ಲಂಡನ್‌[ಮೇ.29]: ಬಹುನಿರೀಕ್ಷಿತ ವಿಶ್ವಕಪ್ ಟೂರ್ನಿಗೆ ಕೆಲವೇ ಗಂಟೆಗಳು ಬಾಕಿ ಇರುವಾಗಲೇ ದಕ್ಷಿಣ ಆಫ್ರಿಕಾ ತಂಡಕ್ಕೆ ಆಘಾತವೊಂದು ಎದುರಾಗಿದೆ.

ಭಾರತ-ಪಾಕ್‌ ಪಂದ್ಯಕ್ಕಿಲ್ಲ ಭದ್ರತೆ ಸಮಸ್ಯೆ

ಮೇ 30ರಂದು ಇಂಗ್ಲೆಂಡ್‌ ವಿರುದ್ಧ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್‌ನ ಉದ್ಘಾಟನಾ ಪಂದ್ಯಕ್ಕೆ ದಕ್ಷಿಣ ಆಫ್ರಿಕಾದ ವೇಗದ ಬೌಲರ್‌ ಡೇಲ್‌ ಸ್ಟೇನ್‌ ಅಲಭ್ಯರಾಗಲಿದ್ದಾರೆ. 

ವಿಶ್ವಕಪ್ ಜಯಿಸದ ಅನ್ ಲಕ್ಕಿ ಕ್ರಿಕೆಟಿಗರಿವರು..!

ಐಪಿಎಲ್‌ ವೇಳೆ ಭುಜದ ಗಾಯಕ್ಕೆ ತುತ್ತಾಗಿದ್ದ ಸ್ಟೇನ್‌ ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ‘ದಿನದಿಂದ ದಿನಕ್ಕೆ ಸ್ಟೇನ್‌ ಚೇತರಿಕೆ ಕಾಣುತ್ತಿದ್ದು, ಭಾನುವಾರ ಬಾಂಗ್ಲಾದೇಶ ವಿರುದ್ಧದ ಪಂದ್ಯಕ್ಕೆ ಲಭ್ಯರಾಗದಿದ್ದರೂ, ಜೂ.5ರಂದು ಭಾರತ ವಿರುದ್ಧ ನಡೆಯಲಿರುವ ಪಂದ್ಯಕ್ಕೆ ಸಂಪೂರ್ಣವಾಗಿ ಗುಣಮುಖರಾಗಲಿದ್ದಾರೆ’ ಎಂದು ದ.ಆಫ್ರಿಕಾ ತಂಡದ ಕೋಚ್‌ ಒಟಿಸ್‌ ಗಿಬ್ಸನ್‌ ಹೇಳಿದ್ದಾರೆ.