ನಿಸ್ಸಂಶಯವಾಗಿ ಭಾರತ ನನ್ನ ನೆಚ್ಚಿನ ತಂಡ,

ನವದೆಹಲಿ(ಏ.26): ಸನ್ನಿ ಲಿಯೋನ'ಳ ನೆಚ್ಚಿನ ಕ್ರಿಕೆಟಿಗ ವಿರಾಟ್ ಕೊಹ್ಲಿ ಅಲ್ವಂತೆ. ಮತ್ತಿನ್ಯಾರು ಎಂಬ ಪ್ರಶ್ನೆಗೆ ಟೀಮ್‌ ಇಂಡಿಯಾದ ಮಾಜಿ ನಾಯಕ ಎಂ.ಎಸ್‌.ಧೋನಿ ನನ್ನ ನೆಚ್ಚಿನ ಕ್ರಿಕೆಟಿಗ ಎಂದು ಮಾದಕ ನಟಿ ಸನ್ನಿ ಲಿಯೋನ್‌ ಹೇಳಿದ್ದಾರೆ. ಟ್ವಿಟರ್‌ನಲ್ಲಿ ಅಭಿಮಾನಿಗಳೊಂದಿಗೆ ಸಂವಾದ ನಡೆಸಿದ ಸನ್ನಿ, ಗಣೇಶ್‌ ಕುಮಾರ್‌ ಎಂಬುವವರು ಕೇಳಿದ ‘ನಿಮ್ಮ ನಿಚ್ಚಿನ ಕ್ರಿಕೆಟ್‌ ತಂಡ ಹಾಗೂ ನೆಚ್ಚಿನ ಕ್ರಿಕೆಟಿಗ ಯಾರು' ಅನ್ನುವ ಪ್ರಶ್ನೆಗೆ ‘ನಿಸ್ಸಂಶಯವಾಗಿ ಭಾರತ ನನ್ನ ನೆಚ್ಚಿನ ತಂಡ, ಹಾಗೇ ಧೋನಿ ನನ್ನ ನೆಚ್ಚಿನ ಕ್ರಿಕೆಟ್‌ ಆಟಗಾರ' ಎಂದು ಉತ್ತರಿಸಿದರು.