ಮೊನ್ನೆ ಆಸೀಸ್​​ ವಿರುದ್ಧದ ಟಿ20 ಸರಣಿಗೆ ಟೀಂ ಇಂಡಿಯಾ ಪ್ರಕಟವಾಗುತ್ತಿದ್ದಂತೆಯೇ ಕೆಲ ಕ್ರಿಕೆಟ್​​ ಪ್ರೇಮಿಗಳು ರೊಚ್ಚಿಗೆದ್ದಿದ್ರು. ಆಯ್ಕೆ ಸಮಿತಿ ವಿರುದ್ಧ ಕಿಡಿಕಾರಿದ್ರು. ಇಂದಿಗೂ ಬಿಸಿಸಿಐಗೆ ಇಡಿ ಶಾಪವನ್ನಾಕ್ತಿದ್ದಾರೆ. ಅಷ್ಟಕ್ಕೂ ಕೆಲ ಕ್ರಿಕೆಟ್​​ ಅಭಿಮಾನಿಗಳು ಆಯ್ಕೆ ಸಮಿತಿ ಮತ್ತು ಬಿಸಿಸಿಐ ವಿರುದ್ಧ ಕಿಡಿ ಕಾರಲು ಕಾರಣವೇನು..? ಅವರು ಮಾಡಿರುವ ತಪ್ಪಾದ್ರೂ ಏನು..? ಇಲ್ಲಿದೆ ವಿವರ

ಆಸೀಸ್​​ ವಿರುದ್ಧದ ಟಿ20 ಸರಣಿಗೆ ಟೀಂ ಇಂಡಿಯಾ ಪ್ರಕಟವಾಗಿದೆ. ಕೆಲವರು ಆಶ್ಚರ್ಯ ಎಂಬಂತೆ ತಂಡಕ್ಕೆ ವಾಪಸ್ಸಾದ್ರೆ ಕೆಲವರು ರೆಸ್ಟ್​​ ಎಂಬ ನೆಪದಲ್ಲಿ ಕೈಬಿಡಲಾಗಿದೆ. ಅಳೆದೂ ತೂಗಿ ಆಯ್ಕೆ ಸಮಿತಿ ಸಮತೋಲನದಿಂದ ಕೂಡಿರುವ ತಂಡವನ್ನ ಪ್ರಕಟಿಸಿದೆ. ಆದ್ರೆ ಟೀಂ ಇಂಡಿಯಾದ ಹಿರಿಯ ಆಟಗಾರರಾದ ಆರ್​​. ಆಸ್ವಿನ್​ ಮತ್ತು ರವೀಂದ್ರ ಜಡೇಜಾರನ್ನ ಕೈಬಿಟ್ಟಿದ್ದಕ್ಕೆ ಅವರ ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ. ಬಿಸಿಸಿಐ ಮತ್ತು ಆಯ್ಕೆ ಸಮಿತಿ ವಿರುದ್ಧ ಬಹಿರಂಗವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಟೀಕಿಸುತ್ತಿದ್ದಾರೆ.

ವರ್ಷಗಳ ಆರ್ಭಟಕ್ಕೆ ಬ್ರೇಕ್​ ಹಾಕಿದ್ರು ಯುವ ಸ್ಪಿನ್ನರ್ಸ್: ತಾತ್ಕಾಲಿಕ ರೆಸ್ಟ್​​ ನಂತರ ಪರ್ಮನೆಂಟ್​​ ರೆಸ್ಟಾಗಿಬಿಡ್ತಾ..?

ನಿಮಗೆ ನೆನಪಿರಬಹುದು, ಶ್ರೀಲಂಕಾ ಮತ್ತು ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ರೆಸ್ಟ್​​ ನೆಪದಲ್ಲಿ ಇವರಿಬ್ಬರನ್ನ ತಂಡದಿಂದ ಕೈಬಿಟ್ಟು ಯುವ ಸ್ಪಿನ್ನರ್​​ಗಳಾದ ಕುಲ್​ದೀಪ್​ ಯಾದವ್​ ಮತ್ತು ಯುಜವೇಂದ್ರ ಚಹಲ್​​​ ರನ್ನ ಆಯ್ಕೆ ಮಾಡಲಾಗಿತ್ತು. ಅಂದು ಎಲ್ರೂ ಆಯ್ಕೆ ಸಮಿತಿಯನ್ನ ನಂಬಿದ್ರು. ಅವರಿಗೆ ನಿಜವಾಗ್ಲೂ ರೆಸ್ಟ್​​ ನೀಡಲಾಗಿದೆ ಎಂಬ ಸಮಧಾನದಲ್ಲೇ ಇದ್ರು. ಯುವ ಸ್ಪಿನ್ನರ್​​​'ಗಳು ಆರ್ಭಟಿಸುವುದನ್ನು ನೋಡಿ ಖುಷಿ ಪಟ್ಟಿದ್ರು.

