ಕೋಲ್ಕತ ನೈಟ್'ರೈಡರ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಪುಣೆ ತಂಡದ ನಾಯಕ ಸ್ಟೀವ್ ಸ್ಮಿತ್ ಹಾಗೂ ಬೆನ್ ಸ್ಟೋಕ್ಸ್ ಸಿಕ್ಸ್ ತಡೆಯುಲು ಹೋಗಿ ಮಾಡಿಕೊಂಡ ಅವಾಂತರವನ್ನು ನೀವೂ ಒಮ್ಮೆ ನೋಡಿ...

ಬೆಂಗಳೂರು(ಮೇ.04): ಐಪಿಎಲ್ ಕ್ರಿಕೆಟ್ ಟೂರ್ನಿಯಲ್ಲಿ ದಿನದಿಂದ ದಿನಕ್ಕೆ ಪಂದ್ಯಗಳ ರೋಚಕತೆ ಹೆಚ್ಚುತ್ತಲೇ ಸಾಗುತ್ತಿವೆ. ಒಂದೆಡೆ ಬ್ಯಾಟ್ಸ್'ಮನ್'ಗಳು ಸಿಕ್ಸರ್-ಬೌಂಡರಿಗಳ ಮೂಲಕ ಅಭಿಮಾನಿಗಳನ್ನು ರಂಜಿಸಿದರೆ, ಇನ್ನೊಂದೆಡೆ ಬೌಲರ್'ಗಳು ಚಾಣಾಕ್ಷ ಬೌಲಿಂಗ್ ಮೂಲಕ ಬ್ಯಾಟ್ಸ್'ಮನ್'ಗಳನ್ನು ಕಟ್ಟಿಹಾಕುವಲ್ಲೂ ಯಶಸ್ವಿಯಾಗುತ್ತಿದ್ದಾರೆ.

ಈ ನಡುವೆ ಕ್ಷೇತ್ರರಕ್ಷಕರೂ ತಮ್ಮ ಅಸಾಧಾರಣ ಫೀಲ್ಡಿಂಗ್ ಮೂಲಕ ಕ್ರಿಕೆಟ್ ಪ್ರೇಮಿಗಳ ಮನಸೂರೆಗೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಕ್ಷೇತ್ರರಕ್ಷಣೆ ಮಾಡುವಾಗ ಕೆಲವೊಮ್ಮೆ ಡಿಕ್ಕಿ ತೀವ್ರವಾಗಿ ಗಾಯಗೊಂಡ ಕ್ಷೇತ್ರರಕ್ಷಕರನ್ನೂ ನೀವು ನೋಡಿರುತ್ತೀರ. ಆದರೆ ಕೋಲ್ಕತ ನೈಟ್'ರೈಡರ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಪುಣೆ ತಂಡದ ನಾಯಕ ಸ್ಟೀವ್ ಸ್ಮಿತ್ ಹಾಗೂ ಬೆನ್ ಸ್ಟೋಕ್ಸ್ ಸಿಕ್ಸ್ ತಡೆಯುಲು ಹೋಗಿ ಮಾಡಿಕೊಂಡ ಅವಾಂತರವನ್ನು ನೀವೂ ಒಮ್ಮೆ ನೋಡಿ...

ಆದ್ರೂ ಅವರ ಡೆಡಿಕೇಶನ್'ಗೆ ನಿಜಕ್ಕೂ ಹ್ಯಾಟ್ಸ್ ಆಫ್ ಹೇಳಲೇಬೇಕು ಅಲ್ವಾ...?