ಸನ್ ರೈಸರ್ಸ್ ಹೈದರಾಬಾದ್ ತಂಡದ ಕೆಲ ಪಂದ್ಯಗಳಲ್ಲಿ ನಾಯಕನಾಗಿ, ತಂಡದ ಸ್ಟಾರ್ ಆರಂಭಿಕ ಬ್ಯಾಟ್ಸ್‌ಮನ್ ಆಗಿ ಗುರುತಿಸಿಕೊಂಡಿದ್ದ ಶಿಖರ್ ಧವನ್ ಇದೀಗ ತವರಿಗೆ ಮರಳಿದ್ದಾರೆ. ಈ ಮೂಲಕ ಸುದೀರ್ಘ ವರ್ಷಗಳ ಸನ್ ರೈಸರ್ಸ್ ತಂಡದ ಒಪ್ಪಂದ ಅಂತ್ಯಗೊಳಿಸಿದ್ದಾರೆ. 

ನವದೆಹಲಿ(ನ.05): ಸನ್ ರೈಸರ್ಸ್ ತಂಡದ ಸ್ಟಾರ್ ಆಟಗಾರ ಶಿಖರ್ ಧವನ್ ಇದೀಗ ಡೆಲ್ಲಿ ಡೇರ್ ಡೆವಿಲ್ಸ್ ತಂಡ ಸೇರಿಕೊಂಡಿದ್ದಾರೆ. 2008ರಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ತಂಡದ ಪರ ಆಡಿದ್ದ ಶಿಖರ್ ಧವನ್ ಬಳಿಕ ಇತರದ ಪರ ಆಡಿದ್ದರು. ಇದೀಗ ಮತ್ತೆ ತವರಿಗೆ ಮರಳಿದ್ದಾರೆ.

Scroll to load tweet…

ಧವನ್ ಡೆಲ್ಲಿ ತಂಡ ಸೇರಿಕೊಂಡಿರುವ ಕುರಿತು ಸನ್ ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಆಧಿಕೃತ ಪ್ರಕಟಣೆ ಹೊರಡಿಸಿದೆ. ಸಂಭಾವನೆಯಲ್ಲಿ ಅಸಮಧಾನ ಹೊಂದಿದ್ದ ಶಿಖರ್ ಧವನ್ ಸನ್ ರೈಸರ್ಸ್ಸ ತಂಡದಿಂದ ಹೊರಬಂದಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿತ್ತು. 

2013ರಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ ಸೇರಿಕೊಂಡರು. ಬಳಿಕ 2018ರ ವರೆಗೆ ರೈಸರ್ಸ್ ತಂಡದ ನಾಯಕನಾಗಿ, ಆರಂಭಿಕ ಬ್ಯಾಟ್ಸ್‌ಮನ್ ಆಗಿ ಗುರುತಿಸಿಕೊಂಡಿದ್ದರು. 2019ರಲ್ಲಿ ಧವನ್ ಡೆಲ್ಲಿ ತಂಡದ ಪರ ಕಣಕ್ಕಿಳಿಯಲಿದ್ದಾರೆ. 2008ರಲ್ಲಿ ಡೆಲ್ಲಿ ಪರ ಆಡಿದ್ದ ಧವನ್ ಮುಂಬೈ ಇಂಡಿಯನ್ಸ್ ಹಾಗೂ ಡೆಕ್ಕನ್ ಚಾರ್ಜಸ್ ಪರ ಕಣಕ್ಕಿಳಿದಿದ್ದರು.