ಯುವ ಸ್ಪಿನ್ನರ್​ಗಳೇನೋ ಲಂಕಾ ವಿರುದ್ಧ ಅದ್ಭುತ ಪ್ರದರ್ಶನ ತೋರಿ ಎಲ್ಲರನ್ನ ದಂಗು ಬಡಿಸಿದ್ರು. ಆದ್ರೆ ನಿಜಕ್ಕೂ ಇವರ ಪ್ರದರ್ಶನದಿಂದ ತಲೆನೋವಾಗಿದ್ದು ಆಯ್ಕೆ ಸಮಿತಿಗೆ. ಕಾರಣ ಲಂಕಾ ಸರಣಿಯಲ್ಲಿ ಉತ್ತಮವಾಗಿ ಬೌಲ್​ ಮಾಡಿದ್ದ ಯುವ ಸ್ಪಿನ್ನರ್​ಗಳನ್ನ ಆಸೀಸ್​​ ಸರಣಿಯಿಂದ ಕೈಬಿಡಲು ಸಾಧ್ಯವಾಗಲಿಲ್ಲ. ಇತ್ತ ಸೀಮಿತ ಓವರ್​ಗಳಲ್ಲಿ ಜಡ್ಡು ಮತ್ತು ಅಶ್ವಿನ್​ರ ಮೋಡಿ ಕಡಿಮೆಯಾಗಿಬಿಟ್ಟಿತ್ತು. ಇದೇ ಕಾರಣಕ್ಕೆ ಮತ್ತೆ ಅಭಿಮಾನಿಗಳಿಗೆ ರೆಸ್ಟ್​​ ಎಂಬ ನೆಪವೊಡ್ಡಿ ಮತ್ತೆ ಅಶ್ವಿನ್​ ಮತ್ತು ಜಡ್ಡುರನ್ನ ಆಸೀಸ್​​ ಸರಣಿಯಿಂದ ಕೈಬಿಡಲಾಯ್ತು.

ಯಾವಾಗ ಇವರಿಬ್ಬರನ್ನ ಆಸೀಸ್​​ ಸರಣಿಯಮದ ಕೈಬಿಟ್ರೋ ಆಗಲೇ ಅಶ್ವಿನ್​ ಮತ್ತು ಜಡ್ಡು ಅಭಿಮಾನಿಗಳಿಗೆ ಅನುಮಾನ ಶುರುವಾಗಿಬಿಟ್ಟಿತ್ತು. ಆದ್ರೆ ಮೊನ್ನೆ ಆ ಅನುಮಾನ ನಿಜವಾಗಿಬಿಡ್ತು. ಆಯ್ಕೆ ಸಮಿತಿ ಮತ್ತು ಬಿಸಿಸಿಐ ಸೇರಿಕೊಂಡು ಸ್ಪಿನ್​ ಮಾಂತ್ರಕರ ಕೆರಿಯರ್​​ ಕ್ಲೋಸ್​​​ ಮಾಡ್ತಿದ್ದಾರೆ ಅನ್ನೋದು ಕನ್​ಫರ್ಮ್​ ಆಗಿಬಿಡ್ತು. ಇದೇ ಕಾರಣಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಇಂದು ಅವರ ಅಭಿಮಾನಿಗಳು ರೊಚ್ಚಿಗೆದ್ದಿರೋದು.

ಜಡ್ಡು-ಅಶ್ವಿನ್​ ಕೆರಿಯರ್​​ ಕ್ಲೋಸ್​​..?: ಟೆಸ್ಟ್​'​ಗೆ ಸೀಮಿತವಾಗಿಬಿಟ್ತಾ ಸ್ಪಿನ್​ ಜೋಡಿ

ಸದ್ಯದ ಬೆಳವಣಿಗೆ ನೋಡ್ತಿದ್ರೆ ಜಡ್ಡು ಮತ್ತು ಅಶ್ವಿನ್​​ರ ಸೀಮಿತ ಓವರ್​​ಗಳ ಕೆರಿಯರ್​​​ ಕ್ಲೋಸ್​​ ಆಯ್ತು ಅನಿಸ್ತಿದೆ. ಅವರ ಜಾಗಕ್ಕೆ ನೂತನ ವೃಸ್ಟ್​​​ ಸ್ಪಿನ್ನರ್​​​ಗಳು ಮುಂದುವರೆಯೋದು ಗ್ಯಾರೆಂಟಿ ಅನಿಸ್ತಿದೆ. ಇನ್ನೇನಿದ್ರೂ ಇವರ ಆಟ ಟೆಸ್ಟ್​​ ಕ್ರಿಕೆಟ್​​​ಗೆ ಸೀಮಿತ ಅನಿಸ್ತಿದೆ.

ಏನೇ ಆದ್ರೂ ಕಳೆದ ಐದಾರು ವರ್ಷಗಳಿಂದ ಟೀಂ ಇಂಡಿಯಾವನ್ನ ತಲೆಯ ಮೇಲೆ ಹೊತ್ತು ಮೆರಸಿದ ದಿಗ್ಗಜ ಬೌಲರ್​​ಗಳಿಗೆ ಈ ಸ್ಥಿತಿ ಬರಬಾರ್ದಿತ್ತು. ಆದ್ರೆ ಕ್ರಿಕೆಟ್​​ ಅನ್ನೊ ಮಾಯ ಲೋಕದಲ್ಲಿ ಎಲ್ಲವೂ ಸಾಧ್ಯ ಅನ್ನೋದಕ್ಕೆ ಇವರಿಬ್ಬರೇ ಬೆಸ್ಟ್​ ಎಕ್ಸಾಂಪಲ್​. ಆದ್ರೆ ಇವರಿಬ್ಬರೂ ಸಂಪೂರ್ಣವಾಗಿ ಮಾಯವಾಗದೆ. ಇನ್ನೂ ಟೆಸ್ಟ್​​ ಕ್ರಿಕೆಟ್​ನಲ್ಲಿ ಕಮಾಲ್​ ಮಾಡಲಿದ್ದಾರಲ್ಲ ಎಂಬುದೇ ಅವರ ಕೋಟ್ಯಾಮತರ ಅಭಿಮಾನಿಗಳಿಗೆ ಸಮಾಧಾನದ ವಿಷ್ಯ.