ಒತ್ತಡ ಮತ್ತು ಅಭಿಮಾನಿಗಳ ಟೀಕೆಗಳಿಂದ ಜರ್ಜರಿತರಾಗಿರುವ ಸ್ಮಿತ್, ಶೀಘ್ರದಲ್ಲಿ ಆಸ್ಟ್ರೇಲಿಯಾ ತಂಡವನ್ನು ಮತ್ತದೇ ಹಳೆಯ ಟ್ರ್ಯಾಕ್‌'ಗೆ ತಂದು ನಿಲ್ಲಿಸುವ ವಿಶ್ವಾಸವಿದೆ- ರಿಕಿ ಪಾಂಟಿಂಗ್
ಅಡಿಲೇಡ್(ನ.24): ಇತ್ತೀಚಿನ ದಿನಗಳಲ್ಲಿ ಕಳಪೆ ಪ್ರದರ್ಶನದಿಂದ ಕಂಗೆಟ್ಟಿರುವ ಆಸ್ಟ್ರೇಲಿಯಾ ತಂಡವನ್ನು ಮುಂದಿನ ದಿನಗಳಲ್ಲಿ ಪ್ರಭಾವಿಯಾಗಿ ಮುನ್ನಡೆಸಲು ಸ್ಟೀವ್ ಸ್ಮಿತ್ ಸಮರ್ಥರಾಗಿದ್ದಾರೆ ಎಂದು ಆಸೀಸ್ನ ಮಾಜಿ ನಾಯಕ ರಿಕಿ ಪಾಂಟಿಂಗ್ ಹೇಳಿದ್ದಾರೆ.
ಒತ್ತಡ ಮತ್ತು ಅಭಿಮಾನಿಗಳ ಟೀಕೆಗಳಿಂದ ಜರ್ಜರಿತರಾಗಿರುವ ಸ್ಮಿತ್, ಶೀಘ್ರದಲ್ಲಿ ಆಸ್ಟ್ರೇಲಿಯಾ ತಂಡವನ್ನು ಮತ್ತದೇ ಹಳೆಯ ಟ್ರ್ಯಾಕ್'ಗೆ ತಂದು ನಿಲ್ಲಿಸುವ ವಿಶ್ವಾಸವಿದೆ ಎಂದಿದ್ದಾರೆ.
ಈ ಹಿಂದೆ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯನ್ನು 3-0ಯಿಂದ ಆಸ್ಟ್ರೇಲಿಯಾ ಸೋಲು ಕಂಡಿತ್ತು. ಇದೀಗ ದಕ್ಷಿಣ ಆಫ್ರಿಕಾ ವಿರುದ್ಧದ 3 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ಸ್ಮಿತ್ ಪಡೆ ಪರಾಭವ ಹೊಂದಿದೆ. ಒಂದು ಕಾಲದಲ್ಲಿ ಕ್ರಿಕೆಟ್ ಸಾಮ್ರಾಟನಾಗಿ ಮೆರೆದ ಆಸೀಸ್ ಸೋಲಿನ ಸರಪಳಿಯಿಂದ ತಪ್ಪಿಸಿಕೊಳ್ಳಲು ಹೆಣಗಾಡುತ್ತಿದೆ.
