ಭಾರತ-ಪಾಕಿಸ್ತಾನ ನಡುವುನ ದ್ವಿಪಕ್ಷೀಯ ಸರಣಿಗೆ ಕೇಂದ್ರ ಸರ್ಕಾರ್ ಬ್ರೇಕ್ ಹಾಕಿದೆ. ಭಯೋತ್ಪಾದನೆ ನಿಲ್ಲುವವರೆಗೂ ಎರಡು ಟೀಂಗಳು ಸರಣಿ ಆಡುವಂತಿಲ್ಲ ಅಂತ ಖಡಕ್ಕಾಗಿ ಹೇಳಿದೆ. ಇನ್ನುಂದೆ ಕೇವಲ ಐಸಿಸಿ ಟೂರ್ನಿಗಳಲ್ಲಿ ಮಾತ್ರ ಭಾರತ-ಪಾಕ್ ಪಂದ್ಯ ವೀಕ್ಷಿಸಬೇಕು
ನವದೆಹಲಿ(ಮೇ.30): ಭಾರತ-ಪಾಕಿಸ್ತಾನ ನಡುವುನ ದ್ವಿಪಕ್ಷೀಯ ಸರಣಿಗೆ ಕೇಂದ್ರ ಸರ್ಕಾರ್ ಬ್ರೇಕ್ ಹಾಕಿದೆ. ಭಯೋತ್ಪಾದನೆ ನಿಲ್ಲುವವರೆಗೂ ಎರಡು ಟೀಂಗಳು ಸರಣಿ ಆಡುವಂತಿಲ್ಲ ಅಂತ ಖಡಕ್ಕಾಗಿ ಹೇಳಿದೆ. ಇನ್ನುಂದೆ ಕೇವಲ ಐಸಿಸಿ ಟೂರ್ನಿಗಳಲ್ಲಿ ಮಾತ್ರ ಭಾರತ-ಪಾಕ್ ಪಂದ್ಯ ವೀಕ್ಷಿಸಬೇಕು.
ಭಾನುವಾರ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಬದ್ಧ ವೈರಿಗಳಾದ ಭಾರತ-ಪಾಕಿಸ್ತಾನದ ಕ್ರಿಕಟ್ ಮ್ಯಾಚ್ ಏನೋ ನಡೆಯುತ್ತೆ. ಆದರೆ, ಉಭಯ ದೇಶಗಳ ನಡುವೆ ಸರಣಿ ಮಾತ್ರ ನಡೆಯೋದು ಮಾತ್ರ ಸಾಧ್ಯವೇ ಇಲ್ಲ. ಯಾಕಂದ್ರೆ ಕೇಂದ್ರ ಸರ್ಕಾರ ಸರಣಿ ನಡೆಸದಂತೆ ಬಿಸಿಸಿಐಗೆ ತಾಕೀತು ಮಾಡಿದೆ.
ಪಾಕಿಸ್ತಾನದ ಜೊತೆ ಕ್ರಿಕೆಟ್ ಸರಣಿ ನಡೆಸಲು ಅನುಮತಿ ಕೋರಿ ಬಿಸಿಸಿಐ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿತ್ತು. ಆದ್ರೆ ಭಯೋತ್ಪಾದನೆ ಮತ್ತು ಕ್ರಿಕೆಟ್ ಎರಡು ಒಟ್ಟಿಗೆ ಇರಲು ಸಾಧ್ಯವಿಲ್ಲ. ಪಾಕ್ ಪ್ರಚೋದಿತ ಭಯೋತ್ಪಾದನೆ ನಿಲ್ಲಿರುವವರೆಗೂ ದ್ವಿಪಕ್ಷೀಯ ಸರಣಿ ಆಡಲು ಅನುಮತಿ ಕೊಡಲ್ಲ ಅಂತ ಕೇಂದ್ರ ಕ್ರೀಡಾ ಸಚಿವ ವಿಜಯ್ ಗೋಯೆಲ್ ಖಡಕ್ಕಾಗಿ ಹೇಳಿದ್ದಾರೆ.
ಭಾರತ-ಪಾಕ್ ಒಪ್ಪಂದದಂತೆ 2015ರಿಂದ 2023ರ ವೇಳೆಗೆ ಒಟ್ಟು ಐದು ದ್ವಿಪಕ್ಷೀಯ ಸರಣಿಗಳು ನಡೆಯಬೇಕು. ಸರಣಿ ನಡೆಯದೆ ಇರುವುದರಿಂದ ಪಾಕ್ಗೆ 300ರಕ್ಕೂ ಅಧಿಕ ಕೋಟಿ ನಷ್ಟವಾಗಿದೆ. ಅದನ್ನ ಭರಿಸಿಕೊಡಿ ಅಂತ ಬಿಸಿಸಿಐಗೆ ಪಿಸಿಬಿ ನೊಟೀಸ್ ನೀಡಿದೆ.
ಭಯೋತ್ಪಾದನೆಯನ್ನು ಸಾಕಿ ಸಲಹುತ್ತಿರುವ ಪಾಕಿಸ್ತಾನದೊಂದಿಗೆ ಯಾವುದೇ ಸರಣಿ ನಡೆಸದಂತೆ ಖಡಕ್ ಸೂಚನೆ ಕೊಟ್ಟಿರುವ ಕೇಂದ್ರ ಸರ್ಕಾರ, ಉಗ್ರ ರಾಷ್ಟ್ರಗಳ ಜೊತೆಗಿನ ಸ್ನೇಹ ಸಂಬಂಧ ಸಾಧ್ಯವೇ ಇಲ್ಲ ಎಂದ ಸಂದೇಶವನ್ನ ರವಾನಿಸಿದೆ.
