ಕೇಂದ್ರ ಕ್ರೀಡಾ ಸಚಿವರಿಂದ ಮಹತ್ವದ ನಿರ್ಧಾರ

Sports Authority of India to undergo name change
Highlights

ಸ್ಪೋರ್ಟ್ಸ್ ಅಥಾರಿಟಿ ಆಫ್‌ ಇಂಡಿಯಾ(ಸಾಯ್‌) ಹೆಸರು ಸ್ಪೋಟ್ಸ್‌ ಇಂಡಿಯಾ ಎಂದು ಮರುನಾಮಕರಣಗೊಂಡಿದೆ. 1984ರಲ್ಲಿ ಸ್ಥಾಪನೆಯಾಗಿದ್ದ ಸಾಯ್‌ ಹೆಸರನ್ನು 34 ವರ್ಷಗಳ ಬಳಿಕ ಬದಲಿಸಲಾಗಿದೆ. 

ನವದೆಹಲಿ: ಸ್ಪೋರ್ಟ್ಸ್ ಅಥಾರಿಟಿ ಆಫ್‌ ಇಂಡಿಯಾ(ಸಾಯ್‌) ಹೆಸರು ಸ್ಪೋಟ್ಸ್‌ ಇಂಡಿಯಾ ಎಂದು ಮರುನಾಮಕರಣಗೊಂಡಿದೆ. 1984ರಲ್ಲಿ ಸ್ಥಾಪನೆಯಾಗಿದ್ದ ಸಾಯ್‌ ಹೆಸರನ್ನು 34 ವರ್ಷಗಳ ಬಳಿಕ ಬದಲಿಸಲಾಗಿದೆ. 

ಬುಧವಾರ ನಡೆದ ಸಾಯ್‌ನ 50ನೇ ಸಾಮಾನ್ಯ ಸಭೆಯಲ್ಲಿ ಕೇಂದ್ರ ಸಚಿವ ರಾಜ್ಯವರ್ಧನ್‌ ಸಿಂಗ್‌ ರಾಥೋಡ್‌ ಈ ನಿರ್ಧಾರ ಪ್ರಕಟಿಸಿದರು. 

ಸಾಯ್‌ ಹೆಸರಿನಲ್ಲಿ ಬರುವ ‘ಪ್ರಾಧಿಕಾರ’ ಎಂಬ ಪದ ಕ್ರೀಡೆಯಲ್ಲಿ ಸೂಕ್ತವಲ್ಲ ಎಂಬ ಕಾರಣಕ್ಕೆ ಅದನ್ನು ತೆಗೆದು ಹಾಕಲಾಗಿದೆ ಎಂದು ಸಚಿವ ರಾಥೋಡ್‌ ಹೇಳಿದ್ದಾರೆ.

loader