ಕ್ವಾರ್ಟರ್ ಪಂದ್ಯದಲ್ಲಿ ವಾವ್ರಿಂಕಾ, ಅಮೆರಿಕದ ಸ್ಯಾಮ್ ‌ಕರ್ರಿ ಎದುರು ಸೆಣಸಲಿದ್ದಾರೆ.

ಮ್ಯಾಡ್ರಿಡ್(ಮೇ.25): ಸ್ವಿಜರ್‌ಲೆಂಡ್‌'ನ ಸ್ಟಾರ್ ಆಟಗಾರ ಸ್ಟಾನಿಸ್ಲಾಸ್ ವಾವ್ರಿಂಕಾ, ಜಿನೆವಾ ಓಪನ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಕ್ವಾರ್ಟರ್‌'ಫೈನಲ್ ಹಂತ ಪ್ರವೇಶಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇಲ್ಲಿನ ಟೆನಿಸ್ ಕೋರ್ಟ್‌ನಲ್ಲಿ ನಡೆದ ಪ್ರಿ ಕ್ವಾರ್ಟರ್ ಪಂದ್ಯದಲ್ಲಿ ವಾವ್ರಿಂಕಾ 5-2 ಸೆಟ್‌'ಗಳಿಂದ ಬ್ರೆಜಿಲ್‌'ನ ರೊಜಿರಿಯೊ ದತ್ರಾ ಸಿಲ್ವಾ ಎದುರು ಸುಲಭ ಗೆಲುವು ಸಾಧಿಸಿದರು. ಪಂದ್ಯದ ಮಧ್ಯದಲ್ಲಿಯೇ ಗಾಯದ ಸಮಸ್ಯೆಗೆ ತುತ್ತಾದ ಬ್ರೆಜಿಲ್ ಆಟಗಾರ ಸೋಲು ಒಪ್ಪಿಕೊಂಡು ಕೋರ್ಟ್‌ನಿಂದ ಹೊರಬಿದ್ದರು.

ವಾವ್ರಿಂಕಾ ಕೇವಲ 37 ನಿಮಿಷಗಳ ಆಟದಲ್ಲಿ ಗೆಲುವು ಸಾಧಿಸಿದರು. ಮೊದಲ ಸೆಟ್‌'ನಲ್ಲಿ 3 ಅಂಕಗಳ ಮುನ್ನಡೆ ಸಾಧಿಸಿ ಎಂಟರಘಟ್ಟಕ್ಕೆ ಕಾಲಿಟ್ಟರು.

ಕ್ವಾರ್ಟರ್ ಪಂದ್ಯದಲ್ಲಿ ವಾವ್ರಿಂಕಾ, ಅಮೆರಿಕದ ಸ್ಯಾಮ್ ‌ಕರ್ರಿ ಎದುರು ಸೆಣಸಲಿದ್ದಾರೆ.