ಆಸೀಸ್‌ನ ಚಾನೆಲ್ ನೈನ್ ನ್ಯೂಸ್ ವಾಹಿನಿಯ ವರದಿಗಾರ, ನಿಲ್ದಾಣದಿಂದ ನಿರ್ಗಮಿಸುತ್ತಿದ್ದ ಡುಪ್ಲೇಸಿಸ್ ಅವರ ಸಂದರ್ಶನಕ್ಕೆ ಎಡತಾಕಿದ್ದಾರೆ. ಈ ವೇಳೆ ತಂಡದೊಟ್ಟಿಗೆ ಇದ್ದ ಅಂಗರಕ್ಷಕರು ವರದಿಗಾರನನ್ನು ತಳ್ಳಿದ್ದು ಮೈಕ್ ಎಸೆದಿದ್ದಾರೆ.
ಅಡಿಲೇಡ್(ನ.21): ದಕ್ಷಿಣ ಆಫ್ರಿಕಾ ತಂಡದ ಆಟಗಾರ ಫಾಫ್ ಡುಪ್ಲೇಸಿಸ್ ಅವರ ಸಂದರ್ಶನಕ್ಕೆ ತಂಡದ ಅಂಗರಕ್ಷಕರು ಅಡ್ಡಿಪಡಿಸಿದಲ್ಲದೇ ವರದಿಗಾರನ ಹಲ್ಲೆಗೆ ಮುಂದಾದ ಘಟನೆ ವಿಮಾನ ನಿಲ್ದಾಣದಲ್ಲಿ ನಡೆದಿದೆ.
ಹೋಬಾರ್ಟ್ನಲ್ಲಿ ನಡೆದಿದ್ದ ಆಸ್ಟ್ರೇಲಿಯಾ ವಿರುದ್ಧದ 2ನೇ ಟೆಸ್ಟ್ ಪಂದ್ಯದ ವೇಳೆ ಡುಪ್ಲೇಸಿಸ್ ಚೆಂಡನ್ನು ವಿರೂಪಗೊಳಿಸಿದ ಆರೋಪ ಹೊತ್ತಿದ್ದರು. ಈ ವಿಷಯವಾಗಿ ಮಾತನಾಡಲು ಆಸೀಸ್ನ ಚಾನೆಲ್ ನೈನ್ ನ್ಯೂಸ್ ವಾಹಿನಿಯ ವರದಿಗಾರ, ನಿಲ್ದಾಣದಿಂದ ನಿರ್ಗಮಿಸುತ್ತಿದ್ದ ಡುಪ್ಲೇಸಿಸ್ ಅವರ ಸಂದರ್ಶನಕ್ಕೆ ಎಡತಾಕಿದ್ದಾರೆ. ಈ ವೇಳೆ ತಂಡದೊಟ್ಟಿಗೆ ಇದ್ದ ಅಂಗರಕ್ಷಕರು ವರದಿಗಾರನನ್ನು ತಳ್ಳಿದ್ದು ಮೈಕ್ ಎಸೆದಿದ್ದಾರೆ. ಇದೆಲ್ಲಾ ಕಣ್ಣೆದುರೆ ನಡೆದಿದ್ದರೂ ಡುಪ್ಲೇಸಿಸ್ ಮಾತ್ರ ಹಸನ್ಮುಖಿಯಾಗಿ ನಗುತ್ತಲೇ ಹೊರಬಿದ್ದರು.
