Asianet Suvarna News Asianet Suvarna News

16000 ಕೋಟಿಗೆ ಐಪಿಎಲ್ ಮಾಧ್ಯಮ ಹಕ್ಕು!: ಹರಾಜಿನಲ್ಲಿ ಗೆದ್ದಿದ್ದು ಯಾರು ಗೊತ್ತಾ?

ಕ್ರಿಕೆಟ್ ಜಗತ್ತಿನ ಅತ್ಯಂತ ಶ್ರೀಮಂತ ಕ್ರೀಡಾಕೂಟ ಎಂದೇ ಹೆಸರಾಗಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟಿ20 ಪಂದ್ಯಾವಳಿಯ ಮಾಧ್ಯಮ ಹಕ್ಕು ಸ್ಟಾರ್ ಇಂಡಿಯಾ ಸಂಸ್ಥೆ ಪಾಲಾಗಿದೆ. ಟೀವಿ ಹಾಗೂ ಇತರೆ ಡಿಜಿಟಲ್ ಮಾಧ್ಯಮಗಳಲ್ಲಿ ಪಂದ್ಯಗಳ ನೇರಪ್ರಸಾರ ಸೇರಿದಂತೆ ಮಾಧ್ಯಮ ಚಟುವಟಿಕೆಗಳ ಹಕ್ಕುಗಳನ್ನು ನೀಡಿದ್ದರಿಂದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ (ಬಿಸಿಸಿಐ) ಬರೋಬ್ಬರಿ 16000 ಕೋಟಿ ರು.ಗಳಿಗಿಂತ ದೊಡ್ಡ ಮೊತ್ತದ ಹಣದ ಥೈಲಿ ದೊರಕಿದೆ.

Star India wins IPL media rights for next five years

ಮುಂಬೈ(ಸೆ.05): ಕ್ರಿಕೆಟ್ ಜಗತ್ತಿನ ಅತ್ಯಂತ ಶ್ರೀಮಂತ ಕ್ರೀಡಾಕೂಟ ಎಂದೇ ಹೆಸರಾಗಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟಿ20 ಪಂದ್ಯಾವಳಿಯ ಮಾಧ್ಯಮ ಹಕ್ಕು ಸ್ಟಾರ್ ಇಂಡಿಯಾ ಸಂಸ್ಥೆ ಪಾಲಾಗಿದೆ. ಟೀವಿ ಹಾಗೂ ಇತರೆ ಡಿಜಿಟಲ್ ಮಾಧ್ಯಮಗಳಲ್ಲಿ ಪಂದ್ಯಗಳ ನೇರಪ್ರಸಾರ ಸೇರಿದಂತೆ ಮಾಧ್ಯಮ ಚಟುವಟಿಕೆಗಳ ಹಕ್ಕುಗಳನ್ನು ನೀಡಿದ್ದರಿಂದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ (ಬಿಸಿಸಿಐ) ಬರೋಬ್ಬರಿ 16000 ಕೋಟಿ ರು.ಗಳಿಗಿಂತ ದೊಡ್ಡ ಮೊತ್ತದ ಹಣದ ಥೈಲಿ ದೊರಕಿದೆ.

ಕಳೆದ ಬಾರಿ 10 ವರ್ಷಗಳ ಅವಧಿಗೆ ಮಾಧ್ಯಮ ಹಕ್ಕು ಹರಾಜಾಗಿದ್ದು, ಆಗ 8000 ಕೋಟಿ ರು. ಗೆ ಬಿಕರಿಯಾಗಿತ್ತು. ಈಗ 5 ವರ್ಷಗಳ ಅವಧಿಗೆ ಅದರ ಎರಡು ಪಟ್ಟು ಮೊತ್ತ ಬಿಸಿಸಿಐ ಪಾಲಾಗಿರುವುದು ವಿಶೇಷ.

ದೇಶದ ವಾಣಿಜ್ಯನಗರಿಯಲ್ಲಿ ಸೋಮ ವಾರ ನಡೆದ ಹರಾಜಿನ ಸಂದ‘ರ್ದಲ್ಲಿ 16347.5 ಕೋಟಿ ನೀಡುವ ಆಫರ್ ನೀಡಿದ ಸ್ಟಾರ್ ಇಂಡಿಯಾ ಸಂಸ್ಥೆ ಐಪಿಎಲ್ ಮಾಧ್ಯಮ ಹಕ್ಕಿನ ವಾರಸುದಾರನಾಯಿತು. ಮುಂದಿನ 5 ವರ್ಷಗಳ ಕಾಲ ಸ್ಟಾರ್ ಇಂಡಿಯಾ ಸಂಸ್ಥೆ ಪ್ರಸಾರ ಸ್ವಾಮ್ಯ ಹೊಂ ದಿರಲಿದ್ದು, ಪ್ರತಿ ವರ್ಷ ಬಿಸಿಸಿಐ ಬೊಕ್ಕಸಕ್ಕೆ 3270 ಕೋಟಿ ಹರಿದು ಬರಲಿದೆ. 2018ರಿಂದ ಆರಂಭವಾಗಲಿರುವ ಈ ಒಡಂಬಡಿಕೆ 2022 ರವರೆಗೂ ಇರಲಿದೆ.

ದ್ವಿಗುಣ ಮೊತ್ತ:

ಐಪಿಎಲ್‌ಗೆ ಬೇಡಿಕೆ ಎಷ್ಟಿದೆ ಎನ್ನುವುದಕ್ಕೆ ಪ್ರಸಾರ ಹಕ್ಕಿನ ಹರಾಜೇ ಸಾಕ್ಷಿ. 2008ರಲ್ಲಿ ಸೋನಿ ಪಿಕ್ಚರ್ಸ್‌ 10 ವರ್ಷಗಳ ಅವಧಿಗೆ 8200 ಕೋಟಿ ನೀಡಿ ಪ್ರಸಾರ ಹಕ್ಕು ಪಡೆದುಕೊಂಡಿತ್ತು. ಆದರೀಗ ಕೇವಲ ಐದೇ ವರ್ಷಗಳಲ್ಲಿ ಬಿಸಿಸಿಐ ದುಪಟ್ಟು ಹಣ ಪಡೆಯಲಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸ್ಟಾರ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಉದಯ್ ಶಂಕರ್ ‘ಭಾರತ, ಕ್ರಿಕೆಟ್ ಹಾಗೂ ಐಪಿಎಲ್ ನಾಟಕೀಯ ರೀತಿಯಲ್ಲಿ ಬದಲಾಗಿದೆ. 2008ರಲ್ಲಿ ಇದ್ದ ಜನಪ್ರಿಯತೆಗಿಂತ ಎಷ್ಟೋ ಪಟ್ಟು ಹೆಚ್ಚು ಜನಪ್ರಿಯತೆ ಈಗಿದೆ’ ಎಂದಿದ್ದಾರೆ.

ಮಾಧ್ಯಮ ಹಕ್ಕು ಭಾರತ, ಗಲ್ಫ್ ರಾಷ್ಟ್ರ ಗಳು, ಆಫ್ರಿಕಾ, ಯುರೋಪ್, ಅಮೆರಿಕದಲ್ಲಿ ಟಿವಿ ಪ್ರಸಾರ ಮತ್ತು ಡಿಜಿಟಲ್ ಮಾಧ್ಯಮಕ್ಕೆ (ಮೊಬೈಲ್ ಹಾಗೂ ಅಂತರ್ಜಾಲ) ಇರಲಿದೆ. ಕುತೂಹಲಕಾರಿ ಅಂಶವೆಂದರೆ ಸ್ಟಾರ್ ಸಂಸ್ಥೆಗೆ ಪ್ರಬಲ ಸ್ಪರ್ಧಿಯಾಗಿದ್ದ ಸೋನಿ ಪಿಕ್ಚರ್ಸ್‌ ಒಟ್ಟು 11050 ಕೋಟಿಗೆ ಬಿಡ್ಡಿಂಗ್ ನಡೆಸಿತ್ತು. ಸ್ಟಾರ್ ಸಂಸ್ಥೆ ಬಿಡ್ಡಿಂಗ್ ನಡೆಸಿದ್ದು 6196 ಕೋಟಿಗೆ ಮಾತ್ರ. ಆದರೆ ನಿಯಮದ ಪ್ರಕಾರ ಸಂಸ್ಥೆಯೊಂದಿಗೆ ಟಿವಿ, ಡಿಜಿಟಲ್ ಪ್ರಸಾರ ಎರಡನ್ನೂ ಸೇರಿಸಿ ಬಿಡ್ಡಿಂಗ್ ನಡೆಸುವ ಅವಕಾಶವಿತ್ತು. ಉಳಿದ ಸಂಸ್ಥೆಗಳು ಸಲ್ಲಿಸಿದ ಒಟ್ಟಾರೆ ಬಿಡ್ ಸ್ಟಾರ್‌ಗಿಂತ ಕನಿಷ್ಠ 500 ಕೋಟಿ ಕಡಿಮೆಯಿದ್ದ ಕಾರಣ, ಸ್ಟಾರ್‌'ಗೆ ಪ್ರಸಾರ ಹಕ್ಕು ಒಲಿಯಿತು. ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಪಂದ್ಯಗಳು ಪ್ರಸಾರವಾಗ ಲಿದ್ದು, ಅಂತರ್ಜಾಲದಲ್ಲಿ ಪಂದ್ಯ ವೀಕ್ಷಿಸುವವರು ಹಾಟ್‌ಸ್ಟಾರ್ ವೆಬ್‌'ಸೈಟ್ ಹಾಗೂ ಆ್ಯಪ್ ಬಳಸಬಹುದಾಗಿದೆ.

 

Follow Us:
Download App:
  • android
  • ios