ಪ್ರಸಿದ್ಧ ಬಿಗ್ ಬಾಸ್ ಹಿಂದಿ ಕಾರ್ಯಕ್ರಮಕ್ಕೆ ಇನ್ನೇನು ಕ್ಷಣಗಣನೆ ಆರಂಭವಾಗಿದೆ. ಬಿಗ್ ಬಾಸ್ ಶೋ ಪ್ರೀಮಿಯರ್ ಸೆ. 16ರಿಂದ ಆರಂಭವಾಗಲಿದ್ದು, ಅಭಿಮಾನಿಗಳು ಈ ಬಾರಿ ಕಾಂಟ್ರವರ್ಸಿಯಲ್ ಕಾರ್ಯಕ್ರಮಕ್ಕೆ ಯಾರು ಸ್ಪರ್ಧಿಗಳಾಗಬಹುದು ಎನ್ನುವ ಬಗ್ಗೆ ಕುತೂಹಲದಿಂದ ಕಾಯುತ್ತಿದ್ದಾರೆ.
ಮುಂಬೈ : ಪ್ರಸಿದ್ಧ ಬಿಗ್ ಬಾಸ್ ಹಿಂದಿ ಕಾರ್ಯಕ್ರಮಕ್ಕೆ ಇನ್ನೇನು ಕ್ಷಣಗಣನೆ ಆರಂಭವಾಗಿದೆ. ಬಿಗ್ ಬಾಸ್ ಶೋ ಪ್ರೀಮಿಯರ್ ಸೆ. 16ರಿಂದ ಆರಂಭವಾಗಲಿದ್ದು, ಅಭಿಮಾನಿಗಳು ಈ ಬಾರಿ ಕಾಂಟ್ರವರ್ಸಿಯಲ್ ಕಾರ್ಯಕ್ರಮಕ್ಕೆ ಯಾರು ಸ್ಪರ್ಧಿಗಳಾಗಬಹುದು ಎನ್ನುವ ಬಗ್ಗೆ ಕುತೂಹಲದಿಂದ ಕಾಯುತ್ತಿದ್ದಾರೆ.
ಇದೀಗ ಮೊದಲು ಬಿಗ್ ಮನೆಗೆ ಹೋಗುವ ಇಬ್ಬರು ಸ್ಪರ್ಧಿಗಳು ಈಗಾಗಲೇ ಕನ್ಫರ್ಮ್ ಆಗಿದ್ದಾರೆ. ಅದರಲ್ಲಿ ಕ್ರಿಕೆಟಿಗ ಶ್ರೀಶಾಂತ್ ಹಾಗೂ ಕಪಿಲ್ ಶರ್ಮಾ ಶೋ ನ ನೇಹಾ ಪೆಂಡ್ಸೆ ಎನ್ನುವುದನ್ನು ಖಚಿತಪಡಿಸಲಾಗಿದೆ.
ಈಗಾಗಲೇ ಇ ಇಬ್ಬರು ಕೂಡ ತಮ್ಮ ಎಂಟ್ರಿಯ ಫರ್ಫಾರ್ಮೆನ್ಸ್ ವಿಡಿಯೋವನ್ನೂ ಕೂಡ ಶೀಟ್ ಮಾಡಿದ್ದಾರೆ ಎನ್ನಲಾಗಿದೆ. ಇನ್ನು ಪ್ರೊಮೊದಲ್ಲಿ ಇಬ್ಬರ ಮುಖಗಳನ್ನು ಮಾತ್ರ ರಿವೀಲ್ ಮಾಡಲಾಗಿಲ್ಲ. ಆದರೆ ಇಬ್ಬರು ಕಾರ್ಯಕ್ರಮದಲ್ಲಿ ಭಾಗಿಯಾಗುವುದು ಮಾತ್ರ ಖಚಿತ ಎನ್ನಲಾಗಿದೆ.
ಭಾರತೀಯ ಕ್ರಿಕೆಟಿಗ ಶ್ರೀಶಾಂತ್ ಅನೇಕ ವಿವಾದಗಳಿಂದಲೇ ಪ್ರಸಿದ್ಧವಾಗಿದ್ದವರು.
