2019ರ ಐಪಿಎಲ್ ಟೂರ್ನಿಗೆ ಸ್ಮಿತ್-ವಾರ್ನರ್ ಕಮ್‌ಬ್ಯಾಕ್!
2019ರ ಐಪಿಎಲ್ ಟೂರ್ನಿಗೆ ಆಸಿಸ್ ಕ್ರಿಕೆಟಿಗರಾದ ಸ್ಟೀವ್ ಸ್ಮಿತ್ ಹಾಗೂ ಡೇವಿಡ್ ವಾರ್ನರ್ ಐಪಿಎಲ್ ಮೂಲಕ ಕ್ರಿಕೆಟ್‌ಗೆ ಮರಳಲು ಸಜ್ಜಾಗಿದ್ದಾರೆ. ನಿಷೇಧದ ಶಿಕ್ಷೆ ಅನುಭವಿಸುತ್ತಿರುವ ಸ್ಮಿತ್ ಹಾಗೂ ವಾರ್ನರ್ ಐಪಿಎಲ್ ಆಡುವುದು ಹೇಗೆ? ಇಲ್ಲಿದೆ ಹೆಚ್ಚಿನ ವಿವರ.
ಮುಂಬೈ(ನ.18): ಬಾಲ್ ಟ್ಯಾಂಪರಿಂಗ್ ಪ್ರಕರಣದಿಂದ ಒಂದು ವರ್ಷ ನಿಷೇಧಕ್ಕೊಳಗಾಗಿರುವ ಆಸ್ಟ್ರೇಲಿಯಾ ನಾಯಕ ಸ್ಟೀವ್ ಸ್ಮಿತ್ ಹಾಗೂ ಉಪನಾಯಕ ಡೇವಿಡ್ ವಾರ್ನರ್ 2019ರ ಐಪಿಎಲ್ ಟೂರ್ನಿಗೆ ಕಮ್‌ಬ್ಯಾಕ್ ಮಾಡಲಿದ್ದಾರೆ.
12ನೇ ಆವೃತ್ತಿ ಐಪಿಎಲ್ ಟೂರ್ನಿ ಮಾರ್ಚ್ ಅಂತ್ಯದಲ್ಲಿ ಆರಂಭಗೊಳ್ಳಲಿದೆ. ಈ ವೇಳೆ ಸ್ಮಿತ್ ಹಾಗೂ ವಾರ್ನರ್ ನಿಷೇಧ ಅಂತ್ಯವಾಗಲಿದೆ. ಇದೇ ಕಾರಣದಿಂದ ರಾಜಸ್ಥಾನ ರಾಯಲ್ಸ್ ಹಾಗೂ ಸನ್ ರೈಸರ್ಸ್ ಹೈದರಾಬಾದ್ ತಂಡ ಈ ಇಬ್ಬರೂ ಆಟಗಾರರನ್ನ ರಿಟೈನ್ ಮಾಡಿಕೊಂಡಿದೆ.
ಐಪಿಎಲ್ ಮೂಲಕ ಮತ್ತೆ ಕ್ರಿಕೆಟ್‌ಗೆ ಮರಳಲಿರುವ ಸ್ಮಿತ್ ಹಾಗೂ ವಾರ್ನರ್, 2019ರ ವಿಶ್ವಕಪ್ ಟೂರ್ನಿಯಲ್ಲಿ ಆಸಿಸ್ ತಂಡವನ್ನ ಪ್ರತಿನಿಧಿಸಲಿದ್ದಾರೆ. ಆದರೆ ಭಾರತ ವಿರುದ್ಧದ ದ್ವಿಪಕ್ಷೀಯ ಸರಣಿಗೆ ಈ ಇಬ್ಬರೂ ಆಟಗಾರರು ಕಣಕ್ಕಿಳಿಯುವುದಿಲ್ಲ.