ಕೊಲಂಬೊ(ಜ.05): ಶ್ರೀಲಂಕಾ ಏಕದಿನ ಕ್ರಿಕೆಟ್ ತಂಡದ ನಾಯಕತ್ವವನ್ನು ತಿಸಾರ ಪೆರೇರಾ ಕಳೆದುಕೊಂಡಿದ್ದು, ಮುಂದಿನ ವಾರ ತಂಡಕ್ಕೆ ಹೊಸ ನಾಯಕನನ್ನು ನೇಮಕ ಮಾಡಲಾಗುವುದು ಎಂದು ಲಂಕಾ ಕ್ರಿಕೆಟ್ ಮಂಡಳಿ ತಿಳಿಸಿದೆ.

ಪೆರೇರಾ ಸ್ಥಾನವನ್ನು ಏಂಜೆಲೋ ಮ್ಯಾಥ್ಯೂಸ್ ಇಲ್ಲವೇ ದಿನೇಶ್ ಚಾಂಡಿಮಲ್ ತುಂಬಲಿದ್ದಾರೆ. ಇಬ್ಬರೂ ಸಹ ಈ ಹಿಂದೆ ಏಕದಿನ ತಂಡದ ನಾಯಕರಾಗಿದ್ದರು. ಭಾರತ ವಿರುದ್ಧ ಇತ್ತೀಚೆಗೆ ಮುಕ್ತಾಯಗೊಂಡ ಏಕದಿನ ಸರಣಿ ವೇಳೆ ಪೆರೇರಾ ಅವರನ್ನು ನಾಯಕರಾಗಿ ನೇಮಕ ಮಾಡಲಾಗಿತ್ತು.

ಈ ತಿಂಗಳಾಂತ್ಯದಲ್ಲಿ ಶ್ರೀಲಂಕಾ ತಂಡವು ಬಾಂಗ್ಲಾದೇಶ ಪ್ರವಾಸವನ್ನು ಕೈಗೊಳ್ಳುತ್ತಿದ್ದು, ಆ ವೇಳೆಗೆ ನೂತನ ನಾಯಕ ದ್ವೀಪ ರಾಷ್ಟ್ರದ ತಂಡವನ್ನು ಮುನ್ನಡೆಸಲಿದ್ದಾರೆ.