ಶ್ರೀಲಂಕಾ ಹಾಗೂ ಇಂಗ್ಲೆಂಡ್ ನಡುವಿನ 3ನೇ ಅಭ್ಯಾಸಕ್ಕೂ ಮುನ್ನ ಆಂಗ್ಲರು ಬೆಚ್ಚಿಬಿದ್ದಿದ್ದಾರೆ. ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಇಂಗ್ಲೆಂಡ್ ತಂಡ ಮೈದಾನಕ್ಕಿಳಿಯುತ್ತಿದ್ದಂತೆ ಹಾವು ಕಾಣಿಸಿಕೊಂಡಿದೆ. 

ಕೊಲಂಬೊ(ಅ.16): ಕ್ರಿಕೆಟ್ ಮೈದಾನಕ್ಕೆ ನಾಯಿ ಲಗ್ಗೆ ಇಟ್ಟು ಪಂದ್ಯ ಸ್ಥಗಿತಗೊಂಡ ಉದಾಹರಣೆಗಳಿವೆ. ಆದರೆ ಇದೀಗ ಕ್ರೀಡಾಂಗಣಕ್ಕೆ ಹಾವು ಎಂಟ್ರಿಯಾಗೋ ಮೂಲಕ ಆಟಗಾರರಲ್ಲಿ ಆತಂಕ ಮೂಡಿಸಿದ ಘಟನೆ ಶ್ರೀಲಂಕಾದಲ್ಲಿ ನಡೆದಿದೆ.

ಶ್ರೀಲಂಕಾ ವಿರುದ್ಧದ 3ನೇ ಏಕದಿನ ಪಂದ್ಯಕ್ಕಾಗಿ ಪ್ರವಾಸಿ ಇಂಗ್ಲೆಂಡ್ ತಂಡದ ಆಟಗಾರರ ಪೂರ್ವಭಾವಿ ಅಭ್ಯಾಸದಲ್ಲಿ ನಿರತರಾಗಿದ್ದ ವೇಳೆಯಲ್ಲಿ ಮೈದಾನದಲ್ಲಿ ಹಾವೊಂದು ಕಾಣಿಸಿಕೊಂಡಿದೆ. ಸ್ಪಿನ್ನರ್ ಮೊಯಿನ್ ಅಲಿ, ಆದಿಲ್ ರಶೀದ್ ಮತ್ತು ಡಾಸನ್ ಅಭ್ಯಾಸ ನಡೆಸುತ್ತಿದ್ದ ಜಾಗದಲ್ಲಿ ಹಾವು ಪ್ರತ್ಯಕ್ಷವಾಗಿದೆ. 

Scroll to load tweet…

ಆ ಬಳಿಕ ಮೈದಾನದ ಸಿಬ್ಬಂದಿ ಹಾವು ಹಿಡಿದು ಹೊರಬಿಟ್ಟಿದ್ದಾರೆ. ಹಾವಿನ ಫೋಟೋವನ್ನು ಇಂಗ್ಲೆಂಡ್ ಕ್ರಿಕೆಟ್ ತನ್ನ ಟ್ವೀಟರ್‌ನಲ್ಲಿ ಪೋಸ್ಟ್ ಮಾಡಿದ್ದು, ವೈರಲ್ ಆಗಿದೆ.