ನವದೆಹಲಿ(ಮೇ.10): ನಾಯಕ ಕೇನ್ ವಿಲಿಯಮ್ಸ್'ನ್ ಹಾಗೂ ಆರಂಭಿಕ ಆಟಗಾರ ಶಿಖರ್ ಧವನ್  ಭರ್ಜರಿ ಜೊತೆಯಾಟದಿಂದ ಸನ್ ರೈಸರ್ಸ್ ಹೈದರಾಬಾದ್ ತಂಡ  ಡೆಲ್ಲಿ ಡೇರ್'ಡೇವಿಲ್ಸ್ ವಿರುದ್ಧ 9 ವಿಕೇಟ್'ಗಳ ಸುಲಭ ಜಯ ಸಾಧಿಸಿತು.
ಹೈದರಾಬಾದ್'ಗೆ ಇದು 9ನೇ ಗೆಲುವು. ಡೆಲ್ಲಿ ಈ ಸೋಲಿನೊಂದಿಗೆ ಐಪಿಎಲ್ ಟೂರ್ನಿಯಿಂದ ಬಹುತೇಕ ಹೊರಬಿದ್ದಂತಾಗಿದೆ. ಶ್ರೇಯಸ್ ಅಯ್ಯರ್ ಪಡೆ ನೀಡಿದ 187 ಸವಾಲನ್ನು18.5 ಓವರ್'ಗಳಲ್ಲಿ  ಗುರಿ ಮುಟ್ಟಿದರು.  ಧವನ್ ಹಾಗೂ ಕೇನ್ ವಿಲಿಯಮ್ಸ್'ನ್ ಮುರಿಯದ ಜೊತೆಯಾಟದಲ್ಲಿ 16 ಓವರ್'ಗಳಲ್ಲಿ 176 ರನ್'ಗಳ ಮುರಿಯದ ಜಪತೆಯಾಟವಾಡಿ ಜಯದ ಪತಾಕೆ ಹಾರಿಸಿದರು.
ಧವನ್  50 ಚಂಡುಗಳಲ್ಲಿ 9 ಬೌಂಡರಿ 4 ಸಿಕ್ಸ್'ನೊಂದಿಗೆ 92 ರನ್ ಸಿಡಿಸಿದರೆ, ನಾಯಕ ಕೇನ್ ವಿಲಿಯಮ್ಸ್'ನ್  53 ಎಸೆತಗಳಲ್ಲಿ 8 ಬೌಂಡರಿ ಹಾಗೂ 2 ಸಿಕ್ಸ್'ನೊಂದಿಗೆ 83 ರನ್ ಬಾರಸಿದರು. ಡೆಲ್ಲಿ ತಂಡದಿಂದ 7 ಮಂದಿ ಬೌಲಿಂಗ್ ಮಾಡಿದರೂ ಯಾವುದೇ ಪ್ರಯೋಜನವಾಗಲಿಲ್ಲ.    
ಭರ್ಜರಿ ಶತಕ ವ್ಯರ್ಥ
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಡೆಲ್ಲಿ ತಂಡಕ್ಕೆ ಶಕೀಬ್ ಅಲ್ ಹಸನ್ ಆರಂಭದಲ್ಲೇ  ಷಾ ಹಾಗೂ ರಾಯ್ ಅವರನ್ನು ಔಟ್ ಮಾಡುವ ಮೂಲಕ ಶಾಕ್ ನೀಡಿದರು. ನಾಯಕ ಅಯ್ಯರ್ ಕೂಡ ರನ್ ಔಟ್ ಆದರು.  ಒಂದು ಕಡೆ ವಿಕೇಟ್ ಬೀಳುತ್ತಿದ್ದರೂ ಏಕಾಂಗಿಯಾಗಿ ಸ್ಫೋಟಕ ಆಟವಾಡಿದ ವಿಕೇಟ್ ಕೀಪರ್ ರಿಶಬ್ ಪಂತ್  ಸಿಕ್ಸ್, ಫೋರ್'ಗಳ ಸುರಿಮಳೆಗೆರೆದರು. 63 ಚಂಡುಗಳ 128 ರನ್'ಗಳ ಅವರ ಅಜೇಯ ಆಟದಲ್ಲಿ 15 ಬೌಂಡರಿ ಹಾಗೂ 7 ಭರ್ಜರಿ ಸಿಕ್ಸ್'ರ್ ಗಳಿದ್ದವು. ಅಂತಿಮವಾಗಿ ಡೆಲ್ಲಿ ತಂಡ 20 ಓವರ್'ಗಳಲ್ಲಿ 187 ರನ್ ಪೇರಿಸಿದರು. 


ಸ್ಕೋರ್ 
ಡೆಲ್ಲಿ ಡೇರ್'ಡೇವಿಲ್ಸ್ 20 ಓವರ್'ಗಳಲ್ಲಿ 187/5
(ರಿಶಬ್ ಪಂತ್  ಅಜೇಯ 128, ಶಕೀಬ್ 27/2)

ಹೈದರಾಬಾದ್ 18.5 ಓವರ್'ಗಳಲ್ಲಿ 191/1 
(ಧವನ್ 91, ಕೇನ್ 83)

ಫಲಿತಾಂಶ: ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ 9 ವಿಕೆಟ್'ಗಳ ಗೆಲುವು