ಟಾಸ್ ಗೆದ್ದ ಆಫ್ರಿಕಾ ಬ್ಯಾಟಿಂಗ್ ಆಯ್ಕೆ; ಟೀಂ ಇಂಡಿಯಾ ಪಡೆ ಹೀಗಿದೆ

South Africa opt to bat
Highlights

ಭಾರತೀಯ ಬೌಲರ್ ಹಾಗೂ ಆಫ್ರಿಕಾ ಬ್ಯಾಟ್ಸ್'ಮನ್'ಗಳ ನಡುವಿನ ಕಾದಾಟ ಎನ್ನಲಾಗುತ್ತಿರುವ ಸರಣಿಯಲ್ಲಿ ಉಭಯ ತಂಡಗಳು ಜಯದೊಂದಿಗೆ ಶುಭಾರಂಭ ಮಾಡುವ ನಿರೀಕ್ಷೆಯಲ್ಲಿವೆ.

ಡರ್ಬನ್(ಫೆ.01): ಇಂದಿನಿಂದ ಆರಂಭವಾಗಿರುವ ಭಾರತ- ದಕ್ಷಿಣ ಆಫ್ರಿಕಾ ನಡುವಿನ 6 ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಬ್ಯಾಟಿಂಗ್ ಆಯ್ದುಕೊಂಡಿದೆ.

ಭಾರತೀಯ ಬೌಲರ್ ಹಾಗೂ ಆಫ್ರಿಕಾ ಬ್ಯಾಟ್ಸ್'ಮನ್'ಗಳ ನಡುವಿನ ಕಾದಾಟ ಎನ್ನಲಾಗುತ್ತಿರುವ ಸರಣಿಯಲ್ಲಿ ಉಭಯ ತಂಡಗಳು ಜಯದೊಂದಿಗೆ ಶುಭಾರಂಭ ಮಾಡುವ ನಿರೀಕ್ಷೆಯಲ್ಲಿವೆ. ತವರಿನಲ್ಲಿ ಬಲಿಷ್ಠವಾಗಿರುವ ಆಫ್ರಿಕಾಗೆ ವಿರಾಟ್ ಪಡೆ ಸೆಡ್ಡು ಹೊಡೆಯಲು ಸಿದ್ದವಾಗಿದೆ. ಬೌಲಿಂಗ್ ಹಾಗೂ ಬ್ಯಾಟಿಂಗ್'ನಲ್ಲಿ ಮೇಲ್ನೋಟಕ್ಕೆ ಬಲಿಷ್ಠವೆನಿಸಿಕೊಂಡಿರುವ ಆಫ್ರಿಕಾ ಪಡೆಯನ್ನು ಟೀಂ ಇಂಡಿಯಾ ಹೇಗೆ ನಿಯಂತ್ರಿಸಲಿದೆ ಎಂದು ಕಾದು ನೋಡಬೇ ಇನ್ನು ಕಳೆದೆರಡು ವರ್ಷಗಳಿಂದ ಏಕದಿನ ಸರಣಿಯಲ್ಲಿ ಅಜೇಯ ಓಟ ಮುಂದುವರೆಸಿರುವ ಟೀಂ ಇಂಡಿಯಾ ಅದೇ ಫಾರ್ಮ್ ಮುಂದುವರೆಸುವ ಕಾತರದಲ್ಲಿದೆ.

ಟೀಂ ಇಂಡಿಯಾ: ರೋಹಿತ್, ಧವನ್, ರಹಾನೆ, ಧೋನಿ, ಜಾಧವ್, ಪಾಂಡ್ಯ, ಭುನವನೇಶ್ವರ್, ಕುಲ್ದೀಪ್, ಬುಮ್ರಾ, ಚಾಹಲ್.

ದಕ್ಷಿಣ ಆಫ್ರಿಕಾ: ಆಮ್ಲಾ, ಡಿಕಾಕ್, ಡುಪ್ಲೆಸಿಸ್, ಮಾರ್ಕ್'ರಮ್, ಡುಮಿನಿ, ಮಿಲ್ಲರ್, ಮೋರಿಸ್, ಫೆಲುಕ್ವೆನೋ, ರಬಾಡ, ಮಾರ್ಕೆಲ್, ತಾಹಿರ್.

 

loader