ಇತ್ತೀಚೆಗೆ ಸಾಕಷ್ಟು ಗಾಯದ ಸಮಸ್ಯೆಯಿಂದಾಗಿ ತಂಡದಿಂದ ಪದೇಪದೇ ಹೊರುಗುಳಿಯುತ್ತಿರುವ ಮಾಲಿಂಗ, ನಿವೃತ್ತಿಯಾಗಲಿದ್ದಾರೆ ಎಂಬ ಮಾತುಗಳೂ ಕೇಳಿಬಂದಿದ್ದವು. ಅಲ್ಲದೇ ಮಾಲಿಂಗ ಕೂಡಾ ಈ ಹಿಂದೆ ನಿವೃತ್ತಿಯ ಸುಳಿವು ನೀಡಿದ್ದರು.
ಕೊಲಂಬೊ(ನ.02): ಶ್ರೀಲಂಕಾದ ಹಿರಿಯ ವೇಗದ ಬೌಲರ್ ಲಸಿತ್ ಮಾಲಿಂಗ ಮಾರಕ ವೇಗಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಮಾಲಿಂಗ ಸ್ಪಿನ್ ಬೌಲಿಂಗ್ ಮಾಡಿ ಯಶಸ್ವಿಯಾಗಿದ್ದನ್ನು ಎಲ್ಲಾದರೂ ನೋಡಿದ್ದೀರಾ..?
ಹೌದು, ಲಂಕಾ ವೇಗಿ ದೇಸಿ ಪಂದ್ಯವೊಂದರಲ್ಲಿ ಆಫ್ ಸ್ಪಿನ್ ಬೌಲಿಂಗ್ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ತೇಜೆಲಂಕಾ ತಂಡದ ಪರ ಕಣಕ್ಕಿಳಿದಿದ್ದ ಮಾಲಿಂಗ, ಎಲ್'ಬಿ ಫೈನಾನ್ಸ್ ತಂಡದ ವಿರುದ್ಧ ದೇಸಿ ಪಂದ್ಯಾವಳಿಯ ಫೈನಲ್'ನಲ್ಲಿ ತಮ್ಮ ಸ್ವಿಂಗ್ ಬೌಲಿಂಗ್ ಶೈಲಿಯಲ್ಲೇ ಆಫ್ ಬ್ರೇಕ್ ಬೌಲಿಂಗ್ ಮಾಡಿದ ಅವರು 3 ವಿಕೆಟ್ ಕಬಳಿಸಿದರು.
ಆಟಕ್ಕೆ ಮಳೆ ಅಡ್ಡಿಪಡಿಸಬಹುದು ಎನ್ನುವ ನಿರೀಕ್ಷೆ ಇದ್ದ ಕಾರಣ, ಬೇಗನೆ ಓವರ್'ಗಳನ್ನು ಪೂರ್ಣಗೊಳಿಸಲು ಮಾಲಿಂಗ ವೇಗದ ಬದಲು ಸ್ಪಿನ್ ಮಾಡಲು ನಿರ್ಧರಿಸಿದರು.
ಇತ್ತೀಚೆಗೆ ಸಾಕಷ್ಟು ಗಾಯದ ಸಮಸ್ಯೆಯಿಂದಾಗಿ ತಂಡದಿಂದ ಪದೇಪದೇ ಹೊರುಗುಳಿಯುತ್ತಿರುವ ಮಾಲಿಂಗ, ನಿವೃತ್ತಿಯಾಗಲಿದ್ದಾರೆ ಎಂಬ ಮಾತುಗಳೂ ಕೇಳಿಬಂದಿದ್ದವು. ಅಲ್ಲದೇ ಮಾಲಿಂಗ ಕೂಡಾ ಈ ಹಿಂದೆ ನಿವೃತ್ತಿಯ ಸುಳಿವು ನೀಡಿದ್ದರು.