ಲಸಿತ್ ಮಾಲಿಂಗ ವಿದಾಯ; ಭಾವುಕರಾದ ತೆಂಡುಲ್ಕರ್, ಬುಮ್ರಾ!
ಶ್ರೀಲಂಕಾ ವೇಗಿ, ಯಾರ್ಕರ್ ಸ್ಪೆಷಲಿಸ್ಟ್ ಲಸಿತ್ ಮಾಲಿಂಗ ಏಕದಿನ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಮಾಲಿಂಗ ವಿದಾಯಕ್ಕೆ ಮುಂಬೈ ಇಂಡಿಯನ್ಸ್ ಸಹಪಾಠಿಗಳಾದ ಮಾಸ್ಟರ್ ಬ್ಲಾಸ್ಚರ್ ಸಚಿನ್ ತೆಂಡುಲ್ಕರ್ ಹಾಗೂ ವೇಗಿ ಜಸ್ಪ್ರೀತ್ ಬುಮ್ರಾ ಭಾವುಕರಾಗಿದ್ದಾರೆ.
ಮುಂಬೈ(ಜು.27): ಬಾಂಗ್ಲಾದೇಶ ವಿರುದ್ಧದ ಪಂದ್ಯದೊಂದಿಗೆ ಶ್ರೀಲಂಕಾ ಹಿರಿಯ ವೇಗಿ ಲಸಿತ್ ಮಾಲಿಂಗ ಏಕದಿನ ಮಾದರಿಗೆ ವಿದಾಯ ಹೇಳಿದ್ದಾರೆ. ಶ್ರೀಲಂಕಾ ಕ್ರಿಕೆಟ್ ತಂಡದ ಪ್ರಮುಖ ವೇಗಿಯಾಗಿ ಗುರುತಿಸಿಕೊಂಡಿದ್ದ ಮಲಿಂಗ ಅಸಾದ್ಯ ಪಂದ್ಯಗಳನ್ನುಗೆಲ್ಲಿಸಿಕೊಟ್ಟ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ಪರ ಆಡೋ ಮಾಲಿಂಗಾ ವಿದಾಯದಿಂದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಹಾಗೂ ವೇಗಿ ಜಸ್ಪ್ರೀತ್ ಬುಮ್ರಾ ಭಾವುಕರಾಗಿದ್ದಾರೆ.
ಇದನ್ನೂ ಓದಿ: ವಿದಾಯದ ಪಂದ್ಯದಲ್ಲಿ ದಾಖಲೆ ಬರೆದ ಮಾಲಿಂಗ
ಅದ್ಭುತ ಮಾಲಿ ಸ್ಪೆಲ್, ಕ್ರಿಕೆಟ್‌ಗೆ ಅವಿರತ ಕೊಡುಗೆ ನೀಡಿದಕ್ಕೆ ಧನ್ಯವಾದ. ನಿಮ್ಮಿಂದ ಸ್ಪೂರ್ತಿ ಪಡೆದಿದ್ದೇನೆ. ಮುಂದೆಯೂ ನೀವೆ ಸ್ಪೂರ್ತಿ ಎಂದು ಬುಮ್ರಾ ಟ್ವೀಟ್ ಮಾಡಿದ್ದಾರೆ.
ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಕೂಡ ಮಾಲಿಂಗ್ ಮುಂದಿನ ಜೀವನ ಸುಖಮಯಮಾಗಿರಲಿ ಎಂದು ಹಾರೈಸಿದ್ದಾರೆ. ಅತ್ಯುತ್ತಮ ಏಕದಿನ ಕ್ರಿಕೆಟ್ ಕರಿಯರ್‌ಗೆ ಶುಭಾಶಯಗಳು. ಮುಂದಿನ ಜೀವನಕ್ಕೆ ಶುಭಕಾಮನೆಗಳು ಎಂದು ಸಚಿನ್ ತೆಂಡುಲ್ಕರ್ ಟ್ವೀಟ್ ಮಾಡಿದ್ದಾರೆ.
226 ಏಕದಿನ ಪಂದ್ಯ ಆಡಿರುವ ಮಾಲಿಂಗ 338 ವಿಕೆಟ್ ಕಬಳಿಸಿದ್ದಾರೆ. 38 ರನ್ ನೀಡಿ 6 ವಿಕೆಟ್ ಕಬಳಿಸಿರುವುದು ಮಾಲಿಂಗಾ ಅತ್ಯುತ್ತಮ ಬೌಲಿಂಗ್. 5.35ರ ಎಕಾನಾಮಿಯಲ್ಲಿ ಮಾಲಿಂಗ ಬೌಲಿಂಗ್ ದಾಳಿ ನಡೆಸಿದ್ದಾರೆ. ಏಕದಿನದಲ್ಲಿ 8 ಬಾರಿ 5 ವಿಕೆಟ್ ಕಬಳಿಸಿದ ಸಾಧನೆ ಮಾಡಿದ್ದಾರೆ. 2019ರ ವಿಶ್ವಕಪ್ ಟೂರ್ನಿಯಲ್ಲೂ ಮಾಲಿಂಗ ಉತ್ತಮ ಪ್ರದರ್ಶನ ನೀಡಿದ್ದರು.