ಪಿಕ್ ಸ್ಟಾರ್ ರಾಯಭಾರಿಯಾಗಿ ಆಯ್ಕೆಯಾದ ಸುನಿಲ್ ಚೆಟ್ರಿ

First Published 13, Jun 2018, 5:04 PM IST
Sunil Chhetri becomes brand ambassador of pick star
Highlights

ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಸುನಿಲ್ ಚೆಟ್ರಿಯನ್ನ ಪಿಕ್ ಸ್ಟಾರ್ ರಾಯಭಾರಿಯಾಗಿ ಆಯ್ಕೆ ಮಾಡಲಾಗಿದೆ. ಸ್ಫೋಟ್ಸ್ ಇಫಾರ್ಮೇಷನ್ ಆ್ಯಪ್ ಸ್ಟಾರ್ ಪಿಕ್ ಮೂಲಕ ಫುಟ್ಬಾಲ್ ಅಭಿಮಾನಿಗಳು 20 ಕೋಟಿ ರೂಪಾಯಿ ಬಹುಮಾನ ಗೆಲ್ಲಬಹುದು. ಅದು ಹೇಗೆ ಅಂತೀರಾ? ವರದಿ ಓದಿ.

ಬೆಂಗಳೂರು(ಜೂನ್.13): ಸ್ಫೋಟ್ಸ್ ಇಫಾರ್ಮೇಷನ್ ಆ್ಯಪ್ ಸ್ಟಾರ್ ಪಿಕ್ ಗೆ ಭಾರತ ಫುಟ್ ಬಾಲ್ ತಂಡದ ನಾಯಕ ಸುನೀಲ್ ಚಟ್ರಿ ನೂತನ ರಾಯಭಾರಿಯಾಗಿ ಆಯ್ಕೆಯಾಗಿದ್ದಾರೆ. ಬೆಂಗಳೂರಿನ ಖಾಸಗಿ ಹೊಟೇಲ್ ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಚೆಟ್ರಿಯನ್ನ ಪಿಕ್ ಸ್ಟಾರ್ ರಾಯಭಾರಿಯಾಗಿ ಘೋಷಿಸಲಾಯಿತು. 

ವಿಶ್ವ ಕಪ್ ಫುಟ್ ಬಾಲ್ ಫೀವರ್ ಹೆಚ್ಚಿಸುವ ಸಲುವಾಗಿ ಸ್ಟಾರ್ ಪಿಕ್ 20 ಕೋಟಿ ರೂಪಾಯಿ ಮೊತ್ತದ ಬಹುಮಾನ ಘೋಷಿಸಿದೆ. ವಿಶ್ವ ಫುಟ್ ಬಾಲ್ ಗೆಲ್ಲುವ ನೆಚ್ಚಿನ ತಂಡದ ಬಗ್ಗೆ ನಿಖರ ಮಾಹಿತಿ ನೀಡಿ ಬಹುಮಾನ ಗೆಲ್ಲಬಹುದು.  ನಿಖರ ಅಭಿಪ್ರಾಯ ಹಂಚಿಕೊಂಡ 5 ಸ್ಪರ್ಧಿಗಳಿಗೆ ಯುಕೆಯಲ್ಲಿ ನಡೆಯಲಿರುವ ಇಂಗ್ಲಿಷ್ ಪ್ರೀಮಿಯಂ ಲೀಗ್ ಫುಟ್ ಬಾಲ್ ಪಂದ್ಯ ವೀಕ್ಷಿಸೋ ಅವಕಾಶವನ್ನು  ಸ್ಟಾರ್ ಪಿಕ್  ಕಲ್ಪಿಸಿಕೊಡಲಿದೆ.‌

ಪಿಕ್ ಸ್ಟಾರ್ ಆಪ್ಯ್ ನಲ್ಲಿ‌ ವಿಶ್ವಕಪ್  ಫುಟ್ ಬಾಲ್  ಸಂಬಂಧಿಸಿದ ಪಿನ್ ಟು ಪಿನ್ ಮಾಹಿತಿ ಪಡೆಯಬಹುದು. ಈ ಬಗ್ಗೆ ಮಾತನಾಡಿದ ಸುನೀಲ್ ಚಟ್ರಿ, ಭಾರತದಲ್ಲಿ ಸ್ಫೋಟ್ಸ್ ಫ್ಯಾಂಟಸಿ ಜನಪ್ರಿಯ ಗೊಳ್ಳುತ್ತಿದೆ. ಸ್ಟಾರ್ ಪಿಕ್ ಸಂಸ್ಥೆ ಗೆ ನಾನು ರಾಯಭಾಗಿ ಆಗಿರುವುದು ಹೆಮ್ಮೆಯ ವಿಚಾರ. ಈ ಬಾರಿಯ ಫಿಫಾ ವಿಶ್ವಕಪ್ ಸ್ಟಾರ್ ಐಕನ್ ಫುಟ್ಬಾಲ್‌ ಆಟಗಾರರನ್ನ ಹೊಂದಿದ್ದು, ಸಖತ್ ಕ್ರೇಜ್ ಹೆಚ್ಚಿಸಲಿದೆ ಎಂದರು. ಇನ್ನು ಗೋಲ್ ಗಳಿಕೆಯಲ್ಲಿ ಲಿಯೋನೋ ಮಿಸ್ಸಿ ಹಾಗೂ ಕ್ರಿಶ್ಚಿಯನ್ ರೋನಾಲ್ಡೋರಂತಹ ದಿಗ್ಗಜರ ಜೊತೆ ನನ್ನನ್ನು ಹೊಲಿಕೆ ಮಾಡುವುದು ಸರಿಯಲ್ಲ ಎಂದು ಚೆಟ್ರಿ ಹೇಳಿದರು. 

loader