ಲಂಡನ್‌[ಮೇ.29]: ಜೂ.16ರಂದು ಮ್ಯಾಂಚೆಸ್ಟರ್‌ನ ಓಲ್ಡ್‌ ಟ್ರಾಫರ್ಡ್‌ ಕ್ರೀಡಾಂಗಣದಲ್ಲಿ ನಡೆಯಲಿರುವ ಭಾರತ-ಪಾಕಿಸ್ತಾನ ವಿಶ್ವಕಪ್‌ ಪಂದ್ಯಕ್ಕೆ ಭದ್ರತೆ ಸಮಸ್ಯೆ ಇಲ್ಲ ಎಂದು ಏಕದಿನ ವಿಶ್ವಕಪ್‌ ಟೂರ್ನಿಯ ಭದ್ರತಾ ಮುಖ್ಯಸ್ಥೆ ಜಿಲ್‌ ಮೆಕ್ರಾಕ್ಕೆನ್‌ ಹೇಳಿದ್ದಾರೆ. 

ವಿಶ್ವಕಪ್ ಬಗೆಗಿನ ಸಂಪೂರ್ಣ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ...

‘ವಿಶ್ವಕಪ್‌ಗೂ ಮುನ್ನ ಭಾರತ, ನ್ಯೂಜಿಲೆಂಡ್‌, ಶ್ರೀಲಂಕಾದಲ್ಲಿ ಭಯೋತ್ಪಾದಕರ ದಾಳಿ ಆಗಿದ್ದರಿಂದ ಸಹಜವಾಗಿಯೇ ಎಲ್ಲರಲ್ಲೂ ಆತಂಕವಿದೆ. ಆದರೆ ವಿಶ್ವಕಪ್‌ ಪಂದ್ಯಗಳು ನಡೆಯುವ ಎಲ್ಲಾ ನಗರಗಳ ಗುಪ್ತಚರ ಅಧಿಕಾರಿಗಳ ಜತೆ ನಾವು ನಿರಂತರ ಸಂಪರ್ಕದಲ್ಲಿದ್ದೇವೆ. ಭದ್ರತೆ ಸಮಸ್ಯೆಯಾಗುವ ಯಾವ ಸುಳಿವು ಸಹ ಇಲ್ಲ. ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಕಟ್ಟೆಚ್ಚರ ವಹಿಸಲಾಗಿದೆ’ ಎಂದು ಮೆಕ್ರಾಕ್ಕೆನ್‌ ತಿಳಿಸಿದ್ದಾರೆ.

12ನೇ ಆವೃತ್ತಿಯ ಏಕದಿನ ವಿಶ್ವಕಪ್ ಟೂರ್ನಿಯು ಮಾರ್ಚ್ 30ರಿಂದ ಆರಂಭವಾಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಮುಖಾಮುಖಿಯಾಗಲಿವೆ. ಇನ್ನು ಟೂರ್ನಿಯ ಹೈವೋಲ್ಟೇಜ್ ಪಂದ್ಯ ಎಂದೇ ಪರಿಗಣಿಸಲ್ಪಟ್ಟಿರುವ ಭಾರತ-ಪಾಕಿಸ್ತಾನ ನಡುವಿನ ಪಂದ್ಯವು ಜೂನ್ 16ರಂದು ನಡೆಯಲಿದೆ. 

ವಿಶ್ವಕಪ್ ಟೂರ್ನಿಯ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ ನೋಡಿ

ವಿಶ್ವಕಪ್ ಜಯಿಸಿದ ನಾಯಕರಿವರು