ಬೆಂಗಳೂರು ಪಂದ್ಯದಿಂದ ಹೊರಗುಳಿದಿದ್ದ ಟೀಂ ಇಂಡಿಯಾದ ಪ್ರಮುಖ ವೇಗಿಗಳಾದ ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್ ಹಾಗೂ ಚೈನಾಮ್ಯಾನ್ ಖ್ಯಾತಿಯ ಸ್ಪಿನ್ನರ್ ಕುಲ್ದೀಪ್ ಯಾದವ್ ತಂಡ ಕೂಡಿಕೊಂಡಿದ್ದಾರೆ.

ನಾಗ್ಪುರ(ಅ.01): ಭಾರತ- ಆಸ್ಟ್ರೇಲಿಯಾ ನಡುವಿನ ಏಕದಿನ ಸರಣಿಯ ಕೊನೆಯ ಪಂದ್ಯಕ್ಕೆ ಇಂದು ವಿಧರ್ಭ ಮೈದಾನ ಸಾಕ್ಷಿಯಾಗುತ್ತಿದ್ದು, ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಸ್ಟೀವ್ ಸ್ಮಿತ್ ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ.

ಬೆಂಗಳೂರು ಪಂದ್ಯದಿಂದ ಹೊರಗುಳಿದಿದ್ದ ಟೀಂ ಇಂಡಿಯಾದ ಪ್ರಮುಖ ವೇಗಿಗಳಾದ ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್ ಹಾಗೂ ಚೈನಾಮ್ಯಾನ್ ಖ್ಯಾತಿಯ ಸ್ಪಿನ್ನರ್ ಕುಲ್ದೀಪ್ ಯಾದವ್ ತಂಡ ಕೂಡಿಕೊಂಡಿದ್ದಾರೆ. ಈ ಪಂದ್ಯವನ್ನು ಗೆದ್ದು ಐಸಿಸಿ ಶ್ರೇಯಾಂಕದಲ್ಲಿ ಅಗ್ರಸ್ಥಾನಕ್ಕೇರಲು ಕೊಹ್ಲಿ ಪಡೆ ಚಿತ್ತ ನೆಟ್ಟಿದೆ.

Scroll to load tweet…

ಭಾರತ: ರಹಾನೆ, ರೋಹಿತ್ ಶರ್ಮಾ, ಕೊಹ್ಲಿ, ಜಾದವ್, ಮನೀಶ್ ಪಾಂಡೆ, ಧೋನಿ, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಭುವಿ, ಕುಲ್ದೀಪ್, ಬುಮ್ರಾ

ಆಸ್ಟ್ರೇಲಿಯಾ:  ಸ್ಟೀವ್ ಸ್ಮಿತ್, ವಾರ್ನರ್, ಫಿಂಚ್, ತ್ರಾವೀಸ್ ಹೆಡ್, ಹ್ಯಾಂಡ್ಸ್'ಕಂಬ್, ಸ್ಟೋನಿಸ್, ವೇಡ್, ಫಾಲ್ಕ್'ನರ್, ಕಮ್ಮಿನ್ಸ್, ಕೌಲ್ಟರ್-ನೈಲ್, ಜಂಪಾ