ಸ್ಮಿತ್'ಗೆ ಮತ್ತೊಂದು ಅವಮಾನ

First Published 1, Apr 2018, 3:04 PM IST
Steve Smiths biography The Journey is slashed to just 2 Dollar
Highlights

ಅದು ಪುಸ್ತಕವನ್ನು ‘ಕ್ಲಿಯರ್ ಸೇಲ್’ ವಿಭಾಗದಲ್ಲಿ ಇಡಲಾಗಿದೆ. ಇದರ ಫೋಟೋಗಳು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿವೆ.

ಸಿಡ್ನಿ(ಏ.01): ಚೆಂಡು ವಿರೂಪ ಪ್ರಕರಣ ದಲ್ಲಿ ಸಿಕ್ಕಿದ್ದು 1 ವರ್ಷ ನಿಷೇಧಕ್ಕೆ ಗುರಿಯಾಗಿರುವ ಆಸ್ಟ್ರೇಲಿಯಾದ ಮಾಜಿ ನಾಯಕ ಸ್ಟೀವ್ ಸ್ಮಿತ್ ಅವಮಾನದ ಮೇಲೆ ಅವಮಾನ ಅನುಭವಿಸುತ್ತಿದ್ದಾರೆ. ಆಸ್ಟ್ರೇಲಿಯಾದ ಪುಸ್ತಕ

ಮಳಿಗೆಯೊಂದರಲ್ಲಿ ಸ್ಮಿತ್ ಆತ್ಮ ಚರಿತ್ರೆ ‘ದಿ ಜರ್ನಿ ಸ್ಟೀವ್ ಸ್ಮಿತ್' ಬೆಲೆಯನ್ನು 24 ಆಸ್ಟ್ರೇಲಿಯ ಡಾಲರ್ (ಅಂದಾಜು 1200 ರು.)ರಿಂದ ಕೇವಲ 2 ಆಸ್ಟ್ರೇಲಿಯ ಡಾಲರ್ (ಅಂದಾಜು 100 ರು.)ಗೆ ಇಳಿಸಲಾಗಿದೆ. ಅದು ಪುಸ್ತಕವನ್ನು ‘ಕ್ಲಿಯರ್ ಸೇಲ್’ ವಿಭಾಗದಲ್ಲಿ ಇಡಲಾಗಿದೆ. ಇದರ ಫೋಟೋಗಳು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿವೆ.  ಆದರೆ ಸ್ಮಿತ್ ಆತ್ಮ ಚರಿತ್ರೆಯ  ಬೆಲೆ  ಆನ್ ಲೈನ್'ನಲ್ಲಿ  ಈಗಲೂ 24 ಡಾಲರ್ ಇದೆ. ಇತ್ತೀಚೆಗಷ್ಟೇ ಪುಸ್ತಕ ಮಳಿಗೆಯೊಂದು  ಆತ್ಮ ಚರಿತ್ರೆಯನ್ನು ಅಪರಾಧ ವಿಭಾಗದಲ್ಲಿ ಇರಿಸಿದ್ದು ಭಾರೀ ಸುದ್ದಿಯಾಗಿತ್ತು.

loader