ಟೆಸ್ಟ್ ಶ್ರೇಯಾಂಕದಲ್ಲಿ ಅಶ್ವಿನ್ ಹಿಂದಿಕ್ಕಿದ ರಬಾಡ

First Published 12, Oct 2017, 6:01 PM IST
South Africa Kagiso Rabada Overtakes Ravichandran Ashwin
Highlights

ಇನ್ನು ಮೊದಲ ಸ್ಥಾನದಲ್ಲಿ ಜೇಮ್ಸ್ ಆ್ಯಂಡರ್'ಸನ್ ಮುಂದುವರೆದಿದ್ದರೆ, ಜಡೇಜಾ ಎರಡನೇ ಸ್ಥಾನದಲ್ಲಿ ಭದ್ರವಾಗಿದ್ದಾರೆ.

ದುಬೈ(ಅ.12): ದಕ್ಷಿಣ ಆಫ್ರಿಕಾದ ವೇಗಿ ಕಗಿಸೋ ರಬಾಡ ಐಸಿಸಿ ಟೆಸ್ಟ್ ಬೌಲರ್‌ಗಳ ಶ್ರೇಯಾಂಕ ಪಟ್ಟಿಯಲ್ಲಿ 2 ಸ್ಥಾನಗಳ ಜಿಗಿತ ಕಂಡಿದ್ದು, 3ನೇ ಸ್ಥಾನಕ್ಕೇರಿದ್ದಾರೆ. ಈ ಮೂಲಕ ಟೀಂ ಇಂಡಿಯಾದ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರನ್ನು ಹಿಂದಿಕ್ಕಿದ್ದಾರೆ.

ಬಾಂಗ್ಲಾ ವಿರುದ್ಧ ಬ್ಲೂಮ್ಟೇನ್‌'ನಲ್ಲಿ ನಡೆದ ಟೆಸ್ಟ್‌ನಲ್ಲಿ ಒಟ್ಟು 10 ವಿಕೆಟ್ ಕಬಳಿಸಿದ ರಬಾಡ, ತಮ್ಮ ವೃತ್ತಿಬದುಕಿನ ಶ್ರೇಷ್ಠ ಶ್ರೇಯಕಕ್ಕೇರಿದ ಸಾಧನೆ ಮಾಡಿದ್ದಾರೆ. ಒಟ್ಟು 876 ಅಂಕಗಳೊಂದಿಗೆ ರಬಾಡ ಮೂರನೇ ಸ್ಥಾನಕ್ಕೆ ಲಗ್ಗೆಯಿಟ್ಟರೆ, ಅಶ್ವಿನ್ 852 ಅಂಕಗಳೊಂದಿಗೆ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳುವಂತಾಗಿದೆ

ಇದೀಗ ರಬಾಡ ಟೆಸ್ಟ್ ಕ್ರಿಕೆಟ್‌'ನ ಶ್ರೇಷ್ಠ ಸ್ಪಿನ್ನರ್‌'ಗಳಾದ ರವಿಚಂದ್ರನ್ ಅಶ್ವಿನ್ ಹಾಗೂ ರಂಗನಾ ಹೆರಾತ್‌'ರನ್ನು ಹಿಂದಿಕ್ಕಿದ್ದಾರೆ.

ಇನ್ನು ಮೊದಲ ಸ್ಥಾನದಲ್ಲಿ ಜೇಮ್ಸ್ ಆ್ಯಂಡರ್'ಸನ್ ಮುಂದುವರೆದಿದ್ದರೆ, ಜಡೇಜಾ ಎರಡನೇ ಸ್ಥಾನದಲ್ಲಿ ಭದ್ರವಾಗಿದ್ದಾರೆ.

loader