ಕೊಲೊಂಬೊ(ಜು.30): ಸ್ಟಾರ್ ಕ್ರಿಕೆಟಿಗರನ್ನು ರೋಲ್ ಮಾಡೆಲ್ ಆಗಿ ಸ್ವೀಕರಿಸುವ ಯುವ ಕ್ರಿಕೆಟಿಗರು ಅವರಂತೆ ಬ್ಯಾಟಿಂಗ್, ಬೌಲಿಂಗ್ ಪ್ರದರ್ಶನ ನೀಡುತ್ತಾರೆ. ಆದರೆ ಕೆಲ ಕ್ರಿಕೆಟಿಗರ ಶೈಲಿಯನ್ನು ನಕಲು ಮಾಡವುದು ಕಷ್ಟ.  ಈ ರೀತಿ ವಿಶೇಷ ಬೌಲಿಂಗ್ ಶೈಲಿ ಹೊಂದಿರುವ ಶ್ರೀಲಂಕಾ ಮಾಜಿ ವೇಗಿ ಲಸಿತ್ ಮಾಲಿಂಗ ಆ್ಯಕ್ಷನ್ ಅನುಕರಣೆ ಮಾಡುಲುದು ಕಷ್ಟ. ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ದಿಗ್ಗಜ ವೇಗಿ ವಿದಾಯ ಹೇಳಿದ ಬೆನ್ನಲ್ಲೇ ಇದೀಗ ಲಸಿತ್ ಮಾಲಿಂಗ ರೀತಿಯಲ್ಲೇ ಬೌಲಿಂಗ್ ಮಾಡೋ ಯುವ ಶ್ರೀಲಂಕಾದಲ್ಲಿ ಪತ್ತೆ ಹಚ್ಚಲಾಗಿದೆ.

ಇದನ್ನೂ ಓದಿ: ವಿದಾಯದ ಪಂದ್ಯದಲ್ಲಿ ದಾಖಲೆ ಬರೆದ ಮಾಲಿಂಗ

ಶ್ರೀಲಂಕಾ ಕ್ರಿಕೆಟ್ ಮ್ಯಾನೇಜ್ಮೆಂಟ್ ಜ್ಯೂನಿಯರ್ ಮಾಲಿಂಗ ಪತ್ತೆ ಹೆಚ್ಚಿದೆ. ಮಲಿಂಗ ರೀತಿಯ ಬೌಲಿಂಗ್ ಶೈಲಿ ಎಲ್ಲರ ಹುಬ್ಬೇರಿಸಿದೆ. ಜ್ಯೂನಿಯರ್ ಮಾಲಿಂಗ ಹೆಸರು ನುವಾನ್ ತುಷಾರ. 24 ವರ್ಷದ ಈ ವೇಗಿ 5 ಪ್ರಥಮ ದರ್ಜೆ,  10 ಲಿಸ್ಟ್ ಎ ಹಾಗೂ 14 ಟಿ20 ಪಂದ್ಯ ಆಡಿದ್ದಾನೆ. ಒಟ್ಟು 35 ವಿಕೆಟ್ ಕಬಳಿಸಿರುವ ನುವಾನ್ ತುಷಾರ ಲಂಕಾದಲ್ಲಿ ಪೊಡಿ(ಸಣ್ಣ ಅಥವಾ ಜ್ಯೂನಿಯರ್) ಎಂದೇ ಹೆಸರುವಾಸಿಯಾಗಿದ್ದಾನೆ.

"

ಇದನ್ನೂ ಓದಿ: ಲಸಿತ್ ಮಾಲಿಂಗ ವಿದಾಯ; ಭಾವುಕರಾದ ತೆಂಡುಲ್ಕರ್, ಬುಮ್ರಾ!

ನಾನು ಸಾಫ್ಟ್ ಬಾಲ್, ಟೆನಿಸ್ ಬಾಲ್‌ನಲ್ಲಿ ಕ್ರಿಕೆಟ್ ಆಡುತ್ತಿದ್ದೆ. ನನ್ನ ಗೆಳೆಯ ಕೊಲೊಂಬೊಗೆ ಕರೆತಂದು ಸಿಂಹಳೀಸ್ ಕ್ರಿಕೆಟ್ ಕ್ಲಬ್‌ಗೆ ಸೇರಿಸಿದ.  ಸದ್ಯ ನಾನು ಕೊಲೊಂಬೊ ಕ್ರಿಕೆಟ್ ಕ್ಲಬ್‌ಗೆ ಆಡುತ್ತಿದ್ದೇನೆ. ಲಸಿತ್ ಮಾಲಿಂಗ ಬೌಲಿಂಗ್ ಶೈಲಿ ನಕಲು ಮಾಡಿದ್ದೇನೆ ಎಂದು ಹಲವರು ಹೇಳುತ್ತಾರೆ. ಆದರೆ ನಾನು ಬಾಲ್ಯದಿಂದಲೂ ಈ ರೀತಿ ಬೌಲಿಂಗ್ ಮಾಡುತ್ತಿದ್ದೇನೆ. ಎಂದು ನುವಾನ್ ತುಷಾರ್ ಹೇಳಿದ್ದಾನೆ.

ನನ್ನ ಬೌಲಿಂಗ್ ನೋಡಿ ಹಲವರು ಲೆದರ್ ಬಾಲ್ ಆಡಲು ಸೂಚಿಸಿದ್ದರು. ಲೆದರ್ ಬಾಲ್ ಕ್ರಿಕೆಟ್ ಆಟ ಹೇಗೆ, ಎಲ್ಲಿ ಅನ್ನೋ ಮಾಹಿತಿ ನನಗಿರಲಿಲ್ಲ. ಇಷ್ಟೇ ಅಲ್ಲ ಕ್ರಿಕೆಟ್‌ಗಾಗಿ ಹಣ ವ್ಯಯಿಸಲು ನಮ್ಮ ಮನೆ ಪರಿಸ್ಥಿತಿ ಉತ್ತಮವಾಗಿಲ್ಲ.  ತಂದೆ ಕೂಲಿ ಸಹಾಯಕರಾಗಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಇದೆಲ್ಲಾ ಅಸಾಧ್ಯದ ಮಾತಾಗಿತ್ತು. ಆದರೆ ಗೆಳೆಯನ ಸಹಾಯಿಂದ ನಾನು ಪ್ರಥಮ ದರ್ಜೆ ಕ್ರಿಕೆಟ್ ಆಡುವಂತಾಗಿದ್ದೇನೆ ಎಂದು ತುಷಾರ ಹೇಳಿದ್ದಾನೆ. ಈಗಾಗಲೇ ನುವಾನ್ ತುಷಾರ, ರಿಯಲ್ ಹೀರೋ ಲಸಿತ್ ಮಾಲಿಂಗ ಬೇಟಿಯಾಗಿದ್ದಾನೆ. ತುಷಾರ ಬೌಲಿಂಗ್ ಶೈಲಿ ಕಂಡು ಮಲಿಂಗ ಕೂಡ ಅಚ್ಚರಿ ವ್ಯಕ್ತಪಡಿಸಿದ್ದರು.