ಗೆಲ್ಲಲು 208 ರನ್‌ಗಳ ಬೃಹತ್ ಗುರಿ ಬೆನ್ನತ್ತಿದ್ದ ಪಂಜಾಬ್ 20 ಓವರ್‌ಗಳಲ್ಲಿ  9 ವಿಕೆಟ್ ನಷ್ಟಕ್ಕೆ 181 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಆವೃತ್ತಿಯಲ್ಲಿ ಮೊದಲ ಪಂದ್ಯವಾಡಿದ ಮಾರ್ಟಿನ್ ಗಪ್ಟಿಲ್ ಕೇವಲ 11 ಎಸೆತಗಳಲ್ಲಿ 23 ರನ್ ಸಿಡಿಸಿ ಉತ್ತಮ ಆರಂಭ ಒದಗಿಸುವ ಸೂಚನೆ ನೀಡಿದರಾದರೂ ಭುವನೇಶ್ವರ್ ಕುಮಾರ್, ಹಾಲಿ ಚಾಂಪಿಯನ್ಸ್‌ಗೆ ಅಗತ್ಯವಿದ್ದ ಮೊದಲ ವಿಕೆಟ್ ತಂದುಕೊಟ್ಟರು.

ಮೊಹಾಲಿ(ಏ.28): ಶಾನ್ ಮಾರ್ಷ್ (84: 50 ಎಸೆತ, 14 ಬೌಂಡರಿ, 2 ಸಿಕ್ಸರ್) ಹೋರಾಟದ ಹೊರತಾಗಿಯೂ ಕಿಂಗ್ಸ್ ಇಲೆವೆನ್ ಪಂಜಾಬ್, ಸನ್‌ರೈಸರ್ಸ್‌ ವಿರುದ್ಧ 26 ರನ್‌ಗಳ ಸೋಲು ಅನುಭವಿಸಿತು.

ಗೆಲ್ಲಲು 208 ರನ್‌ಗಳ ಬೃಹತ್ ಗುರಿ ಬೆನ್ನತ್ತಿದ್ದ ಪಂಜಾಬ್ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 181 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಆವೃತ್ತಿಯಲ್ಲಿ ಮೊದಲ ಪಂದ್ಯವಾಡಿದ ಮಾರ್ಟಿನ್ ಗಪ್ಟಿಲ್ ಕೇವಲ 11 ಎಸೆತಗಳಲ್ಲಿ 23 ರನ್ ಸಿಡಿಸಿ ಉತ್ತಮ ಆರಂಭ ಒದಗಿಸುವ ಸೂಚನೆ ನೀಡಿದರಾದರೂ ಭುವನೇಶ್ವರ್ ಕುಮಾರ್, ಹಾಲಿ ಚಾಂಪಿಯನ್ಸ್‌ಗೆ ಅಗತ್ಯವಿದ್ದ ಮೊದಲ ವಿಕೆಟ್ ತಂದುಕೊಟ್ಟರು. ವೊಹ್ರಾ ಹಾಗೂ ಮ್ಯಾಕ್ಸ್‌ವೆಲ್ ಬೇಗನೆ ವಿಕೆಟ್ ಒಪ್ಪಿಸಿದ್ದರಿಂದ ಪಂಜಾಬ್ ಸಂಕಷ್ಟಕ್ಕೆ ಸಿಲುಕಿತು. ಆದರೆ ಮಾರ್ಷ್ ಅಬ್ಬರದ ಬ್ಯಾಟಿಂಗ್ ತಂಡಕ್ಕೆ ಗೆಲುವಿನ ಆಸೆ ಚಿಗುರಿಸಿತ್ತಾದರೂ,

ಹಾಲಿ ಚಾಂಪಿಯನ್ ಸನ್‌ರೈಸರ್ಸ್‌ ಬ್ಯಾಟಿಂಗ್ ಅಬ್ಬರಕ್ಕೆ ಕಿಂಗ್ಸ್ ಇಲೆವೆನ್ ಪಂಜಾಬ್ ತತ್ತರಿಸಿ ಹೋಯಿತು. ಮೊಹಾಲಿಯಲ್ಲಿ ಶುಕ್ರವಾರ ನಡೆದ 2ನೇ ಪಂದ್ಯದಲ್ಲಿ ಹೈದರಾಬಾದ್ ತಂಡ ಮೊದಲು ಬ್ಯಾಟಿಂಗ್ ಮಾಡಿ ಬೃಹತ್ ಮೊತ್ತ ಪೇರಿಸಿತು. ನಾಯಕ ಡೇವಿಡ್ ವಾರ್ನರ್ (51: 27 ಎಸೆತ, 4 ಬೌಂಡರಿ, 4 ಸಿಕ್ಸರ್) ಹಾಗೂ ಶಿಖರ್ ಧವನ್ (77: 48 ಎಸೆತ, 9 ಬೌಂಡರಿ, 1 ಸಿಕ್ಸರ್) ಮೊದಲ ವಿಕೆಟ್‌ಗೆ ಶತಕದ (107 ರನ್) ಜೊತೆಯಾಟವಾಡಿ ತಂಡಕ್ಕೆ ಭದ್ರ ಅಡಿಪಾಯ ಹಾಕಿಕೊಟ್ಟರು. ಪ್ರಚಂಡ ಬ್ಯಾಟಿಂಗ್ ನಡೆಸಿದ ವಾರ್ನರ್, ಐಪಿಎಲ್ ವೃತ್ತಿಬದುಕಿನಲ್ಲಿ 35ನೇ ಅರ್ಧಶತಕ ಬಾರಿಸಿ, ಗರಿಷ್ಠ ಅರ್ಧಶತಕ ಕಲೆಹಾಕಿದ ಬ್ಯಾಟ್ಸ್‌ಮನ್ ಪಟ್ಟಿಯಲ್ಲಿ ಗಂಭೀರ್ ದಾಖಲೆಯನ್ನು ಸರಿಗಟ್ಟಿದರು. ಲಯ ಕಂಡುಕೊಳ್ಳಲು ಪರದಾಡುತ್ತಿದ್ದ ಧವನ್, ತಮ್ಮ ನೆಚ್ಚಿನ ಮೊಹಾಲಿ ಕ್ರೀಡಾಂಗಣದಲ್ಲಿ ಅಬ್ಬರಿಸುವ ಮೂಲಕ ಅಭಿಮಾನಿಗಳಿಗೆ ಸಂತಸ ಮೂಡಿಸಿದರು. ಸಿಕ್ಕ ಅವಕಾಶಗಳನ್ನು ಎರಡೂ ಕೈಗಳಲ್ಲಿ ಬಾಚಿಕೊಳ್ಳುತ್ತಿರುವ ಕೇನ್ ವಿಲಿಯಮ್‌ಸನ್ (54: 27 ಎಸೆತ, 4 ಬೌಂಡರಿ, 2 ಸಿಕ್ಸರ್) ಮತ್ತೊಂದು ವಿಸೊಓಂೀಟಕ ಇನ್ನಿಂಗ್ಸ್ ಕಟ್ಟಿದರು. ತವರಿನ ಹೀರೋ ಯುವರಾಜ್ ಆಟ ಸಹ ಪ್ರೇಕ್ಷಕರ ಮನತಣಿಸಿತು.

ಸನ್‌ರೈಸರ್ಸ್‌ ರನ್ ಮಳೆ

ಹೈದರಾಬಾದ್: 207/3 (20/20 )

ಪಂಜಾಬ್: 181/9 (20/20 )

ಪಂದ್ಯ ಶ್ರೇಷ್ಠ: ರಶೀದ್ ಖಾನ್