ಗಂಭೀರ ಪ್ರಮಾಣದ ನೋವು ಕಾಣಿಸಿಕೊಂಡಿದ್ದರಿಂದ ಸ್ಟೇನ್ ಅವರಿಗೆ ಆಸೀಸ್ ಸರಣಿಯಿಂದ ವಿಶ್ರಾಂತಿ ನೀಡಲಾಗಿದೆ.

ಪರ್ತ್(ನ.04): ದಕ್ಷಿಣ ಆಫ್ರಿಕಾದ ವೇಗದ ಬೌಲರ್ ಡೇಲ್ ಸ್ಟೇನ್ ಮತ್ತೆ ಭುಜದ ನೋವಿಗೆ ತುತ್ತಾಗಿದ್ದು, ಆಸ್ಟ್ರೇಲಿಯಾ ವಿರುದ್ಧದ ಸರಣಿಯಿಂದ ಹೊರಬಿದ್ದಿದ್ದಾರೆ.

ಮೊದಲ ಟೆಸ್ಟ್'ನ ಎರಡನೇ ದಿನವಾದ ಶುಕ್ರವಾರದ ಆಟದ ವೇಳೆ ಸ್ಟೇನ್ ತಮ್ಮ 12ನೇ ಓವರ್‌ನ 4ನೇ ಎಸೆತವನ್ನು ಎಸೆಯುವ ವೇಳೆ ಭುಜದ ನೋವಿಗೆ ಒಳಗಾದರು. ಆ ಕೂಡಲೇ ಸ್ಟೇನ್ ಅವರನ್ನು ತಂಡದ ಪಿಸಿಯೊ ಪೆವಿಲಿಯನ್‌ಗೆ ಕರೆದುಕೊಂಡು ಹೋಗಿ ಪ್ರಾಥಮಿಕ ಚಿಕಿತ್ಸೆ ನೀಡಿದರು. ಆದರೂ ಗಂಭೀರ ಪ್ರಮಾಣದ ನೋವು ಕಾಣಿಸಿಕೊಂಡಿದ್ದರಿಂದ ಸ್ಟೇನ್ ಅವರಿಗೆ ಆಸೀಸ್ ಸರಣಿಯಿಂದ ವಿಶ್ರಾಂತಿ ನೀಡಲಾಗಿದೆ.

ಸ್ಟೇನ್, ಭಾರತ ಪ್ರವಾಸ ಕೈಗೊಂಡಿದ್ದ ವೇಳೆಯಿಂದಲೂ ಸತತವಾಗಿ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ.