ನಾಯಕ ಸ್ಟೀವ್ ಸ್ಮಿತ್ ಹಾಗೂ ಗ್ಲೇನ್ ಮ್ಯಾಕ್ಸ್'ವೆಲ್ ಐದನೇ ವಿಕೆಟ್'ಗೆ ಮುರಿಯದ 159 ರನ್ ಜೊತೆಯಾಟವಾಡುವ ಮೂಲಕ ಸಂಕಷ್ಟದಿಂದ ಪಾರುಮಾಡಿದರು.
ರಾಂಚಿ(ಮಾ.16): ಆಸೀಸ್ ನಾಯಕ ಸ್ಟೀವ್ ಸ್ಮಿತ್(117*) ಹಾಗೂ ಗ್ಲೇನ್ ಮ್ಯಾಕ್ಸ್'ವೆಲ್(82*) ಶತಕದ ಜೊತೆಯಾಟದ ನೆರವಿನಿಂದ ಆಸ್ಟ್ರೇಲಿಯಾ ತಂಡ ಮೊದಲ ದಿನವೇ ಬೃಹತ್ ಮೊತ್ತ ಕಲೆಹಾಕಿದೆ.
ರಾಂಚಿಯಲ್ಲಿ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಟ್ರೋಫಿಯ ಮೂರನೇ ಟೆಸ್ಟ್ ಪಂದ್ಯದ ಮೊದಲ ದಿನದಾಟದ ಮುಕ್ತಾಯಕ್ಕೆ ಆಸ್ಟ್ರೇಲಿಯಾ ತಂಡ ನಾಲ್ಕು ವಿಕೆಟ್ ನಷ್ಟಕ್ಕೆ 299 ರನ್ ಕಲೆಹಾಕಿ ಸುಭದ್ರ ಸ್ಥಿತಿಯತ್ತ ದಾಪುಗಾಲಿಟ್ಟಿದೆ. ಒಂದು ಹಂತದಲ್ಲಿ 140 ರನ್'ಗಳಿಗೆ ನಾಲ್ಕು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಕಾಂಗರೂ ಪಡೆಯನ್ನು ನಾಯಕ ಸ್ಟೀವ್ ಸ್ಮಿತ್ ಹಾಗೂ ಗ್ಲೇನ್ ಮ್ಯಾಕ್ಸ್'ವೆಲ್ ಐದನೇ ವಿಕೆಟ್'ಗೆ ಮುರಿಯದ 159 ರನ್ ಜೊತೆಯಾಟವಾಡುವ ಮೂಲಕ ಸಂಕಷ್ಟದಿಂದ ಪಾರುಮಾಡಿದರು.
ಆಸೀಸ್ ಆಲ್ರೌಂಡರ್ ಮಿಚೆಲ್ ಮಾರ್ಶ್ ಗಾಯದಿಂದಾಗಿ ತಂಡದಲ್ಲಿ ಸ್ಥಾನ ಪಡೆದ ಮ್ಯಾಕ್ಸ್'ವೆಲ್ ಸಿಕ್ಕ ಅವಕಾಶವನ್ನು ಸರಿಯಾಗಿಯೇ ಬಳಸಿಕೊಳ್ಳುವಲ್ಲಿ ಯಶಸ್ವಿಯಾದರು. ಮಾಕ್ಸ್'ವೆಲ್(82*) ಚೊಚ್ಚಲ ಟೆಸ್ಟ್ ಅರ್ಧಶತಕ ಪೂರೈಸಿದ್ದು, ಶತಕದತ್ತ ಮುನ್ನುಗ್ಗಿದ್ದಾರೆ. ಇನ್ನು ಅದ್ಭುತ ಫಾರ್ಮ್'ನಲ್ಲಿರುವ ಸ್ಟೀವ್ ಸ್ಮಿತ್ 19ನೇ ಟೆಸ್ಟ್ ಶತಕ ಸಿಡಿಸುವಲ್ಲಿ ಯಶಸ್ವಿಯಾದರು.
ಕೊಹ್ಲಿ ಪಾಲಿಗೆ ವರವಾದ ಡಿಆರ್'ಎಸ್; ಪೂಜಾರ ಕ್ಯಾಚ್ ಹಿಡಿತ ರೀತಿಯೂ ಅದ್ಭುತ..!
ಇನ್ನು ಭಾರತದ ಪರ ವೇಗಿ ಉಮೇಶ್ ಯಾದವ್ ಎರಡು ವಿಕೆಟ್ ಪಡೆದರೆ, ಅಶ್ವಿನ್ ಹಾಗೂ ಜಡೇಜಾ ತಲಾ ಒಂದು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.
ಸಂಕ್ಷಿಪ್ತ ಸ್ಕೋರ್:
ಆಸ್ಟ್ರೇಲಿಯಾ ಮೊದಲ ಇನಿಂಗ್ಸ್ : 299/4
ಸ್ಟೀವ್ ಸ್ಮಿತ್ 117*
ಗ್ಲೇನ್ ಮ್ಯಾಕ್ಸ್'ವೆಲ್ 82*
ಬೌಲಿಂಗ್:
ಉಮೇಶ್ ಯಾದವ್ 63/2
