸ್ವಿಯಾಗಿದೆ.
ಟ್ರೈಯಲ್ ಬ್ಲೇಜರ್ಸ್ ನೀಡಿದ್ದ ಸವಾಲಿನ ಗುರಿ ಬೆನ್ನತ್ತಿದ ಸೂಪರ್’ನೋವಾಸ್ ಉತ್ತಮ ಆರಂಭವನ್ನೇ ಪಡೆಯಿತು. ಮಿಥಾಲಿ ರಾಜ್-ಡೇನಿಯಲ್ ವ್ಯಾಟ್ ಜೋಡಿ ಮೊದಲ ವಿಕೆಟ್’ಗೆ 5.4 ಓವರ್’ಗಳಲ್ಲಿ 47 ರನ್ ಬಾರಿಸಿತು. ಮಿಥಾಲಿ 22 ರನ್ ಬಾರಿಸಿ ಏಕ್ತಾ ಬಿಶ್ತ್’ಗೆ ವಿಕೆಟ್ ಒಪ್ಪಿಸಿದರೆ, ವ್ಯಾಟ್[24] ಹಾಗೂ ಮ್ಯಾಗ್ ಲ್ಯಾನಿಂಗ್[16] ಅವರನ್ನು ಪೆವಿಲಿಯನ್’ಗೆ ಅಟ್ಟುವಲ್ಲಿ ಪೂನಂ ಯಾದವ್ ಯಶಸ್ವಿಯಾದರು. ನಾಯಕಿ ಹರ್ಮನ್’ಪ್ರೀತ್ ಕೌರ್ 21 ರನ್ ಸಿಡಿಸುವ ಮೂಲಕ ತಂಡವನ್ನು 100ರ ಗಡಿ ದಾಟಿಸಿದರು. 
ಒಂದು ಹಂತದಲ್ಲಿ 15 ಓವರ್ ಮುಕ್ತಾಯದ ವೇಳೆಗೆ 4 ವಿಕೆಟ್ ಕಳೆದುಕೊಂಡು 104 ರನ್ ಬಾರಿಸಿದ್ದ ಸೂಪರ್’ನೋವಾಸ್ ನಾಟಕೀಯ ಕುಸಿತ ಕಂಡಿತು. ವೇದಾ ಕೃಷ್ಣಮೂರ್ತಿ[2], ಮೋನಾ ಮೆಶ್ರಾಂ[4] ಬೇಗನೇ ವಿಕೆಟ್ ಒಪ್ಪಿಸಿದ್ದರಿಂದ ತಂಡ ಸೋಲುವ ಭೀತಿ ಅನುಭವಿಸಿತು. ಆದರೆ ಆಸೀಸ್’ನ ಅನುಭವಿ ಆಟಗಾರ್ತಿ ಎಲಿಸಾ ಪೆರ್ರಿ[13] ಉಪಯುಕ್ತ ಬ್ಯಾಟಿಂಗ್ ನೆರವಿನಿಂದ ಕೊನೆಯ ಎಸೆತದಲ್ಲಿ ರೋಚಕ ಜಯ ಸಾಧಿಸಿತು.
ಟ್ರೈಯಲ್ ಬ್ಲೇಜರ್ಸ್ ಪರ ಪೂನಂ ಯಾದವ್ ಹಾಗೂ ಸೂಜಿ ಬೇಟ್ಸ್ ತಲಾ 2 ವಿಕೆಟ್ ಪಡೆದರೆ, ಏಕ್ತಾ ಬಿಶ್ತ್ ಹಾಗೂ ಜೂಲನ್ ಗೋಸ್ವಾಮಿ ತಲಾ ಒಂದೊಂದು ವಿಕೆಟ್ ಪಡೆದರು.
ಇದಕ್ಕೂ ಮೊದಲು ಸೂಜಿ ಬೇಟ್ಸ್ ಅವರ ಆಕರ್ಷಕ 32 ರನ್’ಗಳ ನೆರವಿನಿಂದ ಟ್ರೈಯಲ್ ಬ್ಲೇಜರ್ಸ್ 129 ರನ್ ಕಲೆಹಾಕಿತ್ತು.
ಸಂಕ್ಷಿಪ್ತ ಸ್ಕೋರ್:
ಟ್ರೈಯಲ್ ಬ್ಲೇಜರ್ಸ್: 129
ಸೂಜಿ ಬೇಟ್ಸ್ : 32
ಮೆಗನ್ ಶ್ಯುಟ್ : 18/2
ಸೂಪರ್’ನೋವಾಸ್: 130
ಡೇನಿಯಲ್ ವ್ಯಾಟ್: 24
ಸೂಜಿ ಬೇಟ್ಸ್: 16/2

loader