ಭಾರತೀಯ ಒಲಂಪಿಕ್ ಸಂಸ್ಥೆಯ ಅಜೀವ ಅಧ್ಯಕ್ಷರಾಗಿ ನೇಮಕವಾಗಿದ್ದ ಸುರೇಶ್ ಕಲ್ಮಾಡಿ 24 ಗಂಟೆಯೊಳಗಾಗಿ ತಮ್ಮ ಸ್ಥಾನ ಕಳೆದುಕೊಂಡಿದ್ದಾರೆ.
ನವದೆಹಲಿ (ಡಿ. 28): ಭಾರತೀಯ ಒಲಂಪಿಕ್ ಸಂಸ್ಥೆಯ ಅಜೀವ ಅಧ್ಯಕ್ಷರಾಗಿ ನೇಮಕವಾಗಿದ್ದ ಸುರೇಶ್ ಕಲ್ಮಾಡಿ 24 ಗಂಟೆಯೊಳಗಾಗಿ ತಮ್ಮ ಸ್ಥಾನ ಕಳೆದುಕೊಂಡಿದ್ದಾರೆ.
ಇವರ ನೇಮಕ ಪ್ರಶ್ನಿಸಿ ಕ್ರೀಡಾ ಸಚಿವಾಲಯವು ಐಒಎ ಗೆ ಶೋಕಾಸ್ ನೋಟಿಸ್ ನೀಡಿತ್ತು. 2010 ರ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ನಡೆದ ಭ್ರಷ್ಟಾಚಾರ ಹಗರಣದಲ್ಲಿ ಸುರೇಶ್ ಕಲ್ಮಾಡಿ ಹೆಸರು ಕೇಳಿ ಬಂದಿತ್ತು. ಇವರಿಗೆ ಒಲಂಪಿಕ್ ಅಜೀವ ಅಧ್ಯಕ್ಷ ಸ್ಥಾನ ನೀಡಿದ್ದು ಸಾಕಷ್ಟು ಟೀಕೆ, ಪ್ರತಿರೋಧಕ್ಕೆ ಕಾರಣವಾಗಿತ್ತು.
ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಕಳಂಕ ಹೊತ್ತಿರುವ ಸುರೇಶ್ ಕಲ್ಮಾಡಿ ಹಾಗೂ ಚೌತಾಲ ನೇಮಕಾತಿಯನ್ನು ಒಪ್ಪಿಕೊಳ್ಳಲಾಗುವುದಿಲ್ಲವೆಂದು ಕ್ರೀಡಾ ಸಚಿವ ವಿಜಯ್ ಗೋಯಲ್ ಹೇಳಿದ್ಧಾರೆ.
