ಸೈನಾ, ‘ಅಮ್ಮನ ಆತ್ಮಕ್ಕೆ ಶಾಂತಿ ಸಿಗಲಿ’ ಎಂದಿದ್ದರೆ, ಸೆಹ್ವಾಗ್ ‘ತಮಿಳುನಾಡಿನಲ್ಲಿ ಶಾಂತಿ ನೆಲೆಸುವಂತೆ ಪ್ರಾರ್ಥಿಸುತ್ತೇನೆ. ಜಯಲಲಿತಾ ಆಪ್ತರಿಗೆ ಭಗವಂತ ಅಮ್ಮನ ಅಗಲಿಕೆಯ ದುಃಖ ಭರಿಸುವ ಶಕ್ತಿ ನೀಡಲಿ’ ಎಂದಿದ್ದಾರೆ.
ನವದೆಹಲಿ(ಡಿ.06): ದೀರ್ಘಕಾಲದ ಅಸ್ವಸ್ಥತೆಯ ನಂತರ ಹೃದಯಾಘಾತದಿಂದ ಸೋಮವಾರ ನಿಧನರಾದ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರಿಗೆ ಭಾರತೀಯ ಕ್ರೀಡಾಲೋಕದ ತಾರೆಗಳು ಕಂಬನಿ ಮಿಡಿದಿದ್ದಾರೆ. ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್, ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್, ಸಚಿನ್ ತೆಂಡೂಲ್ಕರ್ ಬಹುತೇಕ ಕ್ರೀಡಾತಾರೆಗಳು ಟ್ವಿಟರ್'ನಲ್ಲಿ ಅಶ್ರುತರ್ಪಣ ಸಲ್ಲಿಸಿದ್ದಾರೆ.
ಸೈನಾ, ‘ಅಮ್ಮನ ಆತ್ಮಕ್ಕೆ ಶಾಂತಿ ಸಿಗಲಿ’ ಎಂದಿದ್ದರೆ, ಸೆಹ್ವಾಗ್ ‘ತಮಿಳುನಾಡಿನಲ್ಲಿ ಶಾಂತಿ ನೆಲೆಸುವಂತೆ ಪ್ರಾರ್ಥಿಸುತ್ತೇನೆ. ಜಯಲಲಿತಾ ಆಪ್ತರಿಗೆ ಭಗವಂತ ಅಮ್ಮನ ಅಗಲಿಕೆಯ ದುಃಖ ಭರಿಸುವ ಶಕ್ತಿ ನೀಡಲಿ’ ಎಂದಿದ್ದಾರೆ.
ಇನ್ನು ತಮಿಳುನಾಡಿನವರೇ ಆದ ಮಾಜಿ ವಿಶ್ವ ಚೆಸ್ ಚಾಂಪಿಯನ್ ವಿಶ್ವನಾಥನ್ ಆನಂದ್, ಕ್ರೀಡಾ ಪೋಷಕರಾಗಿದ್ದ ಅಮ್ಮನ ಅಗಲಿಕೆಗೆ ತೀವ್ರ ಸಂತಾಪ ಸೂಚಿಸಿದ್ದಾರೆ.