ಭಾರತ ತಂಡವು ಶ್ರೀಲಂಕಾ ಎದುರು 3 ಟೆಸ್ಟ್ ಪಂದ್ಯಗಳ ಸರಣಿ ಆಡಲಿದ್ದು, ಮೊದಲ ಟೆಸ್ಟ್ ಪಂದ್ಯವು ಜುಲೈ 26ರಿಂದ ಮೊದಲ ಪಂದ್ಯ ಆರಂಭವಾಗಲಿದೆ.

ಕೊಲಂಬೊ(ಜು.23): ಗಾಲೆಯಲ್ಲಿ ನಡೆಯಲಿರುವ ಭಾರತ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕಾಗಿ 15 ಮಂದಿ ಆಟಗಾರರ ಶ್ರೀಲಂಕಾ ತಂಡವನ್ನು ಪ್ರಕಟಿಸಲಾಗಿದೆ.

ಟೆಸ್ಟ್ ತಂಡಕ್ಕೆ ನೂತನ ನಾಯಕರಾಗಿ ನೇಮಕವಾಗಿದ್ದ ದಿನೇಶ್ ಚಾಂಡಿಮಲ್ ಜ್ವರದಿಂದ ಬಳಲುತ್ತಿದ್ದಾರೆ. ಹೀಗಾಗಿ ಚಾಂಡಿಮಲ್‌'ಗೆ ವಿಶ್ರಾಂತಿ ನೀಡಿರುವ ಲಂಕಾ ತಂಡ ಸ್ಪಿನ್ನರ್ ರಂಗನಾ ಹೆರಾತ್ ಅವರಿಗೆ ಮೊದಲ 2 ಟೆಸ್ಟ್ ಪಂದ್ಯಗಳ ನಾಯಕತ್ವದ ಜವಾಬ್ದಾರಿಯನ್ನು ಹೊರಿಸಿದೆ.

ಲಂಕಾ ತಂಡಕ್ಕೆ ನುವಾನ್ ಪ್ರದೀಪ್ ಕಮ್'ಬ್ಯಾಕ್ ಮಾಡಿದ್ದಾರೆ. ಅಲ್ಲದೇ ಪ್ರಥಮ ದರ್ಜೆ ಕ್ರಿಕೆಟ್'ನಲ್ಲಿ 558 ವಿಕೆಟ್ ಕಬಳಿಸಿರುವ 30 ವರ್ಷದ ಮಲಿಂದಾ ಪುಷ್ಫಕುಮಾರ್ ಕೂಡಾ ಲಂಕಾ ತಂಡದಲ್ಲಿ ಸ್ಥಾನ ಪಡೆಯಲು ಯಶಸ್ವಿಯಾಗಿದ್ದಾರೆ.

ಭಾರತ ತಂಡವು ಶ್ರೀಲಂಕಾ ಎದುರು 3 ಟೆಸ್ಟ್ ಪಂದ್ಯಗಳ ಸರಣಿ ಆಡಲಿದ್ದು, ಮೊದಲ ಟೆಸ್ಟ್ ಪಂದ್ಯವು ಜುಲೈ 26ರಿಂದ ಮೊದಲ ಪಂದ್ಯ ಆರಂಭವಾಗಲಿದೆ.

ಶ್ರೀಲಂಕಾ ತಂಡ:

ರಂಗನಾ ಹೆರಾತ್ (ನಾಯಕ), ಉಪುಲ್ ತರಂಗ, ದಿಮುತ್ ಕರುಣರತ್ನೆ, ಕುಸಾಲ್ ಮೆಂಡೀಸ್, ಆ್ಯಂಜೆಲೋ ಮ್ಯಾಥ್ಯೂಸ್, ಅಸೆಲಾ ಗುಣರತ್ನೆ, ನಿರೋಶನ್ ಡಿಕ್‌ವೆಲ್ಲಾ, ಧನಂಜಯ ಡಿ ಸಿಲ್ವಾ, ದನುಷ್ಕ ಗುಣತಿಲಕ, ದಿಲುರುವಾನ್ ಪೆರೇರಾ, ಸುರಂಗ ಲಕ್ಮಲ್, ಲಹಿರು ಕುಮಾರ, ವಿಶ್ವ ಫೆರ್ನಾಂಡೋ, ಮಿಲಿಂದಾ ಪುಷ್ಪಕುಮಾರ, ನುವಾನ್ ಪ್ರದೀಪ್