ತಮ್ಮ ಖಾತೆಯಲ್ಲಿ 51,603 ಅಂಕಗಳನ್ನು ಹೊಂದಿರುವ ಶ್ರೀಕಾಂತ್ ಇದೀಗ 11 ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ

ನವದೆಹಲಿ(ಜೂ.22): ಇತ್ತೀಚೇಗಷ್ಟೇ ಇಂಡೋನೇಷ್ಯಾ ಓಪನ್ ಸೂಪರ್ ಸೀರಿಸ್ ಪ್ರಶಸ್ತಿ ಗೆದ್ದಿದ್ದ ಭಾರತದ ಶಟ್ಲರ್ ಕಿದಾಂಬಿ ಶ್ರೀಕಾಂತ್ ವಿಶ್ವ ಬಿಡಬ್ಲ್ಯೂಎಫ್ ಶ್ರೇಯಾಂಕದಲ್ಲಿ 11 ಸ್ಥಾನ ಮೇಲಕ್ಕೆ ಜಿಗಿದಿದ್ದು ವಿಶ್ವದ 11ನೇ ಶ್ರೇಯಾಂಕ ಪಡೆದಿದ್ದಾರೆ. ತಮ್ಮ ಖಾತೆಯಲ್ಲಿ 51,603 ಅಂಕಗಳನ್ನು ಹೊಂದಿರುವ ಶ್ರೀಕಾಂತ್ ಇದೀಗ 11 ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದೇ ಟೂರ್ನಿಯಲ್ಲಿ ಸ್ಟಾರ್ ಆಟಗಾರರಾದ ಮಲೇಷ್ಯಾದ ಲೀ ಚಾಂಗ್ ವೀ ಮತ್ತು ಚೀನಾದ ಚೆನ್ ಲಾಂಗ್ ಅವರನ್ನು ಮಣಿಸಿದ್ದ ಪ್ರಣಯ್ 4 ಸ್ಥಾನ ಮೇಲಕ್ಕೆ ಜಿಗಿದು 21ನೇ ಶ್ರೇಯಾಂಕ ಪಡೆದಿದ್ದಾರೆ. ಇನ್ನು ಅಜಯ್ ಜಯರಾಂ ಮತ್ತು ಬಿ. ಸಾಯಿ ಪ್ರಣೀತ್ 2 ಸ್ಥಾನ ಕುಸಿತ ಕಂಡಿದ್ದು ಕ್ರಮವಾಗಿ 15 ಹಾಗೂ 16ನೇ ಸ್ಥಾನದಲ್ಲಿದ್ದಾರೆ.

ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಪಿ.ವಿ. ಸಿಂಧು ಮತ್ತು ಸೈನಾ ನೆಹ್ವಾಲ್ ಕ್ರಮವಾಗಿ 4 ಹಾಗೂ 16ನೇ ಸ್ಥಾನ ಪಡೆದಿದ್ದಾರೆ. ಮಹಿಳಾ ಡಬಲ್ಸ್‌'ನಲ್ಲಿ ಅಶ್ವಿನಿ ಪೊನ್ನಪ್ಪ ಮತ್ತು ಎನ್.ಸಿಕ್ಕಿ ರೆಡ್ಡಿ ಜೋಡಿ 2 ಸ್ಥಾನ ಮೇಲಕ್ಕೆ ಜಿಗಿದಿದ್ದು 26ನೇ ಸ್ಥಾನ ಪಡೆದಿದ್ದರೆ, ಮಿಶ್ರ ಡಬಲ್ಸ್‌'ನಲ್ಲಿ ಸಿಕ್ಕಿ ರೆಡ್ಡಿ ಮತ್ತು ಪ್ರಣವ್ ಜೆರ್ರಿ ಚೋಪ್ರಾ ಜೋಡಿ 16ನೇ ಸ್ಥಾನ ಪಡೆದಿದೆ.