Asianet Suvarna News Asianet Suvarna News

ಟೆನಿಸ್‌ ವಿಶ್ವ ರ್‍ಯಾಂಕಿಂಗ್‌: ಜೀವನಶ್ರೇಷ್ಠ ಸ್ಥಾನಕ್ಕೇರಿದ ಸುಮಿತ್‌ ನಗಾಲ್‌

ಭಾನುವಾರ ಚೆನೈ ಓಪನ್‌ ಟೆನಿಸ್‌ ಕಿರೀಟ ಗೆದ್ದಿದ್ದ ನಗಾಲ್‌ ಅಗ್ರ 100ರಲ್ಲಿ ಸ್ಥಾನ ಖಚಿತಪಡಿಸಿಕೊಂಡಿದ್ದರು. ಭಾರತದ ಪ್ರಜ್ಞೇಶ್‌ ಗುನೇಶ್ವರನ್‌ ಕೊನೆಯದಾಗಿ 2019ರಲ್ಲಿ ಅಗ್ರ 100ರಲ್ಲಿ ಕಾಣಿಸಿಕೊಂಡಿದ್ದರು. 1980 ವಿಜಯ್ ಅಮೃತರಾಜ್ 18ನೇ ಸ್ಥಾನ ಪಡೆದಿದ್ದು, ಈ ವರೆಗೂ ಭಾರತೀಯರ ಪೈಕಿ ಗರಿಷ್ಠ ರ್‍ಯಾಂಕಿಂಗ್‌.

Sumit Nagal bags Chennai Open ATP Challenger 100 to break in top 100 rankings kvn
Author
First Published Feb 13, 2024, 12:37 PM IST

ನವದೆಹಲಿ: ಭಾರತದ ಅಗ್ರ ಟೆನಿಸ್‌ ಆಟಗಾರ ಸುಮಿತ್‌ ನಗಾಲ್‌ ಮಂಗಳವಾರ ಪ್ರಕಟಗೊಂಡ ಎಟಿಪಿ ವಿಶ್ವ ರ್‍ಯಾಂಕಿಂಗ್‌ನಲ್ಲಿ 23 ಸ್ಥಾನಗಳ ಏರಿಕೆ ಕಂಡಿದ್ದು, ಜೀವನಶ್ರೇಷ್ಠ 98ನೇ ಸ್ಥಾನ ಪಡೆದುಕೊಂಡಿದ್ದಾರೆ.

ಭಾನುವಾರ ಚೆನೈ ಓಪನ್‌ ಟೆನಿಸ್‌ ಕಿರೀಟ ಗೆದ್ದಿದ್ದ ನಗಾಲ್‌ ಅಗ್ರ 100ರಲ್ಲಿ ಸ್ಥಾನ ಖಚಿತಪಡಿಸಿಕೊಂಡಿದ್ದರು. ಭಾರತದ ಪ್ರಜ್ಞೇಶ್‌ ಗುನೇಶ್ವರನ್‌ ಕೊನೆಯದಾಗಿ 2019ರಲ್ಲಿ ಅಗ್ರ 100ರಲ್ಲಿ ಕಾಣಿಸಿಕೊಂಡಿದ್ದರು. 1980 ವಿಜಯ್ ಅಮೃತರಾಜ್ 18ನೇ ಸ್ಥಾನ ಪಡೆದಿದ್ದು, ಈ ವರೆಗೂ ಭಾರತೀಯರ ಪೈಕಿ ಗರಿಷ್ಠ ರ್‍ಯಾಂಕಿಂಗ್‌.

ಆಟಗಾರರು ಶ್ರೇಷ್ಠ ರ್‍ಯಾಂಕಿಂಗ್‌ ವರ್ಷ

ಜಸ್‌ಜೀತ್‌ ಸಿಂಗ್‌ 89 1974

ಆನಂದ್‌ ಅಮೃತ್‌ರಾಜ್‌ 74 1974

ಶಶಿ ಮೆನನ್‌ 71 1975

ವಿಜಯ್‌ ಅಮೃತ್‌ರಾಜ್‌ 18 1980

ರಮೇಶ್‌ ಕೃಷ್ಣನ್‌ 23 1985

ಲಿಯಾಂಡರ್‌ ಪೇಸ್‌ 73 1998

ಸೋಮ್‌ದೇವ್‌ ದೇವರ್ಮನ್‌ 62 2011

ಯೂಕಿ ಬಾಂಬ್ರಿ 83 2018

ಪ್ರಜ್ಞೇಶ್‌ ಗುನೇಶ್ವರನ್‌ 75 2019

ಸುಮಿತ್‌ ನಗಾಲ್‌ 98 2024

ಬೆಂಗ್ಳೂರು ಓಪನ್‌ ಟೆನಿಸ್‌: ರಾಮ್‌ಕುಮಾರ್‌ಗೆ ಗೆಲುವು

ಬೆಂಗಳೂರು: ಭಾರತದ ತಾರಾ ಆಟಗಾರ ರಾಮ್‌ಕುಮಾರ್‌ ರಾಮನಾಥನ್‌ ಬೆಂಗಳೂರು ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದಾರೆ. ಸೋಮವಾರ ಪುರುಷರ ಸಿಂಗಲ್ಸ್‌ ಮೊದಲ ಸುತ್ತಿನಲ್ಲಿ ರಾಮ್‌, ಫ್ರಾನ್ಸ್‌ನ ಮ್ಯಾಕ್ಸಿಮ್‌ ಜಾನ್‌ವೀರ್‌ ವಿರುದ್ಧ 6-7(4), 7-5, 6-4 ಅಂತರದಲ್ಲಿ ಗೆಲುವು ಸಾಧಿಸಿದರು. ಇದೇ ವೇಳೆ 3ನೇ ಶ್ರೇಯಾಂಕಿತ, ಕ್ರೊವೇಷಿಯಾದ ಡ್ಯುಜ್‌ ಆಡುಕೋವಿಚ್‌ ವಿರುದ್ಧ ಟ್ಯುನೀಶಿಯಾದ ಶ್ರೇಯಾಂಕ ರಹಿತ ಮೊಯೆಜ್‌ ಎಚಾರ್ಗ್ಯು ಸೋಲಿಸಿ 2ನೇ ಸುತ್ತಿಗೇರಿದರು.

ಈ ಆಟಗಾರನ ಜತೆ ಫೋಟೋ ಶೇರ್ ಮಾಡಿದ ಸಾನಿಯಾ ಮಿರ್ಜಾ..! ಆ ದಿನಗಳನ್ನು ಮೆಲುಕುಹಾಕಿದ ಮೂಗುತಿ ಸುಂದರಿ

ಚಾಂಪಿಯನ್‌ ಬೋಪಣ್ಣಗೆ ಸನ್ಮಾನ

ಡಬಲ್ಸ್‌ ವಿಶ್ವ ನಂ.1, ಇತ್ತೀಚೆಗಷ್ಟೇ ಆಸ್ಟ್ರೇಲಿಯನ್‌ ಓಪನ್‌ನಲ್ಲಿ ಪುರುಷರ ಡಬಲ್ಸ್‌ ಚಾಂಪಿಯನ್‌ ಆಗಿದ್ದ ಖ್ಯಾತ ಟೆನಿಸಿಗ ರೋಹನ್‌ ಬೋಪಣ್ಣ ಅವರಿಗೆ ಸೋಮವಾರ ಕರ್ನಾಟಕ ರಾಜ್ಯ ಲಾನ್ ಟೆನಿಸ್ ಸಂಸ್ಥೆ(ಕೆಎಸ್ಎಲ್‌ಟಿಎ) ವತಿಯಿಂದ ಸನ್ಮಾನ ಮಾಡಲಾಯಿತು.

ಈ ವೇಳೆ ಅವರ ಡಬಲ್ಸ್‌ ಜತೆಗಾರ, ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್‌ ಜೊತೆಗಿರುವ ಭಾವಚಿತ್ರ ಉಡುಗುರೆಯಾಗಿ ನೀಡಲಾಯಿತು. ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಕೆ. ಗೋವಿಂದರಾಜ್‌, ಕೆಎಸ್ಎಲ್‌ಟಿಎ ಗೌರವ ಕಾರ್ಯದರ್ಶಿ ಮಹೇಶ್ವರ್ ರಾವ್, ಪ್ಯಾರಾ ಅಥ್ಲೀಟ್‌ ಕೆ.ವೈ.ವೆಂಕಟೇಶ್, ಮಾಜಿ ಟೆನಿಸ್ ಆಟಗಾರ ಶ್ರೀನಾಥ್ ಪ್ರಹ್ಲಾದ್, ಏಷ್ಯನ್ ಗೇಮ್ಸ್ ಕಂಚಿನ ಪದಕ ವಿಜೇತೆ ಪ್ರಮೀಳಾ ಅಯ್ಯಪ್ಪ, ಬೆಂಗಳೂರು ನಗರ ಪೊಲೀಸ್‌ ಆಯುಕ್ತ ಬಿ.ದಯಾನಂದ್‌ ಟೂರ್ನಮೆಂಟ್ ನಿರ್ದೇಶಕ ಸುನಿಲ್ ಯಜಮಾನ್ ಸೇರಿಂದತೆ ಇನ್ನಿತರಿರದ್ದರು.

ಜಸ್ಪ್ರೀತ್ ಬುಮ್ರಾ ನೆಟ್‌ವರ್ತ್‌: ಸಂಬಳ, ಸಂಪತ್ತಿನ ಇಂಟ್ರೆಸ್ಟಿಂಗ್ ಮಾಹಿತಿ..!

ಪ್ರೊ ಕಬಡ್ಡಿ ಲೀಗ್: ಜೈಪುರಕ್ಕೆ ಯುಪಿ ವಿರುದ್ಧ 67-30 ಅಂಕಗಳ ಗೆಲುವು

ಕೋಲ್ಕತಾ: 10ನೇ ಆವೃತ್ತಿ ಪ್ರೊ ಕಬಡ್ಡಿಯಲ್ಲಿ ಜೈಪುರ ಪಿಂಕ್‌ ಪ್ಯಾಂಥರ್ಸ್‌ ಗೆಲುವಿನ ಓಟ ಮುಂದುವರಿಸಿದೆ. ಸೋಮವಾರ ಯುಪಿ ಯೋಧಾಸ್‌ ವಿರುದ್ಧ ಜೈಪುರ 67-30 ಅಂಕಗಳ ಬೃಹತ್‌ ಗೆಲುವು ತನ್ನದಾಗಿಸಿಕೊಂಡಿತು. ಅರ್ಜುನ್ ದೇಶ್ವಾಲ್‌ 20 ರೈಡ್‌ ಅಂಕ ಗಳಿಸಿದರು. ಯುಪಿಯ ಗಗನ್‌ ಗೌಡ 10 ಅಂಕ ಸಂಪಾದಿಸಿದರು. ಜೈಪುರ 20ರಲ್ಲಿ 14ನೇ ಜಯ ಸಾಧಿಸಿ ಅಗ್ರಸ್ಥಾನದಲ್ಲೇ ಮುಂದುವರಿದಿದೆ. ಸೋಮವಾರದ ಮತ್ತೊಂದು ಪಂದ್ಯದಲ್ಲಿ ಯು ಮುಂಬಾ ವಿರುದ್ಧ ಬೆಂಗಾಲ್‌ ವಾರಿಯರ್ಸ್‌ 46-34 ಅಂಕಗಳಿಂದ ಜಯಗಳಿಸಿತು.

ಇಂದಿನ ಪಂದ್ಯ: ಪಾಟ್ನಾ-ತೆಲುಗು ಟೈಟಾನ್ಸ್‌, ರಾತ್ರಿ 8ಕ್ಕೆ
 

Follow Us:
Download App:
  • android
  • ios