ಇನ್ನು ಹೈದರಾಬಾದ್ ಪರ ಸಂಘಟಿತ ಬೌಲಿಂಗ್ ಪ್ರದರ್ಶನ ತೋರಿದ ಸಿದ್ಧಾರ್ಥ್ ಕೌಲ್ ಪ್ರಮುಖ ಮೂರು ವಿಕೆಟ್ ಪಡೆದರೆ, ಭುವನೇಶ್ವರ್ ಕುಮಾರ್ 2 ವಿಕೆಟ್ ಪಡೆದು ಮಿಂಚಿದರು.

ಹೈದರಾಬಾದ್(ಮೇ.08): ಆರಂಭಿಕ ಆಟಗಾರ ಶಿಖರ್ ಧವನ್ ಅಜೇಯ(62*)ಅರ್ಧಶತಕ ಹಾಗೂ ಮೋಯ್ಸಿಸ್ ಹೆನ್ರಿಕೇಸ್(44) ಸಮಯೋಚಿತ ಬ್ಯಾಟಿಂಗ್ ನೆರವಿನಿಂದ ಸನ್'ರೈಸರ್ಸ್ ಹೈದರಾಬಾದ್ ತಂಡ ಏಳು ವಿಕೆಟ್'ಗಳ ಜಯಭೇರಿ ಬಾರಿಸಿತು. ಈ ಗೆಲುವಿನೊಂದಿಗೆ ವಾರ್ನರ್ ಪಡೆ ಫ್ಲೇ ಆಫ್ ತಲುಪುವ ತನ್ನ ಕನಸನ್ನು ಜೀವಂತವಾಗಿರಿಸಿಕೊಂಡಿದೆ.

ಇಲ್ಲಿನ ರಾಜಿವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ನಿಗದಿತ 2 ಓವರ್'ಗಳಲ್ಲಿ 7 ವಿಕೆಟ್ ನಷ್ಟಕ್ಕೆ 138ರನ್'ಗಳ ಸಾದಾರಣ ಗುರಿ ನೀಡಿತು. ಮುಂಬೈ ಪರ ಏಕಾಂಗಿ ಹೋರಾಟ ನಡೆಸಿದ ನಾಯಕ ರೋಹಿತ್ ಶರ್ಮಾ 67ರನ್ ಬಾರಿಸಿ ತಂಡದ 100ರ ಗಡಿದಾಟುವಂತೆ ಮಾಡುವಲ್ಲಿ ಯಶಸ್ವಿಯಾದರು. ಸಾಕಷ್ಟು ಭರವಸೆ ಮೂಡಿಸಿದ್ದ ಲಿಂಡ್ಲೆ ಸಿಮೋನ್ಸ್, ಕಿರಾನ್ ಪೊಲ್ಲಾರ್ಡ್, ನಿತೀಶ್ ರಾಣಾ ತಮ್ಮ ಸಾಮರ್ಥ್ಯ ತಕ್ಕದಾದ ಆಟವಾಡುವಲ್ಲಿ ವಿಫಲರಾದರು.

ಇನ್ನು ಹೈದರಾಬಾದ್ ಪರ ಸಂಘಟಿತ ಬೌಲಿಂಗ್ ಪ್ರದರ್ಶನ ತೋರಿದ ಸಿದ್ಧಾರ್ಥ್ ಕೌಲ್ ಪ್ರಮುಖ ಮೂರು ವಿಕೆಟ್ ಪಡೆದರೆ, ಭುವನೇಶ್ವರ್ ಕುಮಾರ್ 2 ವಿಕೆಟ್ ಪಡೆದು ಮಿಂಚಿದರು.

ಸುಲಭ ಗುರಿ ಬೆನ್ನತ್ತಿದ ಹೈದರಾಬಾದ್ ಎರಡನೇ ಓವರ್'ನಲ್ಲೇ ನಾಯಕ ವಾರ್ನರ್ ವಿಕೆಟ್ ಕಳೆದುಕೊಂಡಿತು. ಆದರೆ ಎರಡನೇ ವಿಕೆಟ್'ಗೆ ಜತೆಯಾದ ಧವನ್ ಹಾಗೂ ಹೆನ್ರಿಕೇಸ್ ಜೋಡಿ ತಂಡವನ್ನು ಗೆಲುವಿನತ್ತ ಕೊಂಡೊಯ್ಯುವಲ್ಲಿ ಯಶಸ್ವಿಯಾದರು. ತಂಡದ ಗುರಿಮುಟ್ಟುವವರೆಗೂ ಅಜೇಯವಾದ ಆಟವಾಡಿದ ಶಿಖರ್ ಧವನ್ ಪಂದ್ಯಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.

ಸಂಕ್ಷಿಪ್ತ ಸ್ಕೋರ್

ಮುಂಬೈ ಇಂಡಿಯನ್ಸ್: 138/7

ರೋಹಿತ್ ಶರ್ಮಾ; 67

ಪಾರ್ಥಿವ್ ಪಟೇಲ್ : 23

ಸಿದ್ಧಾರ್ಥ್ ಕೌಲ್ : 24/3

ಸನ್'ರೈಸರ್ಸ್ ಹೈದರಾಬಾದ್: 140/3

ಶಿಖರ್ ಧವನ್ : 62*

ಮೋಯಿಸ್ ಹೆನ್ರಿಕೇಸ್ : 44

ಜಸ್ಪ್ರೀತ್ ಬುಮ್ರಾ : 24/1