ಪುಣೆ(ಮೇ.13): ಶಿಖರ್ ಧವನ್ ಹಾಗೂ ನಾಯಕ ಕೇನ್ ವಿಲಿಯಮ್ಸ್'ನ್ ಅವರ 123 ರನ್ ಜೊತೆಯಾಟದ ನೆರವಿನಿಂದ ಸನ್ ರೈಸರ್ಸ್ ಹೈದರಾಬಾದ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ 180 ರನ್ ಗುರಿ ನೀಡಿದೆ.
ಟಾಸ್ ಗೆದ್ದ ಮಹೇಂದ್ರ ಸಿಂಗ್ ಧೋನಿ ಸನ್ ರೈಸರ್ಸ್ ತಂಡವನ್ನು ಬ್ಯಾಟಿಂಗ್ ಆಹ್ವಾನಿಸಿದರು. ಆರಂಭಿಕ ಆಟಗಾರ ಅಲೆಕ್ಸ್ ಹೆಲ್ಸ್ ಔಟಾದ ನಂತರ ಧವನ್ ಹಾಗೂ ಕೇನ್ ವಿಲಿಯಮ್ಸ್'ನ್ 12.3 ಓವರ್'ಗಳಲ್ಲಿ 123 ರನ್ ಪೇರಿಸಿದರು.
ಇಬ್ಬರು ಆಟಗಾರರು ಅರ್ಧ ಶತಕ ದಾಖಲಿಸಿದರು. ಹೈದರಾಬಾದ್ ಧವನ್  49 ಎಸೆತಗಳಲ್ಲಿ10 ಬೌಂಡರಿ ಹಾಗೂ 3 ಸಿಕ್ಸ್'ನೊಂದಿಗೆ  79 ರನ್ ಪೇರಿಸಿದರೆ,  ಕೇನ್ 39 ಚಂಡುಗಳಲ್ಲಿ  5ಬೌಂಡರಿ, 2ಸಿಕ್ಸ್ ನೊಂದಿಗೆ 51 ರನ್ ಬಾರಿಸಿದರು.
ಕೇನ್ ಅವರದು ಈ ಆವೃತ್ತಿಯಲ್ಲಿ 7ನೇ ಅರ್ಧ ಶತಕ ಹಾಗೂ ಐಪಿಎಲ್ ವೃತ್ತಿ ಜೀವನದಲ್ಲಿ 10ನೆಯದು.  20ಓವರ್'ಗಳಲ್ಲಿ 179/4 ರನ್ ದಾಖಲಿಸಿದರು. 

ಸ್ಕೋರ್ 
ಸನ್ ರೈಸರ್ಸ್ ಹೈದರಾಬಾದ್ 20 ಓವರ್'ಗಳಲ್ಲಿ 179/4
(ಶಿಖರ್ ಧವನ್ 79, ಕೇನ್ 51
ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ ಪಂದ್ಯ
(ವಿವರ ಅಪೂರ್ಣ)