ಮಹಿಳಾ ವಿಶ್ವಕಪ್ ತಂಡ ಪ್ರತಿನಿಧಿಸಿದ್ದ ಸೌತ್ಆಫ್ರಿಕಾ ಆಟಗಾರ್ತಿ ಭೀಕರ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಕೇವಲ 26ರ ಹರೆಯರ ಪ್ರತಿಭಾನ್ವಿತ ಆಟಗಾರ್ತಿ ನಿಧನಕ್ಕೆ ಕ್ರಿಕೆಟ್ ಸೌತ್ಆಫ್ರಿಕಾ ಸಂತಾಪ ಸೂಚಿಸಿದೆ.
ಜೋಹಾನ್ಸ್‌ಬರ್ಗ್(ಏ.08): ಸೌತ್ ಆಫ್ರಿಕಾ ಮಹಿಳಾ ತಂಡ ಆಟಗಾರ್ತಿ, 2013ರ ವಿಶ್ವಕಪ್ ಟೂರ್ನಿ ಪ್ರತಿನಿಧಿಸಿದ್ದ ಎಲ್ರಿಸಾ ಥೆನಿಸೆನ್ ಫೌರಿ(26) ಹಾಗೂ ಮಗು ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. 2013ರ ವಿಶ್ವಕಪ್ ಬಳಿಕ ಕೋಚಿಂಗ್‌ನತ್ತ ವಾಲಿದ್ದ ಫೌರಿ ಖಾಸಗಿ ಕಾರ್ಯಕ್ರಮಕ್ಕಾಗಿ ತೆರಳುತ್ತಿದ್ದ ವೇಳೆ, ಸ್ಟಿಲ್‌ಫೌಂಟೈನ್ ಬಳಿ ಭೀಕರ ಕಾರು ಅಪಘಾತ ಸಂಭವಿಸಿದೆ.
ಇದನ್ನೂ ಓದಿ: 2021ರ ಏಕದಿನ ವಿಶ್ವಕಪ್: ಭಾರತಕ್ಕಿಲ್ಲ ನೇರ ಪ್ರವೇಶ?
ಕಾರಿನಲ್ಲಿ ಫೌರಿ ಹಾಗೂ ಆಕೆಯ ಮಗು ಇಬ್ಬರೇ ಪ್ರಯಾಣಿಸುತ್ತಿದ್ದರು. ಅಪಘಾತದ ತೀವ್ರತೆಗೆ ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸೌತ್ಆಫ್ರಿಕಾ ಪರ 3 ಏಕದಿನ ಹಾಗೂ 1 ಟಿ20 ಪಂದ್ಯ ಆಡಿದ್ದ ಫೌರಿ, ಇಂಜುರಿಯಿಂದ ತಂಡದಿಂದ ಹೊರಗುಳಿದರು. 2013ರಲ್ಲಿ ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ಅದ್ಬುತ ಪ್ರದರ್ಶನ ನೀಡಿ ಮಿಂಚಿದ್ದರು.
ಇದನ್ನೂ ಓದಿ:10 ಮಂದಿ ಡಕೌಟ್ - ತಂಡ 10ಕ್ಕೆ ಆಲೌಟ್!
ಫೌರಿ ನಿಧನಕ್ಕೆ ಕ್ರಿಕೆಟ್ ಸೌತ್ ಆಫ್ರಿಕಾ ಸಂತಾಪ ಸೂಚಿಸಿದೆ. ಇಷ್ಟೇ ಅಲ್ಲ ಕಾರು ಅಪಘಾತಕ್ಕೆ ಆತಂಕ ವ್ಯಕ್ತಪಡಿಸಿದೆ. ಫೌರಿ ಪತಿ, ಕುಟುಂಬಸ್ಥರು ಹಾಗೂ ಸ್ನೇಹಿತರಿಗೆ ದುಃಖ ಭರಿಸೋ ಶಕ್ತಿ ಭಗವಂತ ನೀಡಲಿ ಎಂದು ಸೌತ್ಆಫ್ರಿಕಾ ಕ್ರಿಕೆಟ್ ಮಂಡಳಿ ಪ್ರಕಟಣೆಯಲ್ಲಿ ಹೇಳಿದೆ.
