ಒ’ಕೀಫೆ ಕಳೆದ ವರ್ಷ ಸಿಡ್ನಿ ಹೋಟೆಲ್ ಒಂದರಲ್ಲಿ ಇದೇ ರೀತಿ ಕುಡಿದು ರಂಪ ಮಾಡಿಕೊಂಡಿದ್ದರು.

ಸಿಡ್ನಿ(ಏ.07): ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯ ಪುಣೆ ಟೆಸ್ಟ್‌'ನಲ್ಲಿ ಆಸ್ಟ್ರೇಲಿಯಾಗೆ 333 ರನ್ ಗೆಲುವು ತಂದುಕೊಟ್ಟ ಆಸ್ಟ್ರೇಲಿಯಾದ ಸ್ಪಿನ್ನರ್ ಸ್ಟೀವನ್ ಒ’ಕೀಫೆ ಕುಡಿದು ಅನುಚಿತ ವರ್ತನೆ ತೋರಿದ್ದಕ್ಕಾಗಿ ಕ್ರಿಕೆಟ್ ಆಸ್ಟ್ರೇಲಿಯಾ ಅವರಿಗೆ ಈ ಋತುವಿನ ದೇಶೀಯ ಕ್ರಿಕೆಟ್ ಪಂದ್ಯಾವಳಿಯಿಂದ ನಿಷೇಧಿಸಲಾಗಿದೆ.

ಇದಷ್ಟೇ ಅಲ್ಲದೇ 32 ವರ್ಷದ ಒ’ಕೀಫೆಗೆ 15,000 ಡಾಲರ್ (ಅಂದಾಜು 96 ಲಕ್ಷ ರು.) ದಂಡ ವಿಧಿಸಿದೆ.

‘‘ಅನುಚಿತ ವರ್ತನೆ ತೋರುವ ಯಾವುದೇ ಆಟಗಾರರನ್ನೂ ಸಹಿಸಿಕೊಳ್ಳಲಾಗದು’’ ಎಂದು ಕ್ರಿಕೆಟ್ ಆಸ್ಟ್ರೇಲಿಯಾದ ಪ್ರಧಾನ ನಿರ್ವಾಹಕ ಪ್ಯಾಟ್ ಹೊವಾರ್ಡ್ ಹೇಳಿದ್ದಾರೆ.

ಅಂದಹಾಗೆ ಒ’ಕೀಫೆ ಕಳೆದ ವರ್ಷ ಸಿಡ್ನಿ ಹೋಟೆಲ್ ಒಂದರಲ್ಲಿ ಇದೇ ರೀತಿ ಕುಡಿದು ರಂಪ ಮಾಡಿಕೊಂಡಿದ್ದರು.