ಟೀಮ್ಇಂಡಿಯಾ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಕೈಗಳಿಗೆ ಗ್ಲೌಸ್ ಧರಿಸಿದ್ದರು. ಆದರೆ ಈ ಬಾರಿ ಬ್ಯಾಟ್ ಇರಲಿಲ್ಲ. ಬದಲಾಗಿ ಪ್ಲಾಸ್ಟಿಕ್ ಕಸಗಳಿದ್ದವು. ಮುಂಬೈನ ಬೀಚ್ ಕ್ಲೀನಿಂಗ್‌ನಲ್ಲಿ ಪಾಲ್ಗೊಂಡ ರೋಹಿತ್ ಶರ್ಮಾ ಸ್ವಚ್ಚತಾ ಕಾರ್ಯದಲ್ಲಿ ತೊಡಗಿಸಿಕೊಂಡರು. 

ಮುಂಬೈ(ಜೂನ್.3): ಸಮಾಜದಲ್ಲಿ ಜಾಗೃತಿ ಮೂಡಿಸೋ ಕಾರ್ಯಕ್ರಮಗಳಲ್ಲಿ ಟೀಮ್ಇಂಡಿಯಾ ಕ್ರಿಕೆಟಿಗರು ಇತರ ಕ್ರಿಕೆಟಿಗರಿಗಿಂತ ಮುಂದಿದ್ದಾರೆ. ಇದೀಗ ಟೀಮ್ಇಂಡಿಯಾ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಐಪಿಎಲ್ ಟೂರ್ನಿ ಬಳಿಕ ವಿಶ್ರಾಂತಿಯಲ್ಲಿರುವ ರೋಹಿತ್ ಶರ್ಮಾ ಇದೀಗ ಮುಂಬೈ ಬೀಚ್ ಸ್ವಚ್ಚತಾ ಕಾರ್ಯಕ್ಕೆ ಧುಮುಕಿದ್ದಾರೆ.

ಮುಂಬೈನ ವರ್ಸೋವಾ ಸಮುದ್ರ ತೀರದಲ್ಲಿ ಸ್ವಚ್ಚತಾ ಕಾರ್ಯ ಹಮ್ಮಿಕೊಳ್ಳಲಾಗಿತ್ತು. ವರ್ಸೋವಾ ಸಮುದ್ರ ಕಿನಾರೆಯ ಸುಮಾರು 200 ಕಿಮಿ ದೂರದ ವರೆಗೆ ಸ್ವಚ್ಚತೆ ನಡೆಸಲಾಯಿತು. ಸ್ವತಃ ರೋಹಿತ್ ಶರ್ಮಾ ವರ್ಸೋವಾ ಬೀಚ್ ಸುತ್ತ ಮುತ್ತ ಕ್ಲೀನ್ ಮಾಡಿದರು. ಬೀಚ್ ತೀರದಲ್ಲಿ ಬಿದ್ದಿರುವ ಪ್ಲಾಸ್ಟಿಕ್ ಸೇರಿದಂತೆ ಇತರ ವಸ್ತುಗಳನ್ನ ಹೆಕ್ಕಿ ತೆಗೆದು ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡರು.

Scroll to load tweet…

ಮುಂಬೈನ ಪರಿಸರ ಪ್ರೇಮಿಗಳ ಗುಂಪು ಮುಂಬೈ ಬೀಚ್ ಕ್ಲೀನಿಂಗ್ ಅಭಿಯಾನ ಮಾಡುತ್ತಿದೆ. ಇವರ ಜೊತೆ ಕೈಜೋಡಿಸಿದ ರೋಹಿತ್ ಶರ್ಮಾ, ಬೀಚ್ ಕ್ಲೀನ್ ಮಾಡಿದರು. ಇಷ್ಟೇ ಅಲ್ಲ ಪ್ಲಾಸ್ಟಿಕ್ ಆರೋಗ್ಯಕ್ಕೆ ಅಪಾಯಕಾರಿ. ಅದರಲ್ಲೂ ಸಮುದ್ರ ಕಿನಾರೆಯಲ್ಲಿನ ಪ್ಲಾಸ್ಟಿಕ್ ಮನುಷ್ಯರಿಗೆ ಮಾತ್ರವಲ್ಲ ಜಲಚರಗಳಿಗೂ ಮಾರಕ. ಇದೇ ಪ್ಲಾಸ್ಟಿಕ್‌ನಿಂದ ಮುಂಬೈ ಬೀಚ್‌ಗಳನ್ನ ಮುಕ್ತವಾಗಿಸೋ ಕಾರ್ಯದಲ್ಲಿ ಪಾಲ್ಗೊಂಡಿರುವುದು ಸಂತಸ ತಂದಿದೆ ಎಂದು ರೋಹಿತ್ ಶರ್ಮಾ ಟ್ವೀಟ್ ಮಾಡಿದ್ದಾರೆ.