ಜಸ್ಪ್ರೀತ್ ಬುಮ್ರಾ ನೆಟ್‌ವರ್ತ್: ಸಂಬಳ, ಸಂಪತ್ತಿನ ಇಂಟ್ರೆಸ್ಟಿಂಗ್ ಮಾಹಿತಿ..!
ಬೆಂಗಳೂರು: ಟೀಂ ಇಂಡಿಯಾ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಇತ್ತೀಚೆಗಷ್ಟೇ ಐಸಿಸಿ ಬೌಲರ್‌ಗಳ ಟೆಸ್ಟ್ ಶ್ರೇಯಾಂಕದಲ್ಲಿ ನಂ.1 ಸ್ಥಾನಕ್ಕೇರಿದ್ದಾರೆ. ನಾವಿಂದು ಬುಮ್ರಾ ಅವರ ಬಗೆಗಿನ ಕೆಲವೊಂದು ಇಂಟ್ರೆಸ್ಟಿಂಗ್ ಸಂಗತಿಗಳನ್ನು ತಿಳಿದುಕೊಳ್ಳೋಣ ಬನ್ನಿ.

ಟೀಂ ಇಂಡಿಯಾ ಮಾರಕ ವೇಗಿ ಜಸ್ಪ್ರೀತ್ ಬುಮ್ರಾ ತಮ್ಮ ಕರಾರುವಕ್ಕಾದ ದಾಳಿ ಮೂಲಕ ಎದುರಾಳಿ ಬ್ಯಾಟರ್‌ಗಳ ಎದೆಯಲ್ಲಿ ತಬ್ಬಿಬ್ಬು ಮೂಡಿಸುತ್ತಾ ಬಂದಿದ್ದಾರೆ. ದಿನದಿಂದ ದಿನಕ್ಕೆ ಬುಮ್ರಾ ಉನ್ನತ ಹಂತಕ್ಕೆ ಏರುತ್ತಲೇ ಬಂದಿದ್ದಾರೆ.
ಜಸ್ಪ್ರೀತ್ ಬುಮ್ರಾ ಇತ್ತೀಚೆಗಷ್ಟೇ ಇಂಗ್ಲೆಂಡ್ ಎದುರಿನ ಎರಡನೇ ಟೆಸ್ಟ್ ಪಂದ್ಯದಲ್ಲಿ 9 ವಿಕೆಟ್ ಕಬಳಿಸುವ ಮೂಲಕ ಇದೇ ಮೊದಲ ಬಾರಿಗೆ ಟೆಸ್ಟ್ ಬೌಲರ್‌ಗಳ ಶ್ರೇಯಾಂಕದಲ್ಲಿ ನಂ.1 ಸ್ಥಾನಕ್ಕೇರಿದ್ದಾರೆ. ಈ ಸಂದರ್ಭದಲ್ಲಿ ಬುಮ್ರಾ ವೈಯುಕ್ತಿಕ ಆದಾಯವನ್ನು ತಿಳಿದುಕೊಳ್ಳೋಣ ಬನ್ನಿ.
ಟೀಂ ಇಂಡಿಯಾ ಡೆಡ್ಲಿ ವೇಗಿ ಜಸ್ಪ್ರೀತ್ ಬುಮ್ರಾ ಅವರ ಒಟ್ಟು ಸಂಪತ್ತು ಬರೋಬ್ಬರಿ 800 ಕೋಟಿ ರುಪಾಯಿಗೂ ಹೆಚ್ಚು ಎಂದು ವರದಿಯಾಗಿದೆ. ಈ ಪೈಕಿ ಕ್ರಿಕೆಟ್‌ನಿಂದಲೇ ಬುಮ್ರಾ ವಾರ್ಷಿಕ 55 ಕೋಟಿ ರುಪಾಯಿಗಳನ್ನು ಸಂಪಾಧಿಸುತ್ತಾ ಬಂದಿದ್ದಾರೆ.
ಬಿಸಿಸಿಐ ಸೆಂಟ್ರಲ್ ಕಾಂಟ್ರ್ಯಾಕ್ಟ್‌ನಲ್ಲಿ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಜತೆಗೆ ಜಸ್ಪ್ರೀತ್ ಬುಮ್ರಾ A+ ಗ್ರೇಡ್ ಹೊಂದಿದ್ದು, ಮ್ಯಾಚ್ ಫೀ ಹೊರತುಪಡಿಸಿ ವಾರ್ಷಿಕ 7 ಕೋಟಿ ರುಪಾಯಿಗಳನ್ನು ಸಂಪಾದಿಸುತ್ತಾರೆ.
ಇನ್ನು ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ತಂಡದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿರುವ ಜಸ್ಪ್ರೀತ್ ಬುಮ್ರಾ, ಪ್ರತಿ ಐಪಿಎಲ್ ಆವೃತ್ತಿ ಆಡಿದಾಗ 12 ಕೋಟಿ ರುಪಾಯಿಗಳನ್ನು ಜೇಬಿಗಿಳಿಸಿಕೊಳ್ಳುತ್ತಾ ಬಂದಿದ್ದಾರೆ.
ಕ್ರಿಕೆಟ್ ಹೊರತುಪಡಿಸಿ ಜಸ್ಪ್ರೀತ್ ಬುಮ್ರಾ ಹಲವು ದೊಡ್ಡ ದೊಡ್ಡ ಕಂಪನಿಗಳ ಎಂಡೋರ್ಸ್‌ಮೆಂಟ್ ಹೊಂದಿದ್ದಾರೆ. ಈ ಪೈಕಿ ಕಲ್ಟ್‌ಸ್ಪೋರ್ಟ್(Cultsport), ಬೋಟ್(boAt), ಡ್ರೀಮ್ 11(Dream 11) ಪರ ಜಾಹಿರಾತು ನೀಡುತ್ತಾ ಬಂದಿದ್ದಾರೆ.
ಇನ್ನು ಜಸ್ಪ್ರೀತ್ ಬುಮ್ರಾ ಮರ್ಸಿಡೀಸ್ ಮೇಬ್ಯಾಚ್ S 560 ಕಾರನ್ನು ಹೊಂದಿದ್ದಾರೆ. ಈ ಐಶಾರಾಮಿ ಮರ್ಸಿಡೀಸ್ ಕಾರಿನ ಬೆಲೆ ಭಾರತದಲ್ಲಿ ಬರೋಬ್ಬರಿ 2 ಕೋಟಿ ರುಪಾಯಿಗಳು.
ತೀರಾ ಕಡುಬಡತನದಲ್ಲಿ ಹುಟ್ಟಿ ಬೆಳೆದ ಜಸ್ಪ್ರೀತ್ ಬುಮ್ರಾ ಇದೀಗ ಅಹಮದಾಬಾದ್‌ನಲ್ಲಿ ಪ್ರತಿಷ್ಠಿತ ಪ್ರದೇಶದಲ್ಲಿ ಐಶಾರಾಮಿ ಬಂಗಲೆಯನ್ನೂ ಹೊಂದಿದ್ದಾರೆ. ಈ ಬಂಗಲೆಯಲ್ಲೇ ಅವರ ಕುಟುಂಬ ವಾಸವಾಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.