ರಾಜಸ್ಥಾನ ಮಣಿಸಿ ಅಗ್ರಸ್ಥಾನಕ್ಕೇರಿದ ಸನ್’ರೖಸರ್ಸ್

Sunrisers Hyderabad tame Rajasthan Royals climb to top of points table
Highlights

ಸನ್’ರೈಸರ್ಸ್ ನೀಡಿದ 152 ರನ್’ಗಳ ಗುರಿ ಬೆನ್ನತ್ತಿದ ರಾಜಸ್ಥಾನ ಕೇವಲ 140 ರನ್’ಗಳನ್ನಷ್ಟೇ ಗಳಿಸಲು ಶಕ್ತವಾಯಿತು. ನಾಯಕ ಅಜಿಂಕ್ಯ ರಹಾನೆ[65*] ಹಾಗೂ ಸಂಜು ಸ್ಯಾಮ್ಸನ್[40] ಹೊರತಾಗಿಯೂ ಉಳಿದ ಬ್ಯಾಟ್ಸ್’ಮನ್’ಗಳು ವೈಫಲ್ಯ ಅನುಭವಿಸಿದ್ದರಿಂದ ರಾಜಸ್ಥಾನ ನಿರಾಸೆ ಅನುಭವಿಸಬೇಕಾಯಿತು.

ಜೈಪುರ[ಏ.29]: ಸನ್’ರೈಸರ್ಸ್ ಸಾಂಘಿಕ ಪ್ರದರ್ಶನಕ್ಕೆ ತತ್ತರಿಸಿದ ರಾಜಸ್ಥಾನ ರಾಯಲ್ಸ್ 11 ರನ್’ಗಳ ರೋಚಕ ಸೋಲು ಕಂಡಿದೆ. ಈ ಗೆಲುವಿನೊಂದಿಗೆ ಸನ್’ರೈಸರ್ಸ್ ಒಟ್ಟು 12 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು.
ಸನ್’ರೈಸರ್ಸ್ ನೀಡಿದ 152 ರನ್’ಗಳ ಗುರಿ ಬೆನ್ನತ್ತಿದ ರಾಜಸ್ಥಾನ ಕೇವಲ 140 ರನ್’ಗಳನ್ನಷ್ಟೇ ಗಳಿಸಲು ಶಕ್ತವಾಯಿತು. ನಾಯಕ ಅಜಿಂಕ್ಯ ರಹಾನೆ[65*] ಹಾಗೂ ಸಂಜು ಸ್ಯಾಮ್ಸನ್[40] ಹೊರತಾಗಿಯೂ ಉಳಿದ ಬ್ಯಾಟ್ಸ್’ಮನ್’ಗಳು ವೈಫಲ್ಯ ಅನುಭವಿಸಿದ್ದರಿಂದ ರಾಜಸ್ಥಾನ ನಿರಾಸೆ ಅನುಭವಿಸಬೇಕಾಯಿತು.
ಸನ್’ರೈಸರ್ಸ್ ಪರ ಸಿದ್ದಾರ್ಥ್ ಕೌಲ್ 2, ಸಂದೀಪ್ ಶರ್ಮಾ, ಬಾಸಿಲ್ ಥಂಪಿ, ರಶೀದ್ ಖಾನ್ ಹಾಗೂ ಯೂಸೂಪ್ ಪಠಾಣ್ ತಲಾ ಒಂದೊಂದು ವಿಕೆಟ್ ಪಡೆದರು.

loader