ಗವಾಸ್ಕರ್ ನೃತ್ಯವನ್ನು ಭಾರತೀಯರು ಮೆಚ್ಚಿಕೊಂಡಿದ್ದರೆ, ಬಾಂಗ್ಲಾದೇಶದ ಕ್ರಿಕೆಟ್ ಅಭಿಮಾನಿಗಳು ಸಿಡಿಮಿಡಿಗೊಂಡಿದ್ದಾರೆ. ಒಬ್ಬ ಅಭಿಮಾನಿ ಸುನಿಲ್ ಒಬ್ಬ ಮೂರ್ಖ, ನಮ್ಮ ಕೋಬ್ರಾ ಡ್ಯಾನ್ಸ್ ಏಕೆ ಮಾಡಿದೆ ಎಂದು ಕಿಡಿಕಾರಿದರೆ, ಮತ್ತೋರ್ವ ಇದು ನಾಗಿಣಿ ನೃತ್ಯದ ಥರ ಕಾಣುತ್ತಿಲ್ಲ, ಮೃಗಾಲಯದಿಂದ ತಪ್ಪಿಸಿಕೊಳ್ಳಲು ಹವಣಿಸುತ್ತಿರುವ ಬಬೂನ್'ನಂತೆ ಕಾಣುತ್ತೀರ ಎಂದು ಲೇವಡಿ ಮಾಡಿದ್ದಾನೆ.
ಕೊಲಂಬೊ: ಶ್ರೀಲಂಕಾ ವಿರುದ್ಧ ಗೆದ್ದು, ನಾಗಿಣಿ ನೃತ್ಯ ಮಾಡಿದ್ದ ಬಾಂಗ್ಲಾದೇಶ ಕ್ರಿಕೆಟಿಗರ ರೀತಿಯಲ್ಲಿಯೇ ಸುನಿಲ್ ಗವಾಸ್ಕರ್ ವೀಕ್ಷಕ ವಿವರಣೆ ನೀಡುವಾಗ ಮಾಡಿದ ನಾಗಿಣಿ ನೃತ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಕಾಮೆಂಟ್ರಿ ಬಾಕ್ಸ್'ನಲ್ಲಿ ವೀಕ್ಷಕ ವಿವರಣೆ ನೀಡುತ್ತಿದ್ದ ಬ್ರೇಟ್ ಲೀ ಮನವಿ ಮೇರೆಗೆ ಸುನಿಲ್ ಗವಾಸ್ಕರ್ ನಾಗಿಣಿ ನೃತ್ಯ ಮಾಡಿದ್ದಾರೆ.
ಗವಾಸ್ಕರ್ ನೃತ್ಯವನ್ನು ಭಾರತೀಯರು ಮೆಚ್ಚಿಕೊಂಡಿದ್ದರೆ, ಬಾಂಗ್ಲಾದೇಶದ ಕ್ರಿಕೆಟ್ ಅಭಿಮಾನಿಗಳು ಸಿಡಿಮಿಡಿಗೊಂಡಿದ್ದಾರೆ.
ಒಬ್ಬ ಅಭಿಮಾನಿ ಸುನಿಲ್ ಒಬ್ಬ ಮೂರ್ಖ, ನಮ್ಮ ಕೋಬ್ರಾ ಡ್ಯಾನ್ಸ್ ಏಕೆ ಮಾಡಿದೆ ಎಂದು ಕಿಡಿಕಾರಿದರೆ, ಮತ್ತೋರ್ವ ಇದು ನಾಗಿಣಿ ನೃತ್ಯದ ಥರ ಕಾಣುತ್ತಿಲ್ಲ, ಮೃಗಾಲಯದಿಂದ ತಪ್ಪಿಸಿಕೊಳ್ಳಲು ಹವಣಿಸುತ್ತಿರುವ ಬಬೂನ್'ನಂತೆ ಕಾಣುತ್ತೀರ ಎಂದು ಲೇವಡಿ ಮಾಡಿದ್ದಾನೆ.
