ಕೊಲೊಂಬೊ(ಆ.02): ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿ ಕ್ಲೀನ್ ಸ್ವೀಪ್ ಮಾಡಿದ ಶ್ರೀಲಂಕಾ  ದಾಖಲೆ ಬರೆದಿದೆ. ವಿಶ್ವಕಪ್ ಟೂರ್ನಿಯಲ್ಲಿ ಕಳಪೆ ಪ್ರದರ್ಶನ ನೀಡಿ ಟೀಕೆಗೆ ಗುರಿಯಾದ ಶ್ರೀಲಂಕಾ, ಭರ್ಜರಿಯಾಗಿ ಕಮ್‌ಬ್ಯಾಕ್ ಮಾಡಿದ ಶ್ರೀಲಂಕಾ ಮೈದಾನದಲ್ಲೇ ಸಂಭ್ರಮಾಚರಣೆ ಮಾಡಿತು. ಈ ವೇಳೆ ಬೈಕ್ ಏರಿ ರೈಡ್ ಮೂಲಕ ಸಂಭ್ರಮಾಚರಣೆ ಮಾಡಿದ ಲಂಕಾ ಕ್ರಿಕೆಟಿಗ ಕುಸಾಲ್ ಮೆಂಡೀಸ್, ಬೈಕ್‌ನಿಂದ ಬಿದ್ದು ಗಾಯ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಭಾರತ ಕೋಚ್‌ ಹುದ್ದೆಗೆ 2000 ಅರ್ಜಿ; BCCIಗೆ ಅಚ್ಚರಿ!

ಗೆಲುವಿನ ಬಳಿಕ ಲಂಕಾ ತಂಡಕ್ಕೆ ಪ್ರಶಸ್ತಿ ಸಮಾರಂಭದಲ್ಲಿ ಬೈಕ್ ಉಡುಗೊರೆಯಾಗಿ ನೀಡಲಾಯಿತು. ತಕ್ಷಣವೇ ಬೈಕ್ ತೆಗೆದ ಕುಸಾಲ್ ಮೆಂಡೀಸ್ ಮೈದಾನದಲ್ಲಿ ಸಹ ಆಟಗಾರನೊಂದಿಗೆ ರೈಡ್ ಮಾಡಿದ್ದಾರೆ. ಮೈದಾನ ಮಧ್ಯಭಾಗದಲ್ಲಿ ಬೈಕ್ ತಿರುಗಿಸುವ ವೇಳೆಗೆ ಸ್ಕಿಡ್ ಆಗಿದೆ. ತಕ್ಷಣವೇ ಕುಸಾಲ್ ಮಂಡೀಸ್ ಹಾಗೂ ಸಹ ಆಟಗಾರರ ಬೈಕ್‌ನೊಂದಿಗೆ ಬಿದ್ದಿದ್ದಾರೆ. 

 

ಇದನ್ನೂ ಓದಿ: ಎದೆ ಮುಟ್ಟಿಕೊಂಡು ಹೇಳುತ್ತೇನೆ, ನಾನು ಅಂಪೈರ್‌ಗೆ ಹಾಗೆ ಹೇಳಿಲ್ಲ: ಬೆನ್ ಸ್ಟೋಕ್ಸ್

ಆಟಗಾರರು ಹಾಗೂ  ಮೈದಾನದ ಸಿಬ್ಬಂದಿ ತಕ್ಷಣವೆ ನೆರವಿಗೆ ಧಾವಿಸಿದ್ದಾರೆ. ಬೈಕ್ ಎತ್ತಿ ಆಟಗಾರರನ್ನು ಹೆಚ್ಚಿನ ಗಾಯಗಳಾಗುವುದನ್ನು  ತಪ್ಪಿಸಿದ್ದಾರೆ. ಅದೃಷ್ಟವಶಾತ್ ಆಟಗಾರರಿಗೆ ಗಂಭೀರ ಗಾಯಗಳಾಗಿಲ್ಲ.  ಆದರೆ ಸಂಭ್ರಮಾಚರಣೆ ಕೈಮೀರಿ ಹೋಗಿರುವುದು  ದುರಂತ.