ಅತೀ ರೋಚಕ ಪಂದ್ಯದಲ್ಲಿ ಹೈದರಾಬಾದ್'ಗೆ ಸತತ 2ನೇ ಗೆಲುವು

First Published 12, Apr 2018, 11:17 PM IST
SRH Won By 4 Wicket
Highlights

4 ವಿಕೇಟ್ ಪಡೆದ ಮಾರ್ಕೆಂಡೆ ಮುಂಬೈ ಪರ ಅತ್ಯುತ್ತಮ ಬೌಲರ್ ಎನಿಸಿದರು

ಹೈದರಾಬಾದ್(ಏ.12): ರೋಚಕ ಘಟ್ಟ ತಲುಪಿದ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ 1 ವಿಕೇಟ್’ನಿಂದ ಮುಂಬೈ ತಂಡವನ್ನು ಮಣಿಸಿತು. 

19 ಓವರ್’ನಲ್ಲಿ 9 ವಿಕೇಟ್ ಕಳೆದುಕೊಂಡು ಕಡೆಯ ಓವರ್’ನಲ್ಲಿ ೧೧ ರನ್ ಬೇಕಾಗಿತ್ತು. ಹೂಡಾ(32 ಅಜೇಯ) ಹಾಗೂ ಸ್ಟಾನ್’ಲೇಕ್ ಕೊನೆಯ ಎಸೆತದವರೆಗೂ ಕೊಂಡೋಯ್ದು  ಗೆಲುವಿನ ದಡ ಮುಟ್ಟಿಸಿದರು.ಇದರಿಂದ ಸನ್ ರೈಸರ್ಸ್ ಹೈದರಾಬಾದ್ ತಂಡ ಈ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಸತತ 2ನೇ ಗೆಲುವು ಸಾಧಿಸಿದೆ.

ಮುಂಬೈ ನೀಡಿದ 147 ರನ್'ಗಳ ಸಾಧಾರಣ ಮೊತ್ತವನ್ನು ಗುರಿ ಮುಟ್ಟಲು ಶಿಖರ್ ಧವನ್(45: 20 ಎಸೆತ, 8 ಬೌಂಡರಿ),ವೃದ್ಧಿಮಾನ್ ಷಾ(22) ಅವರ ಬ್ಯಾಟಿಂಗ್ ನೆರವು ಕೂಡ ಸಹಾಯವಾಯಿತು. 4 ವಿಕೇಟ್ ಪಡೆದ ಮಾರ್ಕೆಂಡೆ, ಹಾಗೂ 3 ವಿಕೇಟ್ ಪಡೆದ ರೆಹಮಾನ್ ಮುಂಬೈ ತಂಡದ ಪರ ಅತ್ಯುತ್ತಮ ಬೌಲರ್ ಎನಿಸಿದರು

ಟಾಸ್ ಗೆದ್ದ ಹೈದರಾಬಾದ್ ತಂಡ ಮುಂಬೈ ತಂಡವನ್ನು ಬ್ಯಾಟಿಂಗ್ ಆಹ್ವಾನಿಸಿತು. 2 ಪಂದ್ಯದಲ್ಲೂ ರೋಹಿತ್ ಶರ್ಮಾ ವಿಫಲರಾದರು. 10 ಎಸತಗಳನ್ನು ಎದುರಿಸಿ 1 ಸಿಕ್ಸ್'ರ್ ಹಾಗೂ 1 ಬೌಂಡರಿಯೊಂದಿಗೆ 11 ಬಾರಿಸಿ ಔಟಾದರು.  ಲೆವಿಸ್(29: 17 ಎಸೆತ , 2 ಸಿಕ್ಸ್'ರ್,3 ಬೌಂಡರಿ ) ಕೆಲ ಹೊತ್ತು ಬಿರುಸಿನ ಆಟವಾಡಿದರೂ ಕೌಲ್'ಗೆ ವಿಕೇಟ್ ಒಪ್ಪಿಸಿದರು.

ವಿಕೇಟ್ ಕೀಪರ್ ಹೆಚ್ಚು ಹೊತ್ತು ನಿಲ್ಲಲಿಲ್ಲ. ಆಲ್'ರೌಂಡರ್ ಪಾಂಡ್ಯ 15 ರನ್'ಗೆ ಔಟಾದರು. ಪೊಲ್ಲಾರ್ಡ್(28)  ಹಾಗೂ ಸೂರ್ಯಕುಮಾರ್ ಯಾದವ್ (28) ಕೆಲ ಹೊತ್ತು ಮಿಂಚು ಮೂಡಿಸಿದರೂ ನಿರೀಕ್ಷಿತ ರನ್'ಗೆ ಸಹಾಯ ಮಾಡಲಿಲ್ಲ. ಅಂತಿಮವಾಗಿ ಮುಂಬೈ ತಂಡ 20 ಓವರ್'ಗಳಲ್ಲಿ 147 ಗಳಿಸಿತು.   

ಸ್ಕೋರ್

ಮುಂಬೈ ಇಂಡಿಯನ್ಸ್ 20 ಓವರ್'ಗಳಲ್ಲಿ 147/8

(ಲೆವಿಸ್ 29, ಯಾದವ್ 28,ಶರ್ಮಾ 25/2, ಸ್ಟಾಂಕ್ಲೆ 42/2 )

ಸನ್ ರೈಸರ್ಸ್ ಹೈದರಾಬಾದ್ 20 ಓವರ್'ಗಳಲ್ಲಿ 151/9

(ಯೂಸಫ್ ಪಠಾಣ್ 45, ಹೂಡ 31, ಸಹಾ 22, ಮಾರ್ಕೆಂಡೆ 23/4 )

loader