ಈ ಸಂಭಾವನೆ ಅಂತರರಾಷ್ಟ್ರೀಯ ಟೆಸ್ಟ್ ಹಾಗೂ ಏಕದಿನಕ್ಕೆ ಮಾತ್ರ ಸೀಮಿತವಾಗಿದ್ದು, ಟಿ20 ಹಾಗೂ ಐಪಿಎಲ್'ನಂಥ ದೇಶಿ ಕ್ರಿಕೆಟ್'ಗೆ ಅನ್ವಯವಾಗುವುದಿಲ್ಲ.

ಮುಂಬೈ(ಅ.19): ವಿಶ್ವ ಕ್ರಿಕೆಟ್'ನಲ್ಲಿ ಭಾರತದ ವಿರಾಟ್ ಕೊಹ್ಲಿ ಹಾಗೂ ಆಸ್ಟ್ರೇಲಿಯಾದ ಸ್ಟೀವನ್ ಸ್ಮಿತ್ ಇವರಿಬ್ಬರಲ್ಲಿ ಯಾರು ಶ್ರೇಷ್ಠ ಎಂದು ಪುಟಾಣಿ ಮಗುವನ್ನು ಕೇಳಿದರೂ ಅದು ಕೊಹ್ಲಿ ಹೆಸರನ್ನು ಹೇಳುತ್ತದೆ.

ಆದರೆ ಸಂಭಾವನೆ ವಿಚಾರದಲ್ಲಿ ಸ್ಮಿತ್ ಅವರು ಕೊಹ್ಲಿಯನ್ನು ಮೀರಿಸಿದ್ದಾರೆ. ವಿಶ್ವ ಕ್ರಿಕೆಟ್ ತಂಡಗಳ ನಾಯಕರಲ್ಲಿ ಸ್ಮಿತ್ ಅವರು ವಾರ್ಷಿಕ 1.46 ಮಿಲಿಯನ್ ಡಾಲರ್ ಸಂಭಾವನೆ ಪಡೆದರೆ, ಇಂಗ್ಲೆಡ್'ನ ಜೋರೂಟ್ 1.27 ಮಿಲಿಯನ್ ಡಾಲರ್ ಸಂಭಾವನೆ ಪಡೆಯುತ್ತಾರೆ. ಅಂದಾಜು 1 ಮಿಲಿಯನ್ ಡಾಲರ್ ವೇತನ ಪಡೆಯುವ ಭಾರತದ ನಾಯಕ ವಿರಾಟ್ ಕೊಹ್ಲಿ ಮೂರನೇ ಸ್ಥಾನದಲ್ಲಿದ್ದರೆ.

ಪಾಕ್ ಆಟಗಾರರಿಗೆ ತೀರ ಕಡಿಮೆ

ಈ ಸಂಭಾವನೆ ಅಂತರರಾಷ್ಟ್ರೀಯ ಟೆಸ್ಟ್ ಹಾಗೂ ಏಕದಿನಕ್ಕೆ ಮಾತ್ರ ಸೀಮಿತವಾಗಿದ್ದು, ಟಿ20 ಹಾಗೂ ಐಪಿಎಲ್'ನಂಥ ದೇಶಿ ಕ್ರಿಕೆಟ್'ಗೆ ಅನ್ವಯವಾಗುವುದಿಲ್ಲ. ಇವೆರಡನ್ನು ಸೇರಿಸಿಕೊಂಡರೆ ಕೊಹ್ಲಿಯೇ ಶ್ರೀಮಂತ ಕ್ರಿಕೆಟಿಗ. ಜೊತೆಗೆ ಜಾಹಿರಾತುಗಳ ಸಂಭಾವನೆ ಒಳಗೊಳ್ಳುತ್ತದೆ.

ಪಾಕಿಸ್ತಾನದ ಕ್ರಿಕೆಟ್ ನಾಯಕರಾದ ಸರ್ಫ್'ರಾಜ್ ಅಹಮದ್ ಅಂತರರಾಷ್ಟ್ರೀಯ ಕ್ರಿಕೆಟ್'ನಲ್ಲಿ ಅತೀ ಕಡಿಮೆ ಸಂಭಾವನೆ ಪಡೆಯುವ ಆಟಗಾರರಾಗಿದ್ದಾರೆ. ಇವರು ಪಡೆಯುವ ವಾರ್ಷಿಕ ವೇತನ 74 ಸಾವಿರ ಡಾಲರ್, ಇವರಿಗಿಂತ ಐರ್ಲೆಂಡ್ ತಂಡದ ನಾಯಕ 75 ಸಾವಿರ ಡಾಲರ್ ಪಡೆದರೆ ಜಿಂಬಾಬ್ವೆ ಕ್ಯಾಪ್ಟ'ನ್'ಗೆ 86 ಸಾವಿರ ಡಾಲರ್ ಸಿಗುತ್ತದೆ.

--