ಬಾರ್ಬಡೋಸ್(ಸೆ.03): ಬಾಲ್ ಟ್ಯಾಂಪರ್‌ ನಡೆಸಿ ಒಂದು ವರ್ಷ ನಿಷೇಧಕ್ಕೊಳಗಾಗಿರುವ ಆಸ್ಟ್ರೇಲಿಯಾ ನಾಯಕ ಸ್ಟೀವ್ ಸ್ಮಿತ್ ಐಪಿಎಲ್ ಸೇರಿದಂತೆ ಹಲವು ಟೂರ್ನಿಯಿಂದಲೂ ದೂರ ಉಳಿಯಬೇಕಾಯಿತು. ಇದೀಗ ಕೆರಿಬಿಯನ್ ಪ್ರಿಮಿಯರ್ ಲೀಗ್ ಟೂರ್ನಿಯಿಂದಲೂ ಸ್ಮಿತ್ ಹೊರಬಿದ್ದಿದ್ದಾರೆ.

ಸಿಪಿಎಲ್ ಟೂರ್ನಿಯಲ್ಲಿ ಬಾರ್ಬಡೋಸ್ ಟ್ರೈಡೆಂಟ್ ತಂಡದ ಪರ ಆಡುತ್ತಿದ್ದ ಸ್ಟೀವ್ ಸ್ಮಿತ್ ಮುಂದಿನ ಪಂದ್ಯಗಳಿಂದ ಹೊರಗುಳಿಯಲಿದ್ದಾರೆ.  ಇಂಜುರಿಗೆ ತುತ್ತಾಗಿರುವ ಸ್ಟೀವ್ ಸ್ಮಿತ್ ಸಿಪಿಎಲ್ ಟೂರ್ನಿಗೆ ಲಭ್ಯರಿಲ್ಲ ಎಂದು ಬಾರ್ಬಡೋಸ್ ನಾಯಕ ಜೇಸನ್ ಹೋಲ್ಡರ್ ಸ್ಪಷ್ಟಪಡಿಸಿದ್ದಾರೆ.

ಬಾಲ್ ಟ್ಯಾಂಪರಿಂಗ್‌ನಿಂದಾಗಿ ನಿಷೇಧಕ್ಕೊಳಗಾದ ಸ್ಟೀವ್ ಸ್ಮಿತ್ ಬಹುತೇಕ ಎಲ್ಲಾ ಮಾದರಿ ಕ್ರಿಕೆಟ್‌ನಿಂದ ದೂರ ಉಳಿಯಬೇಕಾಯಿತು. ಹೀಗಾಗಿ ಇದೇ ಮೊದಲ ಬಾರಿಗೆ ಸಿಪಿಎಲ್ ಟೂರ್ನಿ ಆಡಲು ಮುಂದಾಗಿದ್ದರು. ಆದರೆ ಇಂಜುರಿ ಕಾರಣದಿಂದ ಸಿಪಿಎಲ್ ಟೂರ್ನಿ ಆಡೋ ಅವಕಾಶವನ್ನು ಕಳೆದುಕೊಂಡಿದ್ದಾರೆ.