ಲಂಡನ್‌'ನ ಪ್ರತಿಷ್ಠಿತ ನೈಟ್‌'ಕ್ಲಬ್'ವೊಂದರಲ್ಲಿ ತಮ್ಮ ಗೆಳತಿ ಕಾಸಿ ಬೆನೆಟ್ ಹಾಗೂ ಸ್ನೇಹಿತರ ಜತೆಗೂಡಿ 3 ರಾತ್ರಿ ಭರ್ಜರಿ ಮದ್ಯದ ಪಾರ್ಟಿ ಮಾಡಿದ್ದು, ಸುಮಾರು 5.75 ಲಕ್ಷ ರು. ವೆಚ್ಚ ಮಾಡಿದ್ದಾರೆ.

ಲಂಡನ್(ಆ.21): ವಿಶ್ವ ಚಾಂಪಿಯನ್‌'ಶಿಪ್‌'ನಲ್ಲಿ ತಮ್ಮ ವೃತ್ತಿಜೀವನದ ಅಂತಿಮ ಓಟದಲ್ಲಿ ನಿರಾಸೆ ಅನುಭವಿಸಿದ ವಿಶ್ವದ ಸಾರ್ವಕಾಲಿಕ ಶ್ರೇಷ್ಠ ಓಟಗಾರ, ಜಮೈಕಾದ ಉಸೇನ್ ಬೋಲ್ಟ್ ನಿವೃತ್ತಿ ಬಳಿಕ ಸ್ನೇಹಿತರೊಂದಿಗೆ ಭರ್ಜರಿ ಪಾರ್ಟಿ ಮಾಡಿದ್ದಾರೆ.

ಹೌದು, ಲಂಡನ್‌'ನ ಪ್ರತಿಷ್ಠಿತ ನೈಟ್‌'ಕ್ಲಬ್'ವೊಂದರಲ್ಲಿ ತಮ್ಮ ಗೆಳತಿ ಕಾಸಿ ಬೆನೆಟ್ ಹಾಗೂ ಸ್ನೇಹಿತರ ಜತೆಗೂಡಿ 3 ರಾತ್ರಿ ಭರ್ಜರಿ ಮದ್ಯದ ಪಾರ್ಟಿ ಮಾಡಿದ್ದು, ಸುಮಾರು 5.75 ಲಕ್ಷ ರು. ವೆಚ್ಚ ಮಾಡಿದ್ದಾರೆ. ಈ ಮೂಲಕ ನಿವೃತ್ತಿಯನ್ನು ಬೋಲ್ಟ್ ಸಂಭ್ರಮಿಸಿದ್ದಾರೆ.

ಇದೀಗ ಪಾರ್ಟಿಗಾಗಿ ಬೋಲ್ಟ್ ಖರ್ಚು ಮಾಡಿದ್ದ ಬಿಲ್ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.