ನವದೆಹಲಿ[ಜೂ.01]: ಪ್ರಧಾನಿ ನರೇಂದ್ರ ಮೋದಿ ಸಚಿವ ಸಂಪುಟದಲ್ಲಿ ಕ್ರೀಡಾ ಹಾಗೂ ಯುವಜನ ಸೇವಾ ಸಚಿವರಾಗಿ ನೇಮಕವಾದ ಕಿರಣ್ ರಿಜಿಜುಗೆ ಭಾರತದ ಕ್ರೀಡಾಪಟುಗಳು ಶುಭಕೋರಿದ್ದಾರೆ. 

ಹಳೆಯ ಸಂಪುಟದಲ್ಲಿದ್ದ 37 ಸಚಿವರಿಗೆ ಕೊಕ್ 24 ಹೊಸಬರಿಗೆ ಸ್ಥಾನ

ಈ ಮೊದಲು ರಾಜ್ಯವರ್ಧನ್ ಸಿಂಗ್ ರಾಥೋಡ್ ನಿರ್ವಹಿಸುತ್ತಿದ್ದ ಖಾತೆಯನ್ನು ಈ ಬಾರಿ 47 ವರ್ಷದ ರಿಜಿಜು ನಿರ್ವಹಿಸಲಿದ್ದಾರೆ. ರಿಜಿಜುಗೆ ಕ್ರೀಡಾ ಖಾತೆ ಹೆಗಲಿಗೆ ಬೀಳುತ್ತಿದ್ದಂತೆ ಟ್ವೀಟ್ ಮಾಡಿದ ರಾಥೋಡ್, ನಾನು ಮೊದಲಿಗೆ ಕ್ರೀಡಾಪಟು, ಆ ಬಳಿಕ ಕ್ರೀಡಾ ಸಚಿವ. ನಾನು ಅಥ್ಲೀಟ್’ಗಳ ಪ್ರದರ್ಶನ ಸುಧಾರಿಸಲು ಸಾಕಷ್ಟು ಪ್ರಯತ್ನ ಮಾಡಿದ್ದೇನೆ. ಮೋದಿ ಮಾರ್ಗದಲ್ಲಿ ಈ ಮಿಷನ್ ಮುಂದುವರೆಸಲು ಸೂಕ್ತ ವ್ಯಕ್ತಿಯಾದ ಕಿರಣ್ ರಿಜಿಜು ಅವರಿಗೆ ಅಭಿನಂದನೆಗಳು ಎಂದು ಟ್ವೀಟ್ ಮಾಡಿದ್ದಾರೆ.

ರಾಜ್ಯವರ್ಧನ್ ಸಿಂಗ್ ಮಾತ್ರವಲ್ಲದೇ ದೇಶದ ಸ್ಟಾರ್ ಕ್ರೀಡಾಪಟುಗಳಾದ ಬಾಕ್ಸರ್ ಮೇರಿ ಕೋಮ್, ಮೀರಾಬಾಯಿ ಚಾನು, ಅಥ್ಲೀಟ್’ಗಳಾದ ಹಿಮಾದಾಸ್, ದೀಪಾ ಕರ್ಮಕರ್, ಮನೀಕಾ ಬಾತ್ರ ಶುಭ ಕೋರಿದ್ದಾರೆ.