ದುಬೈ(ಸೆ.20): ಅಕ್ರ​ಮ ಬೌಲಿಂಗ್‌ ಶೈಲಿ ಹಿನ್ನೆಲೆಯಲ್ಲಿ ಶ್ರೀಲಂಕಾದ ಆಫ್‌ ಸ್ಪಿನ್ನರ್‌ ಅಖಿಲ ಧನಂಜಯ ಅವ​ರನ್ನು ಅಂತಾ​ರಾ​ಷ್ಟ್ರೀಯ ಕ್ರಿಕೆಟ್‌ ಸಮಿತಿ (ಐ​ಸಿ​ಸಿ) ಒಂದು ವರ್ಷ ನಿಷೇ​ಧ​ಕ್ಕೊ​ಳ​ಪ​ಡಿ​ಸಿದೆ. ಮುಂದಿನ 12 ತಿಂಗಳ ಕಾಲ ಅವರು ಬೌಲಿಂಗ್‌ ಮಾಡು​ವಂತಿಲ್ಲ.

ಅನುಮಾನಾಸ್ಪದ ಬೌಲಿಂಗ್ ಮಾಡಿದ ಇಬ್ಬರು ಕ್ರಿಕೆಟಿಗರು..!

ಆ.14ರಿಂದ 18ರ ವರೆಗೂ ಗಾಲೆಯಲ್ಲಿ ನಡೆ​ದಿದ್ದ ನ್ಯೂಜಿ​ಲೆಂಡ್‌ ವಿರು​ದ್ಧದ ಮೊದಲ ಟೆಸ್ಟ್‌ನಲ್ಲಿ ಧನಂಜಯ ಬೌಲಿಂಗ್‌ ಶೈಲಿ ಬಗ್ಗೆ ಅಂಪೈರ್‌ಗಳು ಶಂಕೆ ವ್ಯಕ್ತ​ಪ​ಡಿ​ಸಿ​ದ್ದರು. ಚೆನ್ನೈನಲ್ಲಿ ಧನಂಜಯ ಬೌಲಿಂಗ್‌ ಶೈಲಿ ಪರೀ​ಕ್ಷಿ​ಸಿದಾಗ, ಶೈಲಿ ನಿಯ​ಮ​ಬ​ದ್ಧ​ವಾ​ಗಿಲ್ಲ ಎನ್ನುವುದು ದೃಢ​ಪ​ಟ್ಟಿದೆ ಎಂದು ಐಸಿಸಿ ತಿಳಿ​ಸಿದೆ.

ಲಂಕಾದ ಸ್ಟಾರ್ ಸ್ಪಿನ್ನರ್ ಸಸ್ಪೆಂಡ್..! ಎಲ್ಲಾ ಮಾದರಿಯ ಕ್ರಿಕೆಟ್’ಗೂ ಅನ್ವಯ

ಕಳೆದ ವರ್ಷದ ಡಿಸೆಂಬರ್’ನಲ್ಲೂ ಧನಂಜಯ ಅವರ ಮೇಲೆ ಐಸಿಸಿ ನಿಷೇಧದ ಶಿಕ್ಷೆಗೆ ಗುರಿಪಡಿಸಿತ್ತು. ಎರಡು ವರ್ಷಗಳ ಅಂತರದಲ್ಲಿ ಎರಡೆರಡು ಬಾರಿ ಧನಂಜಯ ನಿಷೇಧಕ್ಕೆ ಗುರಿಯಾದಂತಾಗಿದೆ.

ಅಖಿಲ ಧನಂಜಯ ಶ್ರೀಲಂಕಾ ಪರ ಆರು ಟೆಸ್ಟ್, 36 ಏಕದಿನ ಹಾಗೂ 22 ಟಿ20 ಪಂದ್ಯಗಳನ್ನಾಡಿದ್ದು, ಒಟ್ಟಾರೆ 106 ವಿಕೆಟ್ ಕಬಳಿಸಿದ್ದಾರೆ. ಪಲ್ಲಿಕೆಲೆಯಲ್ಲಿ ನ್ಯೂಜಿಲೆಂಡ್ ವಿರುದ್ಧದ ಟಿ20 ಪಂದ್ಯದಲ್ಲಿ ಧನಂಜಯ ಕಡೆಯ ಬಾರಿಗೆ ಕಣಕ್ಕಿಳಿದಿದ್ದರು